demonetization

ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಜ.11 ರಿಂದ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶ
ನೋಟು ನಿಷೇಧದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಉಂಟಾದ ಸಮಸ್ಯೆಗಳಿಗೆ ಧ್ವನಿಯಾಗುವುದಕ್ಕಾಗಿ ಕಾಂಗ್ರೆಸ್ ನವದೆಹಲಿಯ ತಾಲ್ಕಟೋರಾ ಸ್ಟೇಡಿಯಂ ನಲ್ಲಿ ಜನವೇದನೆ( ಜನ್ ವೇದ್ನಾ) ಸಮಾವೇಶ ಹಮ್ಮಿಕೊಂಡಿದೆ

ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ರಾಹುಲ್ ಮೋಜು ಮಾಡಲು ರಜೆಗೆ ತೆರಳುತ್ತಿರಲಿಲ್ಲ: ಬಿಜೆಪಿ
ನೋಟು ನಿಷೇಧ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು. ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಮೋಜು ಮಾಡಲು ರಜೆಗೆ ತೆರಳುತ್ತಿರಲಿಲ್ಲ ಎಂದು ಹೇಳಿದೆ.

ನೋಟು ನಿಷೇಧದಿಂದ ಜಿಡಿಪಿಗೆ ಹೊಡೆತವಾಗಿಲ್ಲ ಎಂದು ಗೃಹ ಸಚಿವರೊಬ್ಬರೇ ಹೇಳುತ್ತಿದ್ದಾರೆ: ಪಿ ಚಿದಂಬರಂ
ಎನ್ ಡಿ ಎ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಜಿಡಿಪಿ ಮೇಲೆ ಹೊಡೆತವಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಹೊರತು ಪಡಿಸಿ ವಿಶ್ವದ ಯಾರೊಬ್ಬರೂ ಹೇಳಿಲ್ಲ ಎಂದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

2019ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಮಾತ್ರ ಅಚ್ಛೇ ದಿನ್ ಬರುತ್ತದೆ: ರಾಹುಲ್ ಗಾಂಧಿ
2019ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದೇಶದ ಜನರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮತ್ತೆ ಖೋಟಾ ನೋಟು ಹಾವಳಿ; ದೆಹಲಿಯಲ್ಲಿ 6.1 ಲಕ್ಷ ರು.ಮೌಲ್ಯದ ನಕಲಿ ನೋಟು ವಶಕ್ಕೆ!
ಖೋಟಾ ನೋಟು ದಂಧೆ ಕೋರರು ಹೊಸ ನೋಟುಗಳನ್ನೂ ಕೂಡ ನಕಲಿಯಾಗಿ ಮುದ್ರಿಸಿ ಚಲಾವಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ನೋಟು ನಿಷೇಧ ನಂತರದ 3-4 ಲಕ್ಷ ಕೋಟಿ ರು. ಠೇವಣಿಗಳಲ್ಲಿ ತೆರಿಗೆ ವಂಚನೆಯ ಶಂಕೆ!
ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ಈ ವರೆಗೂ ಸುಮಾರು 14 ಲಕ್ಷ ಕೋಟಿಗಳಷ್ಟು ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಜಮೆಯಾಗಿದ್ದು, ಈ ಪೈಕಿ 3-4 ಲಕ್ಷ ಕೋಟಿ ವಹಿವಾಟುಗಳು ಶಂಕಿತ ವಹಿವಾಟು ಎಂದು ಗುರುತಿಸಲಾಗಿದೆ.

ಬ್ಯಾಂಕಿಗೆ ಜಮೆಯಾಗಿದ್ದೆಲ್ಲಾ ಬಿಳಿ ಹಣವಲ್ಲ; ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿ
ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಜಮೆಯಾದ ಎಲ್ಲ ಹಣವೂ ಬಿಳಿ ಹಣವಲ್ಲ ಎಂದು ಹೇಳುವ ಮೂಲಕ ಜಮೆಯಾದ ಕಪ್ಪುಹಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಫೆ.28ರ ನಂತರ ಬ್ಯಾಂಕ್ ಖಾತೆಗೆ ಪ್ಯಾನ್ ಕಡ್ಡಾಯ; ಶೂನ್ಯ ಮೊತ್ತದ ಖಾತೆ, ಜನ್ ಧನ್ ಖಾತೆಗೆ ವಿನಾಯಿತಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್ ಖಾತೆದಾರರಿಂದ ಪ್ಯಾನ್ ಕಾರ್ಡ್ ಪಡೆಯುವಂತೆ ಆದೇಶ ನೀಡಿರುವ ಕೇಂದ್ರ ಸರ್ಕಾರ, ತನ್ನ ಆದೇಶದಿಂದ ಶೂನ್ಯ ಮೊತ್ತದ ಖಾತೆ ಹಾಗೂ ಜನ ಧನ್ ಖಾತೆಗಳಿಗೆ ವಿನಾಯಿತಿ ನೀಡಿದೆ.

ನೋಟು ನಿಷೇಧ: ಶೇ.35 ರಷ್ಟು ಉದ್ಯೋಗ ಕಡಿತ, ಶೇ.50 ರಷ್ಟು ಆದಾಯ ಕುಸಿತ!
500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯ ನಿರ್ಧಾರದ ಮೊದಲ 34 ದಿನಗಳಲ್ಲಿ ಸಣ್ಣ- ಅತಿ ಸಣ್ಣ ಉದ್ಯಮ (ಕೈಗಾರಿಕೆ) ಗಳಿಗೆ ಅತಿ ಹೆಚ್ಚು ಹೊಡೆತ ಬಿದ್ದಿದೆ.

