ದೇಶ

ಮತ್ತೆ ಖೋಟಾ ನೋಟು ಹಾವಳಿ; ದೆಹಲಿಯಲ್ಲಿ 6.1 ಲಕ್ಷ ರು.ಮೌಲ್ಯದ ನಕಲಿ ನೋಟು ವಶಕ್ಕೆ!

ಖೋಟಾ ನೋಟು ದಂಧೆ ಕೋರರು ಹೊಸ ನೋಟುಗಳನ್ನೂ ಕೂಡ ನಕಲಿಯಾಗಿ ಮುದ್ರಿಸಿ ಚಲಾವಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಮತ್ತೆ ಖೋಟಾ ನೋಟು ಹಾವಳಿ; ದೆಹಲಿಯಲ್ಲಿ 6.1 ಲಕ್ಷ ರು.ಮೌಲ್ಯದ ನಕಲಿ ನೋಟು ವಶಕ್ಕೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಕಪ್ಪುಹಣ ನಿಯಂತ್ರಣ ಹಾಗೂ ಖೋಟಾ ನೋಟು ಸಮಸ್ಯೆ ನಿಯಂತ್ರಿಸಲು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ಹೊಸ ನೋಟುಗಳನ್ನು ಚಲಾವಣೆಗೆ ತಂದಿರುವಂತೆಯೇ ಇತ್ತ ಖೋಟಾ ನೋಟು ದಂಧೆ  ಕೋರರು ಹೊಸ ನೋಟುಗಳನ್ನೂ ಕೂಡ ನಕಲಿಯಾಗಿ ಮುದ್ರಿಸಿ ಚಲಾವಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ದೆಹಲಿಯ ಬಿಂಡಾಪುರದಲ್ಲಿ ನಕಲಿ ನೋಟು ನೋಟು ಮುದ್ರಿಸುತ್ತಿದ್ದ  ಇಬ್ಬರು ಗ್ರಾಫಿಕ್ ಡಿಸೈನರ್ ಗಳನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಸಮಾರು 6.5 ಲಕ್ಷ ಮೌಲ್ಯದ ನೋಟುಗಳನ್ನು  ಅಧಿಕಾರಿಗಳು ವಶಪಡಿಸಿಕೊಂಡಿದ್ದು. ಈ ಪೈಕಿ 6.1 ಲಕ್ಷ ನೋಟುಗಳು ನಕಲಿ ನೋಟುಗಳು ಎಂದು ತಿಳಿದುಬಂದಿದೆ. ಇದೇ ವೇಳೆ ಬಂಧಿತರು ಹೇಳಿಕೊಂಡಿರುವಂತೆ ಸುಮಾರು 20 ಸಾವಿರ ರು. ಮೌಲ್ಯದ ನಕಲಿ ನೋಟುಗಳನ್ನು  ಚಲಾವಣೆ ಮಾಡಿರುವುದಾಗಿ ಹೇಳಿದ್ದಾರೆ.

ಪೊಲೀಸ್ ಮೂಲಗಳು ತಿಳಿಸಿರುವಂತೆ ಬಂಧಿತರಿಬ್ಬರೂ ಸ್ನಾತಕೋತ್ತರ ಪದವೀಧರರಾಗಿದ್ದು, ಫೋಟೋಗಳನ್ನು ಎಡಿಟ್ ಮಾಡುವ ವಿವಿಧ ಸಾಫ್ಟ್ ವೇರ್ ಗಳನ್ನು ಬಳಕೆ ಮಾಡಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಈ ಬಗ್ಗೆ  ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ದಾಳಿ ಮಾಡಿ ಇಬ್ಬರನ್ನೂ ಬಂಧಿಸಲಾಗಿದೆ. ಅಂತೆಯೇ ಮುದ್ರಣಕ್ಕೆ ಬಳಕೆ ಮಾಡಲಾಗುತ್ತಿದ್ದ ಕಂಪ್ಯೂಟರ್, ಮುದ್ರಣದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಡಿಸಿಪಿ  ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.