ಫೆ.28ರ ನಂತರ ಬ್ಯಾಂಕ್ ಖಾತೆಗೆ ಪ್ಯಾನ್ ಕಡ್ಡಾಯ; ಶೂನ್ಯ ಮೊತ್ತದ ಖಾತೆ, ಜನ್ ಧನ್ ಖಾತೆಗೆ ವಿನಾಯಿತಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್ ಖಾತೆದಾರರಿಂದ ಪ್ಯಾನ್ ಕಾರ್ಡ್ ಪಡೆಯುವಂತೆ ಆದೇಶ ನೀಡಿರುವ ಕೇಂದ್ರ ಸರ್ಕಾರ, ತನ್ನ ಆದೇಶದಿಂದ ಶೂನ್ಯ ಮೊತ್ತದ ಖಾತೆ ಹಾಗೂ ಜನ ಧನ್ ಖಾತೆಗಳಿಗೆ ವಿನಾಯಿತಿ ನೀಡಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್ ಖಾತೆದಾರರಿಂದ ಪ್ಯಾನ್ ಕಾರ್ಡ್ ಪಡೆಯುವಂತೆ ಆದೇಶ ನೀಡಿರುವ ಕೇಂದ್ರ ಸರ್ಕಾರ, ತನ್ನ ಆದೇಶದಿಂದ ಶೂನ್ಯ ಮೊತ್ತದ ಖಾತೆ ಹಾಗೂ ಜನ ಧನ್ ಖಾತೆಗಳಿಗೆ ವಿನಾಯಿತಿ ನೀಡಿದೆ.
ಇದೇ ಫೆಬ್ರವರಿ 28ರ ನಂತರ ಎಲ್ಲ ಬಗೆಯ ಬ್ಯಾಂಕ್ ಖಾತೆದಾರರಿಂದ ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಪಡೆಯುವಂತೆ ಸೂತನೆ ನೀಡಿದ್ದು, ಈ ನಿಯಮದಿಂದ ಜನಧನ್ ಖಾತೆ ಹಾಗೂ ಶೂನ್ಯ ಮೊತ್ತದ ಖಾತೆಗಳಿಗೆ ವಿನಾಯಿತಿ ನೀಡಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆಗೆ ತಿದ್ದಪಡಿ ತಂದಿದ್ದು, ಈ ಹಿಂದೆ ಖಾತೆಗಳಿಗೆ ಪ್ಯಾನ್ ಸಂಖ್ಯೆ ಅಥವಾ ಫಾರ್ಮ್ 60 ಸಲ್ಲಿಕೆ ಮಾಡಿರದಿದ್ದರೆ, ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಖಾತೆದಾರರಿಂದ ಫೆಬ್ರವರಿ 28ರೊಳಗೆ ಪ್ಯಾನ್ ಸಂಖ್ಯೆ ಅಥವಾ ಫಾರ್ಮ್ 60 ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಇದಕ್ಕಾಗಿ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈ ವರೆಗೆ ಪ್ಯಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಅದನ್ನು ಸಲ್ಲಿಸಬೇಕು ಎಂದು ಹೇಳಿದೆ. ಆದರೆ ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬಿಎಸ್'ಬಿಡಿಎ) ಗಳಿಗೆ ಅನ್ವಯಿಸುವುದಿಲ್ಲ. ಬಿಎಸ್'ಬಿಡಿಎ ಎಂಬುದು ಜನಧನವನ್ನೂ ಒಳಗೊಂಡ ಶೂನ್ಯ ಮೊತ್ತದ ಖಾತೆಗಳಾಗಿದ್ದು, ಜನ ಸಾಮಾನ್ಯರ ಸರಳ ಬ್ಯಾಂಕಿಂಗ್ ಸೇವೆ ಒದಗಿಸಲು ಈ ಖಾತೆಗಳನ್ನು ತೆರೆಯಲಾಗುತ್ತದೆ. ಇದರಡಿ ಎಟಿಎಂ ಕಾರ್ಡ್, ಮಾಸಿಕ ಸ್ಟೇಟ್'ಮೆಂಟ್ ಹಾಗೂ ಚೆಕ್ ಬುಕ್ ಉಚಿತವಾಗಿ ದೊರೆಯುತ್ತದೆ.
ಕಳೆದ ತಿಂಗಳಷ್ಟೇ ಆರ್ ಬಿಐ ಹಣ ಹಿಂಪಡೆತಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ ಎಂದು ಹೇಳಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


