ನೋಟು ನಿಷೇಧ: ಶೇ.35 ರಷ್ಟು ಉದ್ಯೋಗ ಕಡಿತ, ಶೇ.50 ರಷ್ಟು ಆದಾಯ ಕುಸಿತ!
500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯ ನಿರ್ಧಾರದ ಮೊದಲ 34 ದಿನಗಳಲ್ಲಿ ಸಣ್ಣ- ಅತಿ ಸಣ್ಣ ಉದ್ಯಮ (ಕೈಗಾರಿಕೆ) ಗಳಿಗೆ ಅತಿ ಹೆಚ್ಚು ಹೊಡೆತ ಬಿದ್ದಿದೆ.

Published On :
ನವದೆಹಲಿ: 500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯ ನಿರ್ಧಾರದ ಮೊದಲ 34 ದಿನಗಳಲ್ಲಿ ಸಣ್ಣ- ಅತಿ ಸಣ್ಣ ಉದ್ಯಮ (ಕೈಗಾರಿಕೆ) ಗಳಿಗೆ ಅತಿ ಹೆಚ್ಚು ಹೊಡೆತ ಬಿದ್ದಿದೆ. ಶೇ.35 ರಷ್ಟು ಉದ್ಯೋಗಗಳು ಕಡಿತವಾಗಿದ್ದು, ಆದಾಯದಲ್ಲಿ ಶೇ.50 ರಷ್ಟು ಇಳಿಕೆಯಾಗಿದೆ ಎಂದು ಉತ್ಪಾದಕರ ಒಕ್ಕೂಟ ನಡೆಸಿರುವ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ.
ಅಖಿಲ ಭಾರತ ಉತ್ಪಾದಕರ ಸಂಘ ನಡೆಸಿರುವ ಸಮೀಕ್ಷೆಯ ವರದಿಯನ್ನು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ್ದು, ಉದ್ಯೋಗ ಹಾಗೂ ಆದಾಯಗಳ ಮೇಲೆ ನೋಟು ನಿಷೇಧದಿಂದ ಉಂಟಾದ ಪರಿಣಾಮದ ಚಿತ್ರಣ ನೀಡಿದೆ. ಸುಮಾರು 3 ಲಕ್ಷ ಸಣ್ಣ-ಅತಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು, ರಫ್ತು, ಉತ್ಪಾದನೆಯನ್ನು ಪ್ರತಿನಿಧಿಸುವ ಎಐಎಂಒ ವರದಿಯಲ್ಲಿ ನೋಟು ನಿಷೇಧದಿಂದ ಮುಂದೆ ಉಂಟಾಗಬಹುದಾದ ಪರಿಣಾಮವನ್ನೂ ಅಂದಾಜಿಸಲಾಗಿದ್ದು, 2017 ರ ಮಾರ್ಚ್ ವೇಳೆಗೆ ಸಣ್ಣ-ಅತಿ ಸಣ್ಣ ಉದ್ದಿಮೆಗಳ ಉದ್ಯೋಗಗಳಲ್ಲಿ ಶೇ.60 ರಷ್ಟು ಕಡಿತ ಹಾಗೂ ಶೇ.55 ರಷ್ಟು ಆದಾಯ ಕಡಿತ ಉಂಟಾಗಲಿದೆ ಎಂದು ಹೇಳಿದೆ.
ನೋಟು ನಿಷೇಧದಿಂದ ಸಣ್ಣ-ಅತಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಅತಿ ಹೆಚ್ಚು ಸಮಸ್ಯೆಗೆ ಸಿಲುಕಿದ್ದು, ನ.8 ರ ನಂತರ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಹೊಡೆತ ಬಿದ್ದಿದೆ ಎಂದು ಎಐಎಂಒ ಹೇಳಿದೆ. ನೋಟು ಅಮಾನ್ಯದ ನಿರ್ಧಾರ ಘೋಷಣೆಯಾದ ಬಳಿಕ ಎಐಎಂಒ ಪ್ರಕಟಿಸಿರುವ ಮೂರನೇ ಸಮೀಕ್ಷಾ ವರದಿ/ ಅಧ್ಯಯನ ವರದಿ ಇದಾಗಿದ್ದು, ನೋಟು ನಿಷೇಧದ ನಿರ್ಧಾರದಿಂದ ಉಂಟಾದ ಪರಿಣಾಮಗಳ ಬಗ್ಗೆ ಸದ್ಯದಲ್ಲೇ ಮತ್ತೊಂದು ವರದಿ ಪ್ರಕಟವಾಗಲಿದೆ.
ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಯೋಜನೆಗಳನ್ನು ನಿರ್ವಹಿಸುತ್ತಿದ್ದ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಲ್ಲಿ ಶೇ.35 ರಷ್ಟು ಉದ್ಯೋಗ ಕಡಿತವಾಗಿದ್ದು, ಶೇ.45 ರಷ್ಟು ಆದಾಯ ಕುಸಿದಿದೆ. ಮಾರ್ಚ್ ವೇಳೆಗೆ ಉದ್ಯೋಗ ಹಾಗೂ ಆದಾಯ ಕುಸಿತ ಪ್ರಮಾಣ ಶೇ.40 ರಷ್ಟಾಗಲಿದೆ, ರಫ್ತು ಚಟುವಟಿಕೆಗಳಲ್ಲಿ ನಿರತವಾಗಿರುವ ಕಂಪನಿಗಳಲ್ಲಿ ಶೇ.30 ರಷ್ಟು ಕೆಲಸಗಳು ಖಾಲಿಯಾಗಿದ್ದರೆ ಶೇ.40 ರಷ್ಟು ಆದಾಯ ಕುಸಿದಿದ್ದು ಮಾರ್ಚ್ ವೇಳೆಗೆ ಕ್ರಮವಾಗಿ ಶೇ.35 ಹಾಗೂ ಶೇ.45 ರಷ್ಟಾಗಲಿದೆ ಎಂದು ಎಐಎಂಒ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


