ಪ್ರಧಾನ ಸುದ್ದಿ

ನೋಟು ನಿಷೇಧ ನಂತರದ 3-4 ಲಕ್ಷ ಕೋಟಿ ರು. ಠೇವಣಿಗಳಲ್ಲಿ ತೆರಿಗೆ ವಂಚನೆಯ ಶಂಕೆ!

ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ಈ ವರೆಗೂ ಸುಮಾರು 14 ಲಕ್ಷ ಕೋಟಿಗಳಷ್ಟು ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಜಮೆಯಾಗಿದ್ದು, ಈ ಪೈಕಿ 3-4 ಲಕ್ಷ ಕೋಟಿ ವಹಿವಾಟುಗಳು ಶಂಕಿತ ವಹಿವಾಟು ಎಂದು ಗುರುತಿಸಲಾಗಿದೆ.

ನೋಟು ನಿಷೇಧ ನಂತರದ 3-4 ಲಕ್ಷ ಕೋಟಿ ರು. ಠೇವಣಿಗಳಲ್ಲಿ ತೆರಿಗೆ ವಂಚನೆಯ ಶಂಕೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಕಳೆದ ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ಈ ವರೆಗೂ ಸುಮಾರು 14 ಲಕ್ಷ ಕೋಟಿಗಳಷ್ಟು ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಜಮೆಯಾಗಿದ್ದು, ಈ  ಪೈಕಿ 3-4 ಲಕ್ಷ ಕೋಟಿ ವಹಿವಾಟುಗಳು ಶಂಕಿತ ವಹಿವಾಟು ಎಂದು ಗುರುತಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ ನೋಟುನಿಷೇಧದ ಬಳಿಕದ 50 ದಿನಗಳ ಅಂತರದಲ್ಲಿ ದೇಶಾದ್ಯಂತ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 14 ಲಕ್ಷ ಕೋಟಿ ಹಣ ಜಮೆಯಾಗಿದ್ದು, ಈ ಪೈಕಿ 3 -4 ಲಕ್ಷ ಕೋಟಿ ವಹಿವಾಟಿನ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಈ ಅಪಾರ ಪ್ರಮಾಣದ ಹಣಕ್ಕೆ ಪೂರಕ ದಾಖಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಈ ಹಣದ ಮಾಲೀಕರಿಗೆ ವಿವರ ಕೋರಿ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ನೋಟು ನಿಷೇಧ ಬಳಿಕದ 50 ದಿನಗಳ ವಹಿವಾಟಿಗೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಜಾರಿ ನಿರ್ದೇಶನಾಲಯ ದತ್ತಾಂಶ ಸಂಗ್ರಹ ಮಾಡಲಾಗಿದ್ದು, ಈ ಅಂಶಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಈ  ದಾಖಲೆಗಳ ಪರಿಶೀಲನೆ ವೇಳೆ ಹಲವು ಮಾಹಿತಿ ಲಭ್ಯವಾಗಿದ್ದು, ಸುಮಾರು3-4 ಲಕ್ಷ ಕೋಟಿ ಹಣದ ವಹಿವಾಟಿನ ಮೇಲೆ ಶಂಕೆ ವ್ಯಕ್ತವಾಗಿದೆ. ನೋಟು ನಿಷೇಧ ಬಳಿಕ ಸುಮಾರು 60 ಲಕ್ಷ ಖಾತೆಗಳಲ್ಲಿ 7.34 ಲಕ್ಷ ಕೋಟಿ ಹಣ  ಜಮೆಯಾಗಿದ್ದು, ಈ ಪೈಕಿ 3-4 ಲಕ್ಷ ಕೋಟಿ ಹಣದ ವಹಿವಾಟು ಶಂಕಾಸ್ಪದವಾಗಿದೆ.

ಹೀಗಾಗಿ ಕಳೆದ ನವೆಂಬರ್ 8ರಿಂದ ಬ್ಯಾಂಕ್ ಖಾತೆಗೆ 2 ಲಕ್ಷಕ್ಕಿಂತ ಅಧಿಕ ಹಣ ಜಮೆ ಮಾಡಿದ ಖಾತೆದಾರರಿಗೆ ನೋಟಿಸ್ ನೀಡಿ ಹಣದ ಮೂಲದ ಕುರಿತು ವಿಚಾರಿಸಲಾಗುತ್ತದೆ. ಈಶಾನ್ಯ ರಾಜ್ಯಗಳಲ್ಲಿ 10,700 ಕೋಟಿ  ರು.ಮೌಲ್ಯದ ಹಳೆಯ ನೋಟುಗಳು ಜಮೆಯಾಗಿದೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು 16 ಸಾವಿರ ಕೋಟಿ ಹಣ ಜಮೆಯಾಗಿದೆ. ನೋಟು ನಿಷೇಧದವರೆಗೂ ನಿಷ್ಕ್ರಿಯವಾಗಿದ್ದ ಕೆಲ ಖಾತೆಗಳಲ್ಲಿ ನೋಟು ನಿಷೇಧ ಬಳಿಕ  ಸುಮಾರು 25 ಸಾವಿರ  ಕೋಟಿ ರು.ಹಣ ಜಮೆಯಾಗಿದೆ. ಸುಮಾರ 80 ಸಾವಿರ ಕೋಟಿ ರು. ಮೌಲ್ಯದ ಹಳೆಯ ನೋಟುಗಳಲ್ಲಿ ಸಾಲ ಮರುಪಾವತಿ ಮಾಡಲಾಗಿದೆ.

ಒಟ್ಟಾರೆ ನೋಟು ನಿಷೇಧ ಬಳಿಕ ವಾಮಮಾರ್ಗದಲ್ಲಿ ಕಪ್ಪುಹಣವನ್ನು ಬ್ಯಾಂಕಿಗೆ ಜಮೆ ಮಾಡುವ ಮೂಲಕ ಖುಷಿಯಿಂದ ಇರುವ ಕಾಳಧನಿಕರಿಗೆ ಮತ್ತೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶಂಕಿತ ವಹಿವಾಟುಗಳ  ಮೇಲೆ ತನಿಖೆ ನಡೆಸಿ ಅಕ್ರಮ ಸಾಬೀತಾದರೆ ಕಠಿಣ ಕ್ರಮ ಹೇರಲು ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.