ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆ
ಪ್ರತಿ ನಿಮಿಷಕ್ಕೆ ವಿಶ್ವಾದ್ಯಂತ ಅಸಂಖ್ಯ ವಿಡಿಯೋಗಳು ಟಿಕ್ ಟಾಕ್ ಗೆ ಅಪ್ಲೋಡ್ ಆಗುತ್ತವೆ. ಅವುಗಳನ್ನು ಪರಿಶೀಲಿಸಲು ತಂಡವೇ ಇರುತ್ತದೆ. ಅವರ ಕೆಲಸ ಸತತವಾಗಿ ವಿಡಿಯೋಗಳನ್ನು ನೋಡುವುದು

ಕ್ಯಾಲಿಫೋರ್ನಿಯ: ಟಿಕ್ ಟಾಕ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ಟಿಕ್ ಟಾಕ್ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ವಿರುದ್ಧವೇ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಇದನ್ನೂ ಓದಿ: ಬಾಲಕಿಯನ್ನು ರೇಪ್ ಮಾಡಿ 4 ತಿಂಗಳ ಗರ್ಭಿಣಿಯಾಗಿಸಿದ ಆರೋಪ: ಟಿಕ್ ಟಾಕ್ ಖ್ಯಾತಿಯ ಭಾರ್ಗವ ಬಂಧನ, ಆತನ ವಿಡಿಯೋಗಳು!
ಕ್ಯಾಂಡಿ ಎನ್ನುವ ಮಹಿಳೆ ದೂರು ನೀಡಿದಾಕೆ. ಆಕೆ ಈ ಹಿಂದೆ ಟಿಕ್ ಟಾಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆ ಸಂದರ್ಭ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಆಗುವ ವಿಡಿಯೊಗಳಲ್ಲಿ ಆಕ್ಷೇಪಾರ್ಹವಾದ ವಿಡಿಯೋಗಳಿಗೆ ನಿರ್ಬಂಧ ಹೇರುವ ಕೆಲಸ ಆಕೆಯದು. ಅದಕ್ಕಾಗಿ ಆಕೆ ಟಿಕ್ ಟಾಕ್ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿತ್ತು.
ದಿನದ 12 ಗಂಟೆಗಳ ಕಾಲ ಟಿಕ್ ಟಾಕ್ ವಿಡಿಯೊಗಳನ್ನು ಸತತವಾಗಿ ನೋಡಬೇಕಿತ್ತು. ಟಿಕ್ ಟಾಕ್ ಗೆ ಜಗತ್ತಿನಾದ್ಯಂತ ಎಷ್ಟು ವಿಡಿಯೊಗಳು ಅಪ್ ಲೋಡ್ ಆಗುತ್ತಿದ್ದವೆಂದರೆ ಏಕಕಾಲಕ್ಕೆ ಎರಡು ಮೂರು ವಿಡಿಯೋಗಳನ್ನು ಆಕೆಯಂತೆ ಅನೇಕ ಉದ್ಯೋಗಿಗಳು ನೋಡಬೇಕಿತ್ತು. ಈ ಸಂದರ್ಭ ಆಕೆಯ ಮಾನಸಿಕ ಆರೋಗ್ಯ ಹದಗೆಟ್ಟಿದ್ದಾಗಿ ಕ್ಯಾಂಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


