ಪಾಕಿಸ್ತಾನ: ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು 'ಟಿಕ್ ಟಾಕರ್' ಬಲಿ
ವಿಡಿಯೋ ಶೂಟಿಂಗ್ ಮಾಡುವಾಗ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 19 ವರ್ಷದ ಟಿಕ್ ಟಾಕರ್ ಬಲಿಯಾಗಿರುವ ಘಟನೆ ಕಬಾಲ್ ನ ತೆಹ್ಸಿಲ್ ನಲ್ಲಿ ನಡೆದಿದೆ.

ಸ್ವಾತ್: ವಿಡಿಯೋ ಶೂಟಿಂಗ್ ಮಾಡುವಾಗ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 19 ವರ್ಷದ ಟಿಕ್ ಟಾಕರ್ ಬಲಿಯಾಗಿರುವ ಘಟನೆ ಕಬಾಲ್ ನ ತೆಹ್ಸಿಲ್ ನಲ್ಲಿ ನಡೆದಿದೆ.
ಟಿಕ್ ಟಾಕ್ ವಿಡಿಯೋ ಮಾಡುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಟಿಕ್ ಟಾಕ್ ನಲ್ಲಿ ತನ್ನ ಹಿಂಬಾಲಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋ ಮಾಡುವಾಗ ಪಿಸ್ತೂಲ್ ನಿಂದ ಹಾರಿದ ಗುಂಡಿಗೆ ಹಮೀದುಲ್ಲಾ ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಬಲ್ ತಹಸಿಲ್‌ನಲ್ಲಿ ಹಮೀದುಲ್ಲಾ ಪ್ರಸಿದ್ಧ ಟಿಕ್‌ಟಾಕ್ ತಾರೆಯಾಗಿದ್ದರು. ಆತ್ಮಹತ್ಯೆ ವಿಡಿಯೋವನ್ನು ಚಿತ್ರೀಕರಿಸಲು ಯೋಜಿಸಿ ಪಿಸ್ತೂಲ್ ವ್ಯವಸ್ಥೆ ಮಾಡಿದರು. ಪಿಸ್ತೂಲ್‌ನಲ್ಲಿ ಇರುವ ಗುಂಡುಗಳ ಬಗ್ಗೆ ತಿಳಿದಿಲ್ಲದ ಅವರು ತಮ್ಮ ಸ್ನೇಹಿತರೊಂದಿಗೆ ಹತ್ತಿರದ ಪರ್ವತಕ್ಕೆ ಹೋದರು ಅವರು ವೀಡಿಯೊವನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


