ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು; ನದಿಯ ದಂಡೆಯ ಮೇಲೆ ಶೂ-ಚಪ್ಪಲಿ, ಮೃತದೇಹದ ಭಾಗಗಳು ಪತ್ತೆ!
ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಖಚಿತಪಡಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ವಾಯುಪಡೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಲಾಗೋಸ್: ನೈಜೀರಿಯಾ ವಾಯುಪಡೆಗೆ ಸೇರಿದ್ದ ಲಘು ವಿಮಾನ ಪತನಗೊಂಡಿದ್ದು 32 ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಖಚಿತಪಡಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ವಾಯುಪಡೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಮಾನ ಬೆನಿನ್ ನಗರದಿಂದ ಲಾಗೋಸ್ಗೆ ತೆರಳುತ್ತಿತ್ತು. ಮೃತಪಟ್ಟ 32 ಜನರಲ್ಲಿ 25 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ನೈಜೀರಿಯಾದ ಕರಾವಳಿ ತೈಲ ಉತ್ಪಾದನಾ ಪ್ರದೇಶವಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಈ ಅವಘಡ ಸಂಭವಿಸಿದೆ.
ವಿಮಾನವು ಸಮೀಪದ ನೌಕಾ ನೆಲೆಯ ಬಳಿಯ ಜೌಗು ಪ್ರದೇಶಕ್ಕೆ ಅಪ್ಪಳಿಸಿದೆ. ವಿಮಾನವು ಬೆನಿನ್ ನಗರದಿಂದ ದೇಶದ ಪ್ರಮುಖ ಆರ್ಥಿಕ ಕೇಂದ್ರವಾದ ಲಾಗೋಸ್ಗೆ ವಾಡಿಕೆಯ ಕಾರ್ಯಾಚರಣೆಯಲ್ಲಿದ್ದಾಗ ಬೆಳಗ್ಗೆ ಸುಮಾರು 9 ಗಂಟೆಗೆ ಪತನಗೊಂಡಿದೆ.
ಪತನಗೊಂಡ ವಿಮಾನವನ್ನು ಅವಳಿ-ಎಂಜಿನ್ನ ಟರ್ಬೊಪ್ರೊಪ್ ATR-42 ಎಂದು ಗುರುತಿಸಲಾಗಿದೆ. ಇದು ಸಾಮಾನ್ಯವಾಗಿ 30 ರಿಂದ 50 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.ಅಪಘಾತದ ವೇಳೆ ಭಾರೀ ಗುಡುಗಿನಂತಹ ಶಬ್ದ ಕೇಳಿಬಂತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜೌಗು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಸ್ಥಳೀಯ ನೌಕಾ ನೆಲೆಗೆ ಮಾಹಿತಿ ನೀಡಿದ ಬಳಿಕ ದೋಣಿಗಳ ಮೂಲಕ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದವು.
ದುರಂತ ಸ್ಥಳದ ಪರಿಸ್ಥಿತಿಯನ್ನು ವಿವರಿಸಿದ ಸ್ಥಳೀಯರು, ವಿಮಾನವು ನದಿಯ ಬಳಿ ಪತನಗೊಂಡಿದ್ದು, ಅದರ ಕೆಲವು ಅವಶೇಷಗಳು ನೀರಿನಲ್ಲಿ ಮುಳುಗಿವೆ, ನದಿಯ ದಂಡೆಯ ಮೇಲೆ ಶೂ, ಚಪ್ಪಲಿಗಳು, ಬಟ್ಟೆಗಳು ಹಾಗೂ ಮೃತದೇಹಗಳ ಭಾಗಗಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



