ವಿಡಿಯೋ

ಕಮ್ಮಟಿಪಾದಮ್ ಟ್ರೇಲರ್

ದಲ್ಕ್ವೇರ್ ಸಲ್ಮಾನ್, ವಿನಾಯಕನ್, ವಿನಯ್ ಫೋರ್ಟ್, ಶೈನ್ ಟಾಮ್ ಚಾಕೋ, ಶೌನ್ ರಾಮಿ ನಟಿಸಿರುವ, ರಾಜೀವ್ ರವಿ ನಿರ್ದೇಶನದ ಕಮ್ಮಟಿಪಾದಮ್ ಮಲಯಾಳಂ ಸಿನೆಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಂತರ್ಜಾಲ ತಾಣಗಳಲ್ಲಿ ಜನಪ್ರಿಯವಾಗಿದೆ.

ಕಮ್ಮಟಿಪಾದಮ್ ಟ್ರೇಲರ್
ರಾಮನ್ ರಾಘವ್ ೨.೦ ಟ್ರೇಲರ್

ರಾಮನ್ ರಾಘವ್ ೨.೦ ಟ್ರೇಲರ್

ಅನುರಾಗ್ ಕಶ್ಯಪ್ ನಿರ್ದೇಶನದ ಬಹು ನಿರೀಕ್ಷಿತ ಸಿನೆಮಾ, ಮುಂಬೈನ ಸರಣಿ ಕೊಲೆಗಾರ ರಾಮನ್ ರಾಘವ್ ನ ಸರಣಿ ಅಪರಾಧಗಳ ಆಧಾರಿತ ಸಿನೆಮಾ ರಾಮನ್ ರಾಗವ್ ೨.೦ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ನವಾಜುದ್ದೀನ್ ಸಿದ್ದಿಕಿ ರಾಮನ್ ರಾಘವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಕ್ಕಿ ಕೌಶಲ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಈ ಸಿನೆಮಾ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.

ಭ್ರಷ್ಟ ಪಂಚಾಯಿತಿ ಅಧಿಕಾರಿಗೆ ಪಾಠ ಕಲಿಸಿದ "ಲೇಡಿ ಸಿಂಗಂ"

ಭ್ರಷ್ಟ ಪಂಚಾಯಿತಿ ಅಧಿಕಾರಿಗೆ ಪಾಠ ಕಲಿಸಿದ "ಲೇಡಿ ಸಿಂಗಂ"

ಮಧ್ಯಪ್ರದೇಶದ ಸಿಂಗ್ರೌಲಿ ಗ್ರಾಮದ ಪಂಚಾಯಿತಿ ಕಾರ್ಯದರ್ಶಿ ರಾಮ್ ಸುಭಾಷ್ ಎಂಬಾತ ಶೌಚಾಲಯ ನಿರ್ಮಾಣದ ಹೆಸರಲ್ಲಿ ಸರ್ಕಾರದ ಹಣ ಗುಳುಂ ಮಾಡಿ ಐಎಎಸ್ ಅಧಿಕಾರಿ ನಿಧಿ ನಿವೇದಿತಾ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಂಚಾಯಿತಿ ಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಐಎಎಸ್ ಅಧಿಕಾರಿ ಗ್ರಾಮಸ್ಥರ ಮುಂದೆಯೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಧಿಕೃತ ಟ್ರೈಲರ್

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಧಿಕೃತ ಟ್ರೈಲರ್

ವಿಭಿನ್ನ ಹೆಸರಿನಲ್ಲಿ ತಯಾರಾಗಿರುವ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಟ ರಕ್ಷಿತ್ ಶೆಟ್ಟಿ, ಅನಂತ್ ನಾಗ್ ಹಾಗೂ ಶೃತಿ ಹರಿಹರನ್ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿಗೆ ತಂದೆಯಾಗಿ ಕಾಣಿಸಿಕೊಂಡಿರುವ ಅನಂತ್ ನಾಗ್ ಅವರಿಗೆ ಮರೆವಿನ ಖಾಯಿಲೆಯಿದ್ದು, ಕಣ್ಮರೆಯಾಗುವ ತಂದೆಯನ್ನು ಹುಡುಕುವುದೇ ಚಿತ್ರದ ಕಥಾವಸ್ತು. ಚಿತ್ರವನ್ನು ನವ ನಿರ್ದೇಶಕ ಹೇಮಂತ್ ಎಮ್ ರಾವ್ ನಿರ್ದೇಶಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಒಬಾಮ ಅವರ ನಿವೃತ್ತಿಯ ನಂತರದ ಯೋಜನೆಗಳೇನು? ಈ ವಿಡಿಯೋ ನೋಡಿ

ಅಮೆರಿಕ ಅಧ್ಯಕ್ಷ ಒಬಾಮ ಅವರ ನಿವೃತ್ತಿಯ ನಂತರದ ಯೋಜನೆಗಳೇನು? ಈ ವಿಡಿಯೋ ನೋಡಿ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಇನ್ನು 8 ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದು. ತಮ್ಮ ನಿವೃತ್ತಿ ಜೀವನ ಹೀಗಿರಬಹುದು ಎಂದು ಕಲ್ಪಿಸಿಕೊಂಡು ಸ್ವತಃ ಬರಾಕ್ ಒಬಾಮಾ ಅವರೇ ವಿಡಿಯೋವೊಂದನ್ನು ಸಿದ್ಧಪಡಿಸಿದ್ದಾರೆ. ಶ್ವೇತ ಭವನದಲ್ಲಿ ಆಯೋಜಿಸಿದ್ದ ಔತಣ ಸಮಾರಂಭದಲ್ಲಿ ವಿಡಿಯೋ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.