ಡಿಶೂಂ ಸಿನೆಮಾ ಟ್ರೇಲರ್ಜಾನ್ ಅಬ್ರಹಾಂ, ವರುಣ್ ಧವನ್, ಜಾಕ್ವೆಲೀನ್ ಫರ್ನಾಂಡಿಸ್ ಮತ್ತು ಅಕ್ಷಯ್ ಖನ್ನ ನಟಿಸಿರುವ 'ಡಿಶೂಂ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಭಾರಿ ಜನಪ್ರಿಯವಾಗಿದೆ. ರೋಹಿತ್ ಧವನ್ ನಿರ್ದೇಶನದ ಈ ಚಿತ್ರ ಜುಲೈ ೨೯ಕ್ಕೆ ಬಿಡುಗಡೆಯಾಗಲಿದೆ.
ಟರ್ಮಿನೇಟರ್ ಖ್ಯಾತಿಯ ನಟ ಅರ್ನಾಲ್ಡ್ ರನ್ನು ಅಟ್ಟಾಡಿಸಿದ ಆನೆ!ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್ ನ ಪ್ರಚಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಅರ್ನಾಲ್ಡ್, ಬಿಡುವಿನ ವೇಳೆಯಲ್ಲಿ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಅರ್ನಾಲ್ಡ್ ಅವರಿದ್ದ ಕಾರನ್ನು ಆಫ್ರಿಕಾದ ದೈತ್ಯ ಕಾಡಾನೆಯೊಂದು ಅಟ್ಟಾಡಿಸಿದ್ದು, ಅರ್ನಾಲ್ಡ್ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದ ಟೀಸರ್ಮೇಕಿಂಗ್ ನಿಂದಲೇ ಕುತೂಹಲ ಕೆರಳಿಸಿರುವ ದಿವಂಗತ ನಟ ಡಾ.ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ನಾಗರಹಾವು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು 49 ಸಾವಿರಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ.
ಸ್ಪಿಲ್ಬರ್ಗ್ ಅವರ 'ದ ಬಿ ಎಫ್ ಜಿ' ಚಿತ್ರದ ಟ್ರೇಲರ್ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ, ಡಿಸ್ನಿ ನಿರ್ಮಿಸಿರುವ 'ದ ಬಿ ಎಫ್ ಜಿ' ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಖ್ಯಾತ ಬರಹಗಾರ ರೋಲ್ಡ್ ಧಾಲ್ ಅವರ ಕಥಾ ಆಧಾರಿತ ಈ ಸಿನೆಮಾ ಜುಲೈ ೧ ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಮಗು ರಕ್ಷಿಸಲು ಗೊರಿಲ್ಲಾಗೆ ಗುಂಡಿಟ್ಟ ಸಿಬ್ಬಂದಿಅಮೆರಿಕದ ಸಿನ್ ಸಿನ್ನಾಟಿ ಮೃಗಾಲಯದಲ್ಲಿ ಗೊರಿಲ್ಲಾ ವಿದ್ದ ಪಾರ್ಕ್ ನಲ್ಲಿ 4 ವರ್ಷದ ಮಗುವೊಂದು ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಮಗುವನ್ನು ರಕ್ಷಿಸುವ ಸಲುವಾಗಿ ಮೃಗಾಲಯ ಸಿಬ್ಬಂದಿ ಗೊರಿಲ್ಲಾಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಪೋರ್ಕಿ ಹುಚ್ಚ ವೆಂಕಟ್ ಚಿತ್ರದ ಪ್ರೋಮೋಒಂದಲ್ಲ ಒಂದು ಹೇಳಿಕೆ ಮೂಲಕ ಸುದ್ದಿಯಾಗುತ್ತಿದ್ದ ಹುಚ್ಚ ವೆಂಕಟ್ ಸದ್ಯ ತಮ್ಮ ಚಿತ್ರದ ಪ್ರೋಮೋ ಬಿಡುಗಡೆ ಮಾಡಿದ್ದಾರೆ. ಪೋರ್ಕಿ ಹುಚ್ಚ ವೆಂಕಟ್ ಚಿತ್ರದ ಪ್ರೋಮೋ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಲಭಿಸಿದೆ.
ಮನ್ದೀಪ್ ಜತೆ ಪಂಜಾಬಿ ಹಾಡಿಗೆ ಕುಣಿದ ಗೇಯ್ಲ್, ಕೊಹ್ಲಿಐಪಿಎಲ್ ಫೈನಲ್ ಗೆ ಎಂಟ್ರಿ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬಿಂದಾಸ್ ಜೋಶ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಹಾಗೂ ಮನ್ ದೀಪ್ ಸಿಂಗ್ ಕುಣಿದು ಕುಪ್ಪಳಿಸಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಚಾರಿ ವಿಜಯ್ರ ವರ್ತಮಾನ ಚಿತ್ರದ ಟ್ರೈಲರ್ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ ವರ್ತಮಾನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಕುತೂಹಲ ಮೂಡಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
'ದನ ಕಾಯೋನು' ಟ್ರೇಲರ್'ವಾಸ್ತು ಪ್ರಕಾರ'ದ ನಂತರ ಯೋಗರಾಜ್ ಭಟ್ ಮತ್ತೆ ಹಿಂದಿರುಗಿದ್ದಾರೆ. ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ 'ದನ ಕಾಯೋನು' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಹರಿಕೃಷ್ಣ ಸಂಗೀತ ನೀಡಿರುವ ಈ ಸಿನೆಮಾದ ನಿರ್ಮಾಪಕರು ಆರ್ ಎಸ್ ಪ್ರೊಡಕ್ಷನ್ಸ್.
ಜಬರ್ದಸ್ತ್ ಆಗಿದೆ ಸಲ್ಮಾನ್ 'ಸುಲ್ತಾನ್' ಟ್ರೈಲರ್ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸುಲ್ತಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಜಬರ್ದಸ್ತ್ ಕುಸ್ತಿ ಪೈಲಾನ್ ಆಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಗೆ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ.
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ