We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ನಾವು ಮದುವೆಯಾಗುತ್ತಿದೆ! ನಾವು ಇಬ್ಬರೂ ಜೀವನದ ಹಾದಿಯನ್ನು ಕಂಡುಕೊಳ್ಳುತ್ತಿದ್ದ ಆ ದಿನಗಳಲ್ಲಿ ನಾವು ಭೇಟಿಯಾದದ್ದು ನನಗೆ ಇನ್ನೂ ನೆನಪಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಭಾವಿ ಪತಿಯನ್ನು ಸ್ಪಂದನಾ ಪರಿಚಯಿಸಿದ್ದಾರೆ.

ಬೆಂಗಳೂರು: ‘ಬಿಗ್ಬಾಸ್’ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ಹಸೆಮಣೆ ಏರಲು ಸಜ್ಜಾಗಿದ್ದು, ತಮ್ಮ ಮದುವೆ ಕುರಿತ ಎಲ್ಲಾ ಊಹಾಪೋಹಗಳಿಗೆ ಬುಧವಾರ ತೆರೆ ಎಳೆದಿದ್ದಾರೆ.
ನಾವು ಮದುವೆಯಾಗುತ್ತಿದೆ! ನಾವು ಇಬ್ಬರೂ ಜೀವನದ ಹಾದಿಯನ್ನು ಕಂಡುಕೊಳ್ಳುತ್ತಿದ್ದ ಆ ದಿನಗಳಲ್ಲಿ ನಾವು ಭೇಟಿಯಾದದ್ದು ನನಗೆ ಇನ್ನೂ ನೆನಪಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಭಾವಿ ಪತಿಯನ್ನು ಸ್ಪಂದನಾ ಪರಿಚಯಿಸಿದ್ದಾರೆ.
ಇತ್ತೀಚೆಗಷ್ಟೇ ಪ್ಯಾರೀಸ್ನ ಐಫೆಲ್ ಟವರ್ ಹಿಂಬದಿಯಲ್ಲಿ ಹುಡುಗನೊಬ್ಬನ ಕೈಹಿಡಿದು ನಡೆಯುತ್ತಿರುವ ಫೋಟೋ ಶೇರ್ ಮಾಡಿ ಭಾರಿ ಕುತೂಹಲ ಮೂಡಿಸಿದ್ದ ಸ್ಪಂದನಾ, ಇದೀಗ ತಮ್ಮ ಭಾವಿ ಪತಿ ವರುಣ್ರನ್ನು ಅಧಿಕೃತವಾಗಿ ಪರಿಚಯಿಸಿದ್ದಾರೆ.
ಇಂದು ಸ್ಪಂದನಾ ಸೋಮಣ್ಣ ಅವರು ತಮ್ಮ ಭಾವಿ ಪತಿಯ ಜೊತೆ ಉಂಗುರ ಬದಲಾಯಿಸಿಕೊಂಡ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ವರುಣ್ ಮುನಿರಾಜು ಎಂಬುವವರನ್ನೇ ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರುಣ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿರುವ ಸ್ಪಂದನಾ, ಇಬ್ಬರ ನಡುವಿನ 6 ವರ್ಷಗಳ ಸುದೀರ್ಘ ಕಷ್ಟ-ಸುಖಗಳ ಪ್ರೇಮ ಪಯಣವನ್ನು ಬಹಿರಂಗಪಡಿಸಿದ್ದಾರೆ.
ನಾವು ಇಬ್ಬರೂ ಕೆಲಸವಿಲ್ಲದೆ, ಹಣವಿಲ್ಲದೆ, ಜೀವನ ನಮ್ಮನ್ನು ಎತ್ತ ಕರೆದುಕೊಂಡು ಹೋಗುತ್ತದೆ ಎಂದು ತಿಳಿಯದೆ ಪರದಾಡುತ್ತಿದ್ದ ಸಮಯದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿದ್ದ ಆ ದಿನಗಳು ಈಗಲೂ ನೆನಪಿವೆ ಎಂದು ಸ್ಪಂದನಾ ಹೇಳಿದ್ದಾರೆ.
‘ನಾವಿಬ್ಬರೂ ಜೊತೆಯಾಗಿ ಹಂಚಿಕೊಂಡ ಹಾಗೂ ಬೆಳೆದು ಬಂದ ಈ ಸುಂದರ ಪಯಣದ ನಂತರ, ನಿನ್ನನ್ನು ನನ್ನ ಗಂಡ ಎಂದು ಕರೆಯಲು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಜೀವನದಲ್ಲಿ ನಾನು ಅತ್ಯಂತ ಸುಲಭವಾಗಿ ಒಪ್ಪಿದ ನಿರ್ಧಾರ ಇದಾಗಿದೆ’ ಎಂದು ಸ್ಪಂದನಾ ಬರೆದುಕೊಂಡಿದ್ದಾರೆ.
‘ನನಗಾಗಿ ಯಾವಾಗಲೂ ಜೊತೆಯಲ್ಲಿ ಇದ್ದಿದ್ದಕ್ಕೆ, ನನ್ನನ್ನು ನಂಬಿದ್ದಕ್ಕೆ ಮತ್ತು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಅಧ್ಯಾಯಕ್ಕೆ ಹಾಗೂ ಎಂದೆಂದಿಗೂ ಜೊತೆಯಾಗಿರುವ ಈ ಪಯಣಕ್ಕೆ ಶುಭವಾಗಲಿ’ ಎಂದು ಸ್ಪಂದನಾ ಅವರು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



