'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾ
ಸ್ಟೈಲಿಸ್ಟ್‌ನ ಚಾಲಕ ಸಹ ಆ ಕ್ಲಿಪ್‌ನ್ನು ಪದೇ ಪದೇ ನೋಡುತ್ತಾ, ಆಕೆಗೆ 'ನೀವು ಅವರ ಮನೆಗೆ ಹೋಗುತ್ತಿದ್ದೀರಾ?' ಎಂದು ಅವಳನ್ನು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿದವು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಯಿತು" ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಸೇರಿದಂತೆ ಧೈರ್ಯಶಾಲಿ ಹಾಗೂ ಸಾಂಪ್ರದಾಯಿಕವಲ್ಲದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಟಿ ರಾಧಿಕಾ ಆಪ್ಟೆ ಅವರು ತಮ್ಮ ಸಿನಿಮಾವೊಂದರ ಹಸಿಬಿಸಿ ದೃಶ್ಯವೊಂದು ಸೋರಿಕೆಯಾದ ನಂತರ ಅನುಭವಿಸಿದ ತೀವ್ರ ಭಾವನಾತ್ಮಕ ಸಂಕಟವನ್ನು ನೆನಪಿಸಿಕೊಂಡಿದ್ದು, ಆ ಘಟನೆಯಿಂದಾಗಿ ನಾನು ಹಲವು ದಿನಗಳ ಕಾಲ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ತೆರೆಯ ಮೇಲಿನ ಬೋಲ್ಡ್ ದೃಶ್ಯಗಳ ಕುರಿತು 'ಇಂಡಿಯಾ ಟುಡೇ' ಜೊತೆ ಮನಬಿಚ್ಚಿ ಮಾತನಾಡಿರುವ ರಾಧಿಕಾ, ಇಂತಹ ದೃಶ್ಯಗಳು ಆಗಾಗ್ಗೆ ಕಲಾವಿದರ ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
"ನಾವು ರಾಸಲೀಲೆ ದೃಶ್ಯಗಳಲ್ಲಿ (intimate scenes) ನಟಿಸುವ ಬಗ್ಗೆ ಮಾತನಾಡುತ್ತಿದ್ದೆವು; ಆದರೆ ನಾನು ನಟಿಸಿದ್ದ ದೃಶ್ಯವೊಂದು ಸೋರಿಕೆಯಾದಾಗ, ಸತತ ನಾಲ್ಕು ದಿನಗಳ ಕಾಲ ನನಗೆ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗಲಿಲ್ಲ. ಸಮಸ್ಯೆಯೆಂದರೆ, ಇದರ ಪರಿಣಾಮಗಳು ಬಹಳ ಬೇಗನೆ ನಮ್ಮ ಮನೆ ಬಾಗಿಲನ್ನೇ ತಲುಪಬಲ್ಲವು. ಯಾರಾದರೂ ನಿಮ್ಮ ಮನೆಯ ಡೋರ್‌ಬೆಲ್ ಬಾರಿಸಬಹುದು ಮತ್ತು ಆ ದೃಶ್ಯದಿಂದ ಮನನೊಂದು ಯಾರಾದರೂ ನಿಮ್ಮ ಮನೆಯ ಹೊರಗೆ ಬಂದು ನಿಲ್ಲಬಹುದು. ಹಾಗಾಗಿ, ಇದು ಅಂದುಕೊಂಡಷ್ಟು ಸುಲಭವಲ್ಲ; ಇದು ಬಹಳ ಸಂಕೀರ್ಣವಾದ ವಿಷಯ" ಎಂದು ನಟಿ ತಿಳಿಸಿದ್ದಾರೆ.
ಆ ಸೋರಿಕೆಯಾದ ದೃಶ್ಯವು ತನ್ನ ವೈಯಕ್ತಿಕ ಜೀವನ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಹೇಗೆ ತಕ್ಷಣದ ಪರಿಣಾಮ ಬೀರಿತು ಎಂಬುದನ್ನು ಆ ನಟಿ ವಿವರಿಸಿದ್ದಾರೆ.
"ಆದರೆ ಲೈಂಗಿಕತೆಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ, ನನ್ನದೊಂದು ವಿಡಿಯೋ ಕ್ಲಿಪ್ ಸೋರಿಕೆಯಾದಾಗ ಪರಿಸ್ಥಿತಿ ನಿಜಕ್ಕೂ ಕಷ್ಟಕರವಾಯಿತು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಮಾತ್ರ ಸೀಮಿತವಾಗಲಿಲ್ಲ. ಬದಲಾಗಿ ಪ್ರತಿದಿನ ನೋಡುವ ಮತ್ತು ಭೇಟಿಯಾಗುವ ಜನರ ಬಳಿಗೂ ತಲುಪಿತ್ತು. ವಾಚ್ ಮನ್, ನನ್ನ ಕಾರು ಚಾಲಕ ಸಹ ಆ ವಿಡಿಯೋ ನೋಡಿದ್ದರು. ಸ್ಟೈಲಿಸ್ಟ್‌ನ ಚಾಲಕ ಸಹ ಆ ಕ್ಲಿಪ್‌ನ್ನು ಪದೇ ಪದೇ ನೋಡುತ್ತಾ, ಆಕೆಗೆ 'ನೀವು ಅವರ ಮನೆಗೆ ಹೋಗುತ್ತಿದ್ದೀರಾ?' ಎಂದು ಅವಳನ್ನು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿದವು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಯಿತು" ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



