ವಿಡಿಯೋ

ಲಕ್ಷ್ಮಣ ಚಿತ್ರದ ಮೋಷನ್ ಪೋಸ್ಟರ್

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಆರ್. ಚಂದ್ರು ನಿರ್ದೇಶನದ ಸಾಹಸ ಪ್ರಧಾನ ಚಿತ್ರ ಲಕ್ಷ್ಮಣ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನೂಪ್, ಮೇಘನಾ ರಾಜ್ ಹಾಗೂ ರವಿಚಂದ್ರನ್ ಅಭಿನಯಿಸಿದ್ದಾರೆ.

ಲಕ್ಷ್ಮಣ ಚಿತ್ರದ ಮೋಷನ್ ಪೋಸ್ಟರ್
ಮಹಿಳಾ ರೆಸ್ಲರ್ ಓಪನ್ ಚಾಲೆಂಜ್ ಗೆ ಭಾರತೀಯ ನಾರಿಯ ದಿಟ್ಟ ಉತ್ತರ

ಮಹಿಳಾ ರೆಸ್ಲರ್ ಓಪನ್ ಚಾಲೆಂಜ್ ಗೆ ಭಾರತೀಯ ನಾರಿಯ ದಿಟ್ಟ ಉತ್ತರ

ಖ್ಯಾತ ರೆಸ್ಲರ್ ದಿ ಗ್ರೇಟ್ ಖಲಿ ಅವರ ರೆಸ್ಲಿಂಗ್ ತರಬೇತಿ ಕೇಂದ್ರ ಉದ್ಘಾಟನೆ ವೇಳೆ ಆಗಮಿಸಿದ್ದ ರೆಸ್ಲರ್ ಒಬ್ಬರು ತಮ್ಮ ವಿರುದ್ಧ ಫೈಟ್ ಮಾಡುವಂತೆ ಆಹ್ವಾನಿಸಿದಾಗ ಸ್ಟೇಜ್ ಗೆ ಆಗಮಿಸಿದ ಕವಿತಾ ಎಂಬ ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ರೆಸ್ಲರ್ ಗೆ ಮಣ್ಣುಮುಕ್ಕಿಸಿದ ಪರಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೀರ್ಜ್ಯಾ ಹಿಂದಿ ಸಿನೆಮಾ ಟ್ರೇಲರ್

ಮೀರ್ಜ್ಯಾ ಹಿಂದಿ ಸಿನೆಮಾ ಟ್ರೇಲರ್

ಜನಪದ ಕಥೆಯೊಂದರಿಂದ ಸ್ಫೂರ್ತಿ ಪಡೆದು ಹಿಂದಿಯ ಖ್ಯಾತ ಲೇಖಕ ಗುಲ್ಜಾರ್ ಚಿತ್ರ ಕಥೆ ರಚಿಸಿ, ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿರುವ 'ಮೀರ್ಜ್ಯಾ' ಚಿತ್ರದ ಟ್ರೇಲರ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಹರ್ಷವರ್ಧನ್ ಕಪೂರ್, ಸಯಾಮಿ ಖೇರ್ ಮತ್ತು ಅನುಜ್ ಚೌಧರಿ ನಟಿಸಿರುವ ಈ ಚಿತ್ರ ಅಕ್ಟೋಬರ್ ೭ಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ದೆಹಲಿಯ ಜನಕಪುರಿ ಹಿಟ್ ಅಂಡ್ ರನ್ ಅಪಘಾತ ಸಿಸಿಟಿವಿಯಲ್ಲಿ ಸೆರೆ

ದೆಹಲಿಯ ಜನಕಪುರಿ ಹಿಟ್ ಅಂಡ್ ರನ್ ಅಪಘಾತ ಸಿಸಿಟಿವಿಯಲ್ಲಿ ಸೆರೆ

ಸೋಮವಾರ ದೆಹಲಿ ಜನಕಪುರಿ ಪ್ರದೇಶದಲ್ಲಿ ನಡೆದ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಾಚಾರಿಗೆ ಬಲಭಾಗದಲ್ಲಿಯೇ ವೇಗವಾಗಿ ಬಂದ ಕಾರು ಗುದ್ದಿದ್ದು, ಕಾರು ಗುದ್ದಿ ರಭಸಕ್ಕೆ ವ್ಯಕ್ತಿ ಮಾರುದ್ದ ಹಾರಿ ಬಿದ್ದು ಸಾವನ್ನಪ್ಪಿದ್ದಾರೆ. ಪಾನಮತ್ತ 21 ವರ್ಷದ ಯುವಕ ಕಾರನ್ನು ಓಡಿಸುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

'ರಾಮನ್ ರಾಘವ್ 2.೦' ಬೇಹುದಾ ವಿಡಿಯೋ ಹಾಡು

'ರಾಮನ್ ರಾಘವ್ 2.೦' ಬೇಹುದಾ ವಿಡಿಯೋ ಹಾಡು

ಮುಂಬೈ ನ ಸರಣಿ ಕೊಲೆಗಾರ ರಾಮನ್ ರಾಘವ್ ಕುರಿತಾದ ಅನುರಾಗ್ ಕಶ್ಯಪ್ ನಿರ್ದೇಶನದ 'ರಾಮನ್ ರಾಘವ್ ೨.೦' ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನವಾಜುದ್ದೀನ್ ಸಿದ್ದಿಕಿ ಅವರ ನಟನೆಗೆ ಕರತಾಡನವಾಗಿತ್ತು. ರಾಮ್ ಸಂಪತ್ ಸಂಗೀತ ನಿರ್ದೇಶನದಲ್ಲಿ, ನಯನತಾರ ಭಟ್ಕಳ್ ಹಾಡಿರುವ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.