ವಿಡಿಯೋ

ಆಂಧ್ರದಲ್ಲಿ ಹೆಡ್ ಲೈಟ್ ವಿಚಾರಕ್ಕೆ ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ

ವಿಜಯವಾಡಾದ ಕಂಕಿಪಾಡು ಬಳಿ ಹೆಡ್ ಲೈಟ್ ಡಿಮ್ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮದ್ಯಪಾನ ಮಾಡಿದ್ದ ಸೈಕಲ್ ಸವಾರನೊಬ್ಬ ಬೈಕ್ ಸವಾರನನ್ನು ನಡುರಸ್ತೆಯಲ್ಲಿ ಬಡಿದು ಕೊಂದಿರುವ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಡಿಯೋ ಕೃಪೆ: ANDHRA TV

ಆಂಧ್ರದಲ್ಲಿ ಹೆಡ್ ಲೈಟ್ ವಿಚಾರಕ್ಕೆ ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ
ಆ ಒಂದು ಮ್ಯಾಜಿಕ್ ಗೋಲ್‌ನಿಂದ ಆತ ಪೋರ್ಚುಗಲ್ ಹೀರೋ ಆದ!

ಆ ಒಂದು ಮ್ಯಾಜಿಕ್ ಗೋಲ್‌ನಿಂದ ಆತ ಪೋರ್ಚುಗಲ್ ಹೀರೋ ಆದ!

ಫ್ರಾನ್ಸ್ ವಿರುದ್ಧ ನಡೆದ ಯೂರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ತಂಡದ ಪರವಾಗಿ ಏಕೈಕ ಗೋಲು ಭಾರಿಸಿ ತಂಡ ಚಾಂಪಿಯನ್ ಆಗುವಲ್ಲಿ ನೆರವಾದ ತಂಡದ ಆಟಗಾರ ಎಡರ್ ಇದೀಗ ಪೋರ್ಚುಗಲ್ ಹೀರೋ ಆಗಿಬಿಟ್ಟಿದ್ದಾರೆ. ಟೂರ್ನಿ ಆರಂಭಕ್ಕೂ ಮೊದಲು ಎಡರ್ ತಂಡದ ಓರ್ವ ಆಟಗಾರ ಎನ್ನುವುದನ್ನು ಬಿಟ್ಟರೆ ಅಭಿಮಾನಿಗಳಿಗೆ ಎಡರ್ ಅಷ್ಟೇನು ಪರಿಚಿತರಾಗಿರಲಿಲ್ಲ. ಇದೀಗ ಇಡೀ ರೋಡ್ ಶೋ ನಲ್ಲಿ ನಾಯಕ ರೊನಾಲ್ಡೊಗಿಂತಲೂ ಎಡರ್ ಹೆಸರು ಹೆಚ್ಚಾಗಿ ಕೇಳಿ ಬಂದಿದೆ. ಕೃಪೆ: URBANSKY

ಭದ್ರತಾ ಅಧಿಕಾರಿ ಪ್ರಾಣ ಉಳಿಸಲು ಜೈಲು ಬಾಗಿಲು ಛಿದ್ರಗೊಳಿಸಿದ ಕೈದಿಗಳು

ಭದ್ರತಾ ಅಧಿಕಾರಿ ಪ್ರಾಣ ಉಳಿಸಲು ಜೈಲು ಬಾಗಿಲು ಛಿದ್ರಗೊಳಿಸಿದ ಕೈದಿಗಳು

ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಜೈಲಿನ ಭದ್ರತಾ ಸಿಬ್ಬಂದಿಯ ಪ್ರಾಣ ಉಳಿಸಲು ಕೈದಿಗಳು ತಾವಿದ್ದ ಜೈಲಿನ ಬಾಗಿಲನ್ನೇ ಛಿದ್ರಗೊಳಿಸಿದ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ. ಕೈದಿಗಳ ಸಮಯ ಪ್ರಜ್ಞೆಯಿಂದಾಗಿ ಇದೀಗ ಭದ್ರತಾ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೈದಿಗಳು ಜೈಲು ಬಾಗಿಲನ್ನು ಒಡೆದು ಹೊರಗೆ ಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾಳಿ ನಿರತ ರಷ್ಯಾ ಸೇನಾಹೆಲಿಕಾಪ್ಟರ್ ಹೊಡೆದುರುಳಿಸಿದ ಇಸಿಸ್; ಕ್ಯಾಮೆರಾದಲ್ಲಿ ರೋಚಕ ದೃಶ್ಯ ಸೆರೆ

ದಾಳಿ ನಿರತ ರಷ್ಯಾ ಸೇನಾಹೆಲಿಕಾಪ್ಟರ್ ಹೊಡೆದುರುಳಿಸಿದ ಇಸಿಸ್; ಕ್ಯಾಮೆರಾದಲ್ಲಿ ರೋಚಕ ದೃಶ್ಯ ಸೆರೆ

ಸಿರಿಯಾದಲ್ಲಿ ಇಸಿಸ್ ಉಗ್ರಗಾಮಿ ನೆಲೆಗಳ ಮೇಲೆ ವಾಯುದಾಳಿ ಮುಂದುವರೆಸಿರುವ ರಷ್ಯಾಗೆ ಶನಿವಾರ ಭಾರಿ ಹಿನ್ನಡೆಯಾಗಿದ್ದು, ಉಗ್ರಗಾಮಿ ಸಂಘಟನೆ ಕ್ಷಿಪಣಿ ಬಳಕೆ ಮಾಡಿ ರಷ್ಯಾದ ದಾಳಿ ನಿರತ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಹೆಲಿಕಾಪ್ಟರ್ ರಕ್ಷಣೆಗೆ ಹರಸಾಹಸ ಪಟ್ಟ ಪೈಲಟ್ ಗಳು ಕೊನೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ರೋಚಕ ದಾಳಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಡಬಲ್ ಮಿನಿಂಗ್ ಜತೆ ಕ್ಯೂಟ್ ಪ್ರೇಮಕತೆ ಈ 'ಮಾತುಕತೆ' ಟ್ರೈಲರ್

ಡಬಲ್ ಮಿನಿಂಗ್ ಜತೆ ಕ್ಯೂಟ್ ಪ್ರೇಮಕತೆ ಈ 'ಮಾತುಕತೆ' ಟ್ರೈಲರ್

ಗಾಲಿ ಚಿತ್ರದ ಮೂಲಕ ಡಬಲ್ ಮಿನಿಂಗ್ ಡೈಲಾಗ್ ಗಳಿಂದಲೆ ಖ್ಯಾತರಾದ ನಿರ್ದೇಶಕ ಇದೀಗ ಮತ್ತದೆ ಡಬಲ್ ಮಿನಿಂಗ್ ಡೈಲಾಗ್ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಮಾತುಕತೆ ಎಂದೇ ಟೈಟಲ್ ಇಡಲಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ತುಂಬಾ ಡಬಲ್ ಮಿನಿಂಗ್ ನಿಂದ ಕೂಡಿದ್ದು ಜತೆಗೆ ಕ್ಯೂಟ್ ಪ್ರೇಮಕತೆ ಇದೆಯಂತೆ. ಕೃಷ್ಣಕುಮಾರ್, ಗೌತಮಿ ಗೌಡ ಸತೀಶ್ ಬಾಬು ಅಭಿನಯಿಸಿದ್ದಾರೆ. ಚಿತ್ರ ನಾಳೆ ತೆರೆ ಕಾಣಲಿದೆ.

ಸತ್ತ ತಾಯಿ ಆನೆಯನ್ನು ಏಳಿಸುತ್ತಿರುವ ಮರಿ ಆನೆಯ ಹೃದಯ ವಿದ್ರಾವಕ ದೃಶ್ಯ

ಸತ್ತ ತಾಯಿ ಆನೆಯನ್ನು ಏಳಿಸುತ್ತಿರುವ ಮರಿ ಆನೆಯ ಹೃದಯ ವಿದ್ರಾವಕ ದೃಶ್ಯ

ಸುಮಾರು 25 ವರ್ಷದ ತಾಯಿ ಆನೆ ಆಕಸ್ಮಿಕವಾಗಿ ಕೆಳಕ್ಕ ಬಿದ್ದು ಸಾವನ್ನಪ್ಪಿದ್ದು, 2 ವರ್ಷದ ಮರಿ ಆನೆ ತನ್ನ ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನ ಪಲ್ಲಂ ನಲ್ಲಿ ನಡೆದಿದೆ. ಕಾವಾಡಿಯಮ್ಮನ್ ದೇಗುಲದ ಬಳಿ ಆಹಾರವನ್ನರಿಸಿ ಬಂದಿದ್ದ ತಾಯಿ ಆನೆ ಆಯ ತಪ್ಪಿ ಕಂದಕ್ಕೆ ಉರುಳಿ ಸಾವನ್ನಪ್ಪಿದ್ದು, ಅಲ್ಲೇ ಇದ್ದ ಮರಿ ಆನೆ ತಾಯಿಯನ್ನು ಎಬ್ಬಿಸಲು ಹರಸಾಹಸ ಪಟ್ಟಿದೆ. ಈ ದೃಶ್ಯಾವಳಿಯನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಅಬ್ಬಾಸ್ ಕ್ಯೋರೋಸ್ತಾಮಿ ಅವರ ಮೊದಲ (ಕಿರು)ಚಿತ್ರ 'ದ ಬ್ರೆಡ್ ಅಂಡ್ ಅಲ್ಲೆ'

ಅಬ್ಬಾಸ್ ಕ್ಯೋರೋಸ್ತಾಮಿ ಅವರ ಮೊದಲ (ಕಿರು)ಚಿತ್ರ 'ದ ಬ್ರೆಡ್ ಅಂಡ್ ಅಲ್ಲೆ'

ವಿಶ್ವ ವಿಖ್ಯಾತ ಇರಾನ್ ಸಿನೆಮಾ ನಿರ್ದೇಶಕ ಅಬ್ಬಾಸ್ ಕ್ಯೋರೋಸ್ತಾಮಿ ಇಂದು ನಿಧನರಾಗಿದ್ದಾರೆ. ಅವರು 70 ರ ದಶಕದಲ್ಲಿ ನಿರ್ದೇಶಿಸಿದ ಈ ಕಿರು ಚಿತ್ರ ನಾಯಿ ಕಂಡರೆ ಭಯ ಬೀಳುವ 'ಫೋಬಿಯಾ' ಕುರಿತಾದದ್ದು. ಇಂದಿಗೂ ಬಹಳ ಸಂಗತವಾದ ಈ ವಿಷಯದ ಕುರಿತ ಸಿನೆಮಾ ಬಹು ಚರ್ಚಿತ ಮತ್ತು ಪ್ರಖ್ಯಾತ ಕೂಡ. ನೀವು ನೋಡಿ.