ವಿಡಿಯೋ

'ಆರಂಭ'ದ 'ಆ ದೃಶ್ಯ'

ಇತ್ತೀಚೆಗೆ ಗೋವಾದಲ್ಲಿ ಆಡಿಯೋ ಬಿಡುಗಡೆ ಮಾಡಿದ್ದ ಆರಂಭ ಚಿತ್ರತಂಡ ಇದೀಗ ಟೀಸರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ನಲ್ಲಿ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಟ್ರೇಲರ್ ನಲ್ಲಿ ನಾಯಕಿಯ ಎದೆ ಮುಟ್ಟುವ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇದು 'ಪ್ರಚಾರದ ಗಿಮಿಕ್' ಎಂದು ಸ್ಯಾಂಡಲ್ ವುಡ್ ಮಂದಿ ಮೂಗು ಮುರಿಯುತ್ತಿದ್ದಾರೆ.

'ಆರಂಭ'ದ 'ಆ ದೃಶ್ಯ'
ಸಮ್ಮರ್ ಚಿತ್ರದ ಟ್ರೇಲರ್

ಸಮ್ಮರ್ ಚಿತ್ರದ ಟ್ರೇಲರ್

ಸಮ್ಮರ್ ಚಿತ್ರವು 16 ವರ್ಷದ ಯುವತಿ ಮತ್ತು ಆಕೆಯ ಪುಟ್ಟ ಕುಗ್ರಾಮದ ಕಥಾ ಹಂದರವನ್ನು ಹೊಂದಿದ್ದು, ಯುವತಿ ವಾಸಿಸುವ ಗ್ರಾಮವು ವಿದ್ಯುತ್ ಉತ್ಪಾದನೆಯಿಂದ ಖ್ಯಾತಿ ಗಳಿಸಿರುತ್ತದೆ. ಕೂಗಳತೇ ದೂರದಲ್ಲೇ ಇರುವ ಗ್ರಾಮಗಳ ಯುವಕ ಯುವತಿಯರು ಬೇಸಿಗೆ ರಜೆಯಲ್ಲಿ ಒಟ್ಟಿಗೇ ಸೇರಿ ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಈ ವೇಳೆ ಈ ಯುವತಿ ಒಂಟಿತನ ಬೇಕೆಂದು ಆಪೇಕ್ಷಿಸುತ್ತಾಳೆ. ಈ ಸಂದರ್ಭದಲ್ಲಿ ಯುವತಿಗೆ ಗೆಳೆಯನೊಬ್ಬನ ಪರಿಚಯವಾಗುತ್ತದೆ, ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಇಂದು ಸಮ್ಮರ್ ಚಿತ್ರದ ಸಂಕ್ಷಿಪ್ತ ಕಥಾ ಹಂದರವಾಗಿದ್ದು, ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ.

ಸನ್ ಆಫ್ ಟ್ರಾಕೋ ಚಿತ್ರದ ಟ್ರೇಲರ್

ಸನ್ ಆಫ್ ಟ್ರಾಕೋ ಚಿತ್ರದ ಟ್ರೇಲರ್

ಚಿಲಿ ಮೂಲದ 14 ವರ್ಷದ ಓರ್ವ ಬಾಲಕ ತನ್ನ ತಂದೆಯ ಕಾರಣದಿಂದಾಗಿ ಸಮಾಜದಿಂದ ಮಾನಸಿಕ ಹಿಂಸೆಗೆ ಒಳಗಾಗುತ್ತಿರುತ್ತಾನೆ. ಹೀಗಾಗಿ ಒಂದು ದಿನ ಆ ಬಾಲಕ ತನ್ನ ತಂದೆಯ ಕುರಿತ ಸತ್ಯಾಂಶಗಳನ್ನು ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾನೆ. ತನ್ನ ತಂದೆಯ ಕುರಿತ ರಹಸ್ಯ ತಿಳಿವ ದಾರಿಯಲ್ಲಿ ಆ ಬಾಲಕ ಎದುರಿಸುವ ಸಾವಾಲುಗಳೇನು ಎಂಬುದು ಸನ್ ಆಫ್ ಟ್ರಾಕೋ ಚಿತ್ರದ ಸಂಕ್ಷಿಪ್ತ ಕಥಾ ಹಂದರ. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ.

ಕೋಕಿಲಾ ಚಿತ್ರದ ಟ್ರೇಲರ್

ಕೋಕಿಲಾ ಚಿತ್ರದ ಟ್ರೇಲರ್

ಚಿತ್ರವು ವೈದ್ಯಕೀಯ ವಿದ್ಯಾರ್ಥಿನಿ ಕೋಕಿಲಾ ಮತ್ತು ವಿಜಯಕುಮಾರ್ ಎಂಬ ಇಂಜಿನಿಯರ್ ನಡುವಿನ ಪ್ರೀತಿಯ ಕುರಿತಾಗಿದ್ದು, ಕೋಕಿಲಾ ಪಾತ್ರದಲ್ಲಿ ಶೋಭಾ ಮತ್ತು ವಿಜಯ್ ಕುಮಾರ್ ಪಾತ್ರದಲ್ಲಿ ನಟ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರವು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ನಿರ್ದೇಶನದ ಮೊಟ್ಟ ಮೊದಲ ಚಿತ್ರವಾಗಿದ್ದು, 1977ರಲ್ಲಿ ಚಿತ್ರವು ತೆರೆಕಂಡಿತ್ತು. ಈ ಚಿತ್ರ ಶುಕ್ರವಾರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳುತ್ತಿದೆ.

'ಡಿಸೆಂಬರ್-1' ಚಿತ್ರದ ಟ್ರೇಲರ್

'ಡಿಸೆಂಬರ್-1' ಚಿತ್ರದ ಟ್ರೇಲರ್

ಚಿತ್ರವು ರೊಟ್ಟಿ ಮಾರಿ ಜೀವನ ನಡೆಸುವ ದೇವಕ್ಕ ಎಂಬ ಮಹಿಳೆಯ ಕುರಿತಾಗಿದ್ದು, ಸಂದರ್ಭವೊಂದರಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದೇವಕ್ಕನ ಮನೆಗೆ ಆಗಮಿಸುತ್ತಾರೆ. ಈ ವೇಳೆ ದೇವಕ್ಕನ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ಆಕೆಯ ಜೀವನವನ್ನು ಹೇಗೆ ಬದಲಿಸುತ್ತದೆ ಎಂಬುದು ಡಿಸೆಂಬರ್-1 ಚಿತ್ರದ ಕಥಾ ಹಂದರವಾಗಿದೆ. ಚಿತ್ರವನ್ನು ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿದೆ.