ರಾಜ್ಯ

'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video

ಬೆಂಗಳೂರಿನ ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರ..

'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ
Published On :

ಬೆಂಗಳೂರು: ಹಿಂದಿ ಭಾಷಿಕನೋರ್ವ ಕ್ಷುಲ್ಲಕ ವಿಚಾರಕ್ಕೆ ಕನ್ನಡ ಸಿಬ್ಬಂದಿಗೆ ಧಮ್ಕಿ ಹಾಕಿ, ವಜಾಗೊಳಿಸುವ ಬೆದರಿಕೆ ಹಾಕಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನ ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರದಲ್ಲಿ ತನಗೆ ಕನ್ನಡ ಬರಲ್ಲ ಎಂದಿದ್ದಾನೆ.

‘ಹಿಂದಿ ಕಲಿಯಿರಿ, ಹಿಂದಿ ಕಲಿತು ಕೆಲಸಕ್ಕೆ ಬರಬೇಕು. ಇಲ್ಲ ಅಂದರೆ ಕೆಲಸದಿಂದ ವಜಾ ಮಾಡಲಾಗುವುದು’ ಎಂದು ಧಮ್ಕಿ ಹಾಕಿದ್ದ.

ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ನೆಲಮಂಗಲ ಬಳಿಯ ಹುಸ್ಕೂರು ಖಾಸಗಿ ಗೋದಾಮು ಮುಂದೆ ಪ್ರತಿಭಟನೆ ನಡೆಸಿ ಗೋದಾಮು ಮುತ್ತಿಗೆ ಹಾಕಲು ಯತ್ನಿಸಿದ್ದರು.

ವೈರಲ್ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ ಕನ್ನಡದ ನೌಕರರನ್ನು ಅಕ್ಷರಶಃ ಅವಮಾನಿಸಿದ್ದಾನೆ. ಆತನ ಎದುರು ಕನ್ನಡಿಗರನ್ನು ನಿಲ್ಲಿಸಿ ಕೆಟ್ಟದಾಗಿ ಮಾತನ್ನಾಡಿದ್ದಾನೆ ಎಂದು ಆರೋಪಿಸಲಾಗಿದೆ.

'ನಾನು ನಿಮಗೆ ನೇರವಾಗಿ ಹೇಳ್ತಿದ್ದೀನಿ.. ನೀವೆಲ್ಲರೂ ಹಿಂದಿ ಕಲಿತು ಬರಬೇಕು. ಕನ್ನಡ ಯಾರೆಲ್ಲಾ ಮಾತಾಡ್ತೀರಾ ಅವರೆಲ್ಲಾ ಕೆಲಸ ಬಿಟ್ಟು ಹೋಗಬಹುದು. ನನಗೆ ಯಾವುದೇ ಸಮಸ್ಯೆ ಇಲ್ಲ! ನನಗೆ ಕನ್ನಡ ಬರಲ್ಲ, ನಾನು ಹಿಂದಿಯಲ್ಲೇ ಮಾತಾಡೋದು. ಕರ್ನಾಟಕದಲ್ಲಿದ್ದರೆ ಏನಾಯ್ತು? ನಮ್ಮ ಬಳಿ ಕೆಲಸವಿದೆ, ಎಲ್ಲರೂ ಗಾಡಿ ಹತ್ತಿ ಜಾಗ ಖಾಲಿ ಮಾಡಿ! ಎಂದು ಕೆಣಕಿದ್ದಾನೆ.

ವ್ಯಾಪಕ ಆಕ್ರೋಶ

ಗೋದಾಮು ಮೇಲ್ವಿಚಾರಕ ಅಶೋಕ್ ನನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಹಿಂದಿವಾಲ ಅಶೋಕ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ರೂಪೇಶ್ ರಾಜಣ್ಣ ಕಿಡಿ

ಕನ್ನಡಿಗರ ಅನ್ನ ತಿಂದು ಕನ್ನಡಿಗರ ನೆಲದಲ್ಲೇ ದರ್ಪ ತೋರಿದ ಈತನ ನಡೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು ಎಂದು ಆಕ್ರೋಶ ಗುಡುಗಿದ್ದಾರೆ.

ಕೈಮುಗಿದು ಕ್ಷಮೆ ಯಾಚನೆ

ಇತ್ತ ತನ್ನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಹಿಂದಿವಾಲಾ ಕೈಮುಗಿದು ತನ್ನದು ತಪ್ಪಾಯಿತು. ಇನ್ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ. ಕನ್ನಡಿಗರನ್ನು ಬೈದಿದ್ದಕ್ಕೆ ಕ್ಷಮೆಯಾಚಿಸುವುದಾಗಿ ಕೈಮುಗಿದು ಕ್ಷಮೆ ಕೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.