ಬೆಂಗಳೂರು

ಬೆಂಗಳೂರು ಸುತ್ತಮುತ್ತ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್ ಪ್ಲ್ಯಾನ್: ಮುಂದಿನ 15 ವರ್ಷಗಳಲ್ಲಿ ನಗರದ ಚಿತ್ರಣವೇ ಬದಲು..!
ಈಗಾಗಲೇ 7,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ 5,600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಸಿಂಗಾಪುರದ ಪುಂಗೋಲ್ ಮಾದರಿಯಲ್ಲಿ ಎಐ ಸಿಟಿ ನಿರ್ಮಿಸುವುದಾಗಿ ನಮ್ಮ ಸರ್ಕಾರ ಘೋಷಿಸಿದೆ.

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!
ಸೋಮವಾರ ಬೆಂಗಳೂರಿನ ಜಿಕೆವಿಕೆ 52.5 ಮಿ.ಮೀ. ಮಳೆ ದಾಖಲಿಸಿದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42.5 ಮಿ.ಮೀ. ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 5.3 ಮಿ.ಮೀ. ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.8 ಮಿ.ಮೀ. ಮಳೆ ದಾಖಲಾಗಿದೆ.

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!
ಕರಾವಳಿ ಕರ್ನಾಟಕದಲ್ಲಿ ಮಂಗಳವಾರ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬುಧವಾರದಿಂದ ಶನಿವಾರದವರೆಗೆ ಕೆಲವೆಡೆ ಮಳೆಯಾಗಬಹುದು.

ಜೈಲು DIG ಸೋಮಶೇಖರ್ ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು!
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಶಂಕರ್ ಎಂಬಾತನನ್ನು ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬೆಂಗಳೂರಿನ ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರ..

Bengaluru Rains: ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ವಾಹನ ಸವಾರರ ಪರದಾಟ; ಮುಂದಿನ 2 ದಿನ ಮಳೆ
ಭಾರೀ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.

ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಸಾವು! ನಾಲ್ವರ ವಿರುದ್ಧ ಕೊಲೆ ಕೇಸ್ ದಾಖಲು
ಶನಿವಾರದಂದು ಮನೆಯಿಂದ ಹೊರಡುವಾಗ, ತಡವಾದರೆ ಬೆಳಿಗ್ಗೆ ವಾಪಸಾಗುವುದಾಗಿ ನಂದನ್ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಎಂದು ಕೇಸ್ ಕ್ಲೋಸ್: ಪಟ್ಟು ಬಿಡದ ತಾಯಿ; ಹೆತ್ತ ಕರುಳ ಅಳಲಿಗೆ ಕೋರ್ಟ್ ಸ್ಪಂದನೆ; ಕೊಲೆ ಪ್ರಕರಣ ದಾಖಲಿಸಲು ಆದೇಶ..!
ತಮ್ಮ ಪುತ್ರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ.

ಬೆಂಗಳೂರು: ಪತ್ನಿ ಜೊತೆಗಿದ್ದ ವಿಡಿಯೋ ಕಳುಹಿಸಿದ ಪ್ರಿಯಕರ; ಮನನೊಂದು ಆಟೋ ಚಾಲಕ ಆತ್ಮಹತ್ಯೆ!
ಮುನಿಕೃಷ್ಣ ಪತ್ನಿ ಕುಮಾರ್ ಎಂಬಾತನೊಂದಿಗೆ ಸುಮಾರು ಒಂದು ವರ್ಷದಿಂದ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಮಾರ್, ಮುನಿಕೃಷ್ಣ ಅವರ ಫೋನ್‌ಗೆ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.

