ಕೃಷ್ಣ-ಲೀಲಾ ಚಿತ್ರದ ಅಧಿಕೃತ ಟ್ರೇಲರ್ನಿರ್ದೇಶಕ ಶಶಾಂಕ್ ನಿರ್ದೇಶನದಲ್ಲಿ ನಟ ಅಜೇಯ್ ರಾವ್ ಹಾಗೂ ಕಿರುತೆರೆ ನಟಿ ಮಯೂರಿ ನಟಿಸಿರುವ ನೈಜ ಘಟನೆ ಆಧಾರಿತ ಚಿತ್ರ ಕೃಷ್ಣಲೀಲಾ ಚಿತ್ರದ ಅಧಿಕೃತ ಟ್ರೇಲರ್.
ಪ್ಲಸ್ ಚಿತ್ರದ ಟ್ರೈಲರ್ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ಪ್ಲಸ್ ಚಿತ್ರದ ಟ್ರೈಲರ್ ಸದ್ದಿಲ್ಲದೆ ಬಿಡುಗಡೆಯಾದರೂ 20 ಸಾವಿರ ಹಿಟ್ಸ್ ಪಡೆದುಕೊಂಡಿದೆ. ಅನಂತ್ನಾಗ್ ಮತ್ತು ರಕ್ಷಿತ್ ತಂದೆ-ಮಗನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕಾಣೆಯಾದ ತಂದೆಯನ್ನು ಮಗ ಹುಡುಕುವ ಕಥೆಯಿದೆಯಾ ಎಂಬ ಸೂಚನೆಯನ್ನು ಪ್ರೊಮೋ ನೀಡುತ್ತಿದೆ.
ರೈನ್ಕೋಟ್: ಈ ಚಿತ್ರದ ತುಂಬ ಡಬಲ್ ಮೀನಿಂಗ್ಗಾಲಿ ಚಿತ್ರದಲ್ಲಿ ಮಾಡಿದಂತೆ ಈ ಚಿತ್ರದಲ್ಲಿ ನಾನು ಡಬಲ್ ಮೀನಿಂಗ್ ಇಷ್ಟ ಪಡೋ ಪ್ರೇಕ್ಷಕರನ್ನು ನಿರಾಸೆ ಮಾಡುವುದಿಲ್ಲ ಎನ್ನುವ ಡೈಲಾಗ್ ಹೊಡೆಯುತ್ತಾ ತಮ್ಮ ಚಿತ್ರದ ತುಂಬ ಮೊದಲಿನಿಂದ ಕೊನೆಯವರೆಗೂ ಡಬಲ್ ಮೀನಿಂಗ್ ಡೈಲಾಗ್ಗಳಿವೆ ಎಂದು ಎದೆತಟ್ಟಿಕೊಂಡು ಹೇಳುತ್ತಾರೆ ರೈನ್ ಕೋಟ್ ಚಿತ್ರದ ನಿರ್ದೇಶಕ ಲಕ್ಕಿ.
'ರಂಗಿತರಂಗ' ಚಿತ್ರದ ಟ್ರೈಲರ್ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ 'ರಂಗಿತರಂಗ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಅನೂಪ್ ಭಂಡಾರಿ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಹೆಚ್ಕೆ ಪ್ರಕಾಶ್ ಅವರು ಬಂಡವಾಳ ಹೂಡಿದ್ದಾರೆ.
2014-ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ2014ರಲ್ಲಿ ಯೂಟ್ಯೂಬ್ನಲ್ಲಿ ಅತಿ ಹೆಚ್ಚುಬಾರಿ ಜನರು ವೀಕ್ಷಿಸಿದ ವಿಡಿಯೋಗಳಲ್ಲಿ 'ಭಯಾನಕ ಮಗು' ವಿಡಿಯೋ ಕೂಡ ಒಂದು. ಸುಮಾರು 4 ಕೋಟಿ 99 ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಭಯಾನಕ ರೋಬೋ ಮಗುವನ್ನು ತೊಟ್ಟಿಲಲ್ಲಿ ಹಾಕಿದ್ದಾಗ ಅದನ್ನು ನೋಡಿದ ಜನರ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ.
2014-ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋನಾಯಿಗೆ ದೊಡ್ಡ ಜೇಡದ ಹಾಗೆ ಅಲಂಕಾರ ಮಾಡಿ ಅದನ್ನು ಲಿಫ್ಟ್ನಲ್ಲಿ ಬಿಟ್ಟಾಗ ಅದನ್ನು ಕಂಡ ಜನರು ಗಾಬರಿಗೊಳಗಾಗಿ ಆಡಿದ ರೀತಿಯನ್ನು ಈ ವಿಡಿಯೋದಲ್ಲಿ ಚಿತ್ರಿಸಲಾಗಿದೆ. ಈ ವಿಡಿಯೋವನ್ನು ಸುಮಾರು 12 ಕೋಟಿ 37 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ.
2014-ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಆಧುನಿಕ ಕಾಲದಲ್ಲಿಯೂ ಹೆಣ್ಣನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲ ಎನ್ನುವುದಕ್ಕೆ ಅಮೆರಿಕದ ಖಾಸಗಿ ಸಂಸ್ಥೆಯೊಂದು ತಯಾರಿಸಿದ ಈ ವಿಡಿಯೋ ಸಾಕ್ಷಿಯಾಗಿದೆ. ಓರ್ವ ಯುವತಿ ನ್ಯೂಯಾರ್ಕ್ನ ಬೀದಿಯಲ್ಲಿ ಸತತ 10ಗಂಟೆಗಳ ಕಾಲ ಸುತ್ತಾಡುತ್ತಾಳೆ. ಈ ವೇಳೆ ಆಕೆ ಎದುರಿಸುವ ಪರಿಸ್ಥಿತಿಯನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಸುಮಾರು 3 ಕೋಟಿ 87 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಹೊಸವರ್ಷಕ್ಕೆ ಯೋಗ-ಹರಿ ಜೋಡಿ ಮಾಡಿದ ಟಿಪಿಕಲ್ ಸಾಂಗ್ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿ 2014ರ ಬಿಳ್ಕೋಟ್ಟು ಹೊಸ ವರ್ಷವನ್ನು ಆಹ್ವಾನಿಸಲು ಹೊಸ ಹಾಡೊಂದನ್ನು ಸೃಷ್ಟಿಸಿದ್ದು, ಯೂಟ್ಯೂಬ್ನಲ್ಲಿ ಸುದ್ದಿ ಮಾಡುತ್ತಿದೆ.
ಶಿವಂ ಚಿತ್ರದ ಟ್ರೈಲರ್ಬಸವಣ್ಣ ಶೀರ್ಷಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಉಪೇಂದ್ರ ಅಭಿನಯದ ಚಿತ್ರ ಇದೀಗ ಶಿವಂ ಆಗಿ ಮೂಡಿಬರುತ್ತಿದ್ದು, ಶಿವಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಉಪೇಂದ್ರರ ಡೈಲಾಗ್ಗಳು ಬಾರಿ ಕುತೂಹಲ ಮೂಡಿಸಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video