'ಮಹಾಲಕ್ಷ್ಮಿ ಯೋಜನೆ' ತಪಾಸಣೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ರಾಜ್ಯದ ಮಹತ್ವಾಕಾಂಕ್ಷೆಯ ‘ಮಹಾಲಕ್ಷ್ಮಿ’ ಯೋಜನೆಯ ಪರಿಣಾಮವನ್ನು ಪರಿಶೀಲಿಸಲು ಶಾಸಕ ನಿನ್ನೆ ಮಂಗಳವಾರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹೈದರಾಬಾದ್: ತೆಲಂಗಾಣದ ಇಬ್ರಾಹಿಂಪಟ್ಟಣಂ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಮಲ್ರೆಡ್ಡಿ ರಂಗಾರೆಡ್ಡಿ ಬಸ್ ತಪಾಸಣೆ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಪದೇಪದೆ ಮುಟ್ಟುತ್ತಿರುವ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮಹತ್ವಾಕಾಂಕ್ಷೆಯ ‘ಮಹಾಲಕ್ಷ್ಮಿ’ ಯೋಜನೆಯ ಪರಿಣಾಮವನ್ನು ಪರಿಶೀಲಿಸಲು ಶಾಸಕ ನಿನ್ನೆ ಮಂಗಳವಾರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪ್ರಯಾಣದ ವೇಳೆ 70 ವರ್ಷದ ರಂಗಾರೆಡ್ಡಿ ಅವರು ಬಸ್‌ನಲ್ಲಿ ನಿಂತಿದ್ದ ಯುವತಿಯೊಂದಿಗೆ ಮಾತನಾಡಿದರು. ಕಾಲೇಜಿಗೆ ತೆರಳಲು ಪ್ರತಿವರ್ಷ ಸುಮಾರು 45,000 ರೂ ವೆಚ್ಚವಾಗುತ್ತಿದ್ದು, ಮಹಾಲಕ್ಷ್ಮಿ ಯೋಜನೆಯಿಂದ ಉಪಕಾರವಾಗುತ್ತಿದೆ ಎಂದು ವಿದ್ಯಾರ್ಥಿನಿ ತಿಳಿಸಿದರು.
ಈ ವೇಳೆ ರಂಗಾರೆಡ್ಡಿ ಅವರು ವಿದ್ಯಾರ್ಥಿನಿಯ ಕೈ ಹಾಗೂ ತೋಳನ್ನು ಪದೇಪದೆ ಮುಟ್ಟುತ್ತಿರುವುದು ಮತ್ತು ಹಿಡಿಯಲು ಮುಂದಾಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಿದ್ಯಾರ್ಥಿನಿಗೆ ಮುಜುಗರವಾಗಿ ಕೈಯಿಂದ ದೂರ ಸರಿಯಲು ಪ್ರಯತ್ನಿಸುತ್ತಿರುವುದು ಗೋಚರಿಸಿದರೂ, ಶಾಸಕ ಕೈತೆಗೆಯಲು ಹಿಂದೇಟು ಹಾಕದಿರುವುದನ್ನು ಕಂಡು ಜನ ಬೈಯುತ್ತಿದ್ದಾರೆ.
ವಿಡಿಯೋ ವೈರಲ್; ತೀವ್ರ ಆಕ್ಷೇಪ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಗಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಚಿನ್ಮಯಿ ಶ್ರೀಪಾದ, ಶಾಸಕರ ವರ್ತನೆಯನ್ನು ಟೀಕಿಸಿ, ಇನ್ನೊಬ್ಬರ ಮೈಮುಟ್ಟಬೇಕಾದರೆ ಅವರ ಒಪ್ಪಿಗೆಯನ್ನು ಯಾವಾಗಲೂ ಗೌರವಿಸಬೇಕು ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಶಾಸಕರ ವಯಸ್ಸು ಎಷ್ಟೇ ಇರಲಿ, ಹೆಣ್ಣಿನ ಒಪ್ಪಿಗೆಯಿಲ್ಲದೆ ಮೈಮುಟ್ಟಬಾರದು ಎಂದಿದ್ದಾರೆ.
ಭಾರತ ರಾಷ್ಟ್ರ ಸಮಿತಿ (BRS) ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪ್ರವೀಣ್ ಕುಮಾರ್ ಅವರು ಕೂಡಲೇ ರಾಜ್ಯದ ಶೀ ಟೀಮ್ಸ್ ಹಾಗೂ ಮಹಿಳಾ ಸುರಕ್ಷತಾ ವಿಭಾಗ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ವರದಿ ಸಲ್ಲಿಸುವ ವೇಳೆಗೆ ರಂಗಾರೆಡ್ಡಿ ಅವರು ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ವೈಯಕ್ತಿಕ ಸುರಕ್ಷತೆಯ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




