ಪ್ರೋಯೋಗ್: ಯೋಗದ ಜನ್ಮಸ್ಥಳ!ಜೂನ್ 21ನ್ನು ಅಂತಾರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಸಂಗೀತ ಸಂಯೋಜನೆಯಲ್ಲಿ ಯೋಗದ ಜನ್ಮಸ್ಥಳವಾದ ಭಾರತದ ಸೋಬಗು ಸೌಂದರ್ಯವನ್ನು ಈ ವಿಡಿಯೋದಲ್ಲಿ ಬಿಂಬಿಸಲಾಗಿದೆ.
ವಿಚ್ಛೇದಿತ ಪತ್ನಿಗೆ "ಅರ್ಧ" ಪಾಲು ನೀಡಿದ ಪತಿರಾಯ!ಪತ್ನಿಯನ್ನು `ಅರ್ಧಾಂಗಿ' ಎನ್ನುತ್ತಾರೆ. ಜರ್ಮನಿಯ ಅಸಾಮಿಯೊಬ್ಬ ಈ ಪದವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾನೆ. ವಿಚ್ಛೇದನ ಪಡೆಯುವಾಗ ಪತ್ನಿಗೆ ತನ್ನ ಆಸ್ತಿಯ ಅರ್ಧಭಾಗವನ್ನು ಕೊಡುವುದಕ್ಕೆ ಡೆರ್ ಜೂಲಿ ಯಾವುದೇ ತಕರಾರೆತ್ತದೆ ಒಪ್ಪಿಕೊಂಡಿದ್ದ. ತನ್ನಲ್ಲಿರುವ ಎಲ್ಲ ವಸ್ತುಗಳನ್ನೂ ಸರಿಯಾಗಿ ಅರ್ಧಕ್ಕೆ ಕತ್ತರಿಸಿ, ಅದನ್ನು ಪತ್ನಿಗೆ ಕೊಟ್ಟಿದ್ದಾನೆ..!
ಆಂಧ್ರಪ್ರದೇಶದಲ್ಲಿ ಮೀನು ಮಳೆ..!ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಬಳಿಯ ಗೊಳ್ಳಮುಡಿ, ಪಲ್ಲಗಿರಿ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಆ ಮಳೆಯಲ್ಲಿ ಆಗಸದಿಂದ ಮಳೆ ಹನಿಯೊಂದಿಗೆ ರಾಶಿ ರಾಶಿ ಮೀನುಗಳು ಬಿದ್ದಿವೆ. ರಾತ್ರಿ ಇಡೀ ಭಾರೀ ಮಳೆ ಸುರಿದಿದ್ದು, ಬೆಳಗ್ಗೆ ಜಮೀನುಗಳಿಗೆ ಬಂದ ಜನರಿಗೆ ರಾಶಿ ರಾಶಿ ಮೀನು ಕಂಡು ಬಂದಿವೆ.
ಬಜರಂಗಿ ಭಕ್ತನಾಗಿ ಸಲ್ಮಾನ್ ಖಾನ್! ಬಜರಂಗಿ ಭಾಯಿಜಾನ್ ಅಧಿಕೃತ ಟ್ರೈಲರ್ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಹುನಿರೀಕ್ಷೀತ ಬಜರಂಗಿ ಭಾಯಿಜಾನ್ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಬಜರಂಗಿಯಾಗಿ ಮಿಂಚಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಅಪ್ಪ ಐ ಲವ್ ಯೂ...!ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ "ಅಪ್ಪನ ದಿನ" ವಿಶೇಷಕ್ಕಾಗಿ ವಿಶೇಷ ಜಾಹಿರಾತು ಹೊರತಂದಿದ್ದು, ಮಗಳ ಹೆಚ್ಚಾಗಿ ಪ್ರೀತಿಸುವ ತಂದೆ ತನ್ನ ದೈನಂದಿನ ಕಾರ್ಯದೊಂದಿಗೆ ಹೇಗೆ ತನ್ನ ಮಗಳನ್ನು ಸಂಭಾಳಿಸುತ್ತಾನೆ ಎಂಬುದೇ ಈ ಜಾಹಿರಾತಿನ ತಿರುಳಾಗಿದೆ. ಭಾರತೀಯರ ಮಟ್ಟಿಗೆ ಇದೊಂದು ಮನಮುಟ್ಟುವ ಜಾಹಿರಾತಾಗಿದೆ.
ಹ್ಯಾಪಿ ಫಾದರ್ಸ್ ಡೇ..!ಮಕ್ಕಳ ಜೀವನದಲ್ಲಿ ಅಪ್ಪನ ಪಾತ್ರ ಮತ್ತು ಅಪ್ಪನ ನೈಜತೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸುವ ಸಣ್ಣ ದೃಶ್ಯ ತುಣುಕು ಇದು.
ಮಗನ ಒಲಂಪಿಕ್ಸ್ ಓಟಕ್ಕೆ ಸಾಥ್ ನೀಡಿದ ತಂದೆ!ಇದೊಂದು ನೈಜ ಚಿತ್ರಣವಾಗಿದ್ದು, ಖ್ಯಾತ ಒಲಿಂಪಿಕ್ಸ್ ಓಟಗಾರ ಡೆರೆಕ್ ಓಟ ಚಾಲ್ತಿಯಲ್ಲಿರುವಂತೆಯೇ ಓಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಸಿಲುಕು ಮೈದಾನದಲ್ಲಿಯೇ ಕುಸಿಯುತ್ತಾನೆ. ಆದರೆ ತನ್ನ ಅಷ್ಟೂ ವರ್ಷಗಳ ಕನಸಾದ ಒಲಿಂಪಿಕ್ಸ್ ಓಟವನ್ನು ಪೂರ್ಣಗೊಳಿಸಲೇಬೇಕು ಎಂಬ ಒಂದೇ ಕಾರಣದಿಂದ ನೋವಿನಿಂದಲೇ ಟ್ರ್ಯಾಕ್ ನಲ್ಲಿ ಓಡುತ್ತಿದ್ದಾಗ ಮಗನ ಸ್ಥಿತಿ ಕಂಡ ತಂದೆ ರಕ್ಷಣಾ ಸಿಬ್ಬಂದಿಗಳ ತಡೆಯನ್ನೂ ಲೆಕ್ಕಿಸದೇ ಮಗನ ಜೊತೆಗೂಡುತ್ತಾನೆ. ಅಲ್ಲದೇ ಮಗ ಓಟವನ್ನು ಪೂರ್ಣಗೊಳಿಸುವಲ್ಲಿ ನೆರವಾಗುವ ಮೂಲಕ ಮಗನ ಕನಸನ್ನು ನನಸಾಗಿಸುತ್ತಾನೆ.
ಅಪ್ಪನ ಉಡುಗೊರೆ..!ದುಷ್ಟ ಚಟ ಮತ್ತು ದುಷ್ಟ ಸ್ನೇಹಿತರೊಂದಿಗೆ ಸೇರಿ ಹಾಳಾಗುವ ಮಗನನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತಂದೆ ಇದ್ದಾಗೆ ತಂದೆ ಮೇಲೆ ಮುನಿದ ಮಗ ಮನೆ ಬಿಟ್ಟು ಹೋಗುತ್ತಾನೆ. ಆದರೆ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿದ್ದ ವೇಳೆ ಅಪಘಾತವಾಗಿ ಮಗನ ಕಾಲುಗಳ ಮೂಳೆ ಮುರಿಯುತ್ತದೆ. ಬಳಿಕ ವಿಚಾರ ತಿಳಿದ ಮನೆಗೆ ಕರೆದೊಯ್ಯವ ಅಪ್ಪ ಮಗನ ಸ್ಥಿತಿ ನೋಡಲಾಗದೆ ಮಗನ ಆರೈಕೆ ಮಾಡುವ ಹೃದಯಸ್ಪರ್ಶಿ ಕಿರುಚಿತ್ರ ಇದಾಗಿದೆ.
ದೂರದ ಸಿಕ್ಸ್ ಹೊಡೆದ ಶೂರ ಯಾರು-ಪೀಟರ್ಸನ್ ಅಥವಾ ಕ್ರಿಸ್ ಗೇಲ್?ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸಿಕ್ಸ್ ಗಳ ಸರದಾರ ಎಂದರೆ ಎಲ್ಲರ ಚಿತ್ತ ಅರಿಯುವುದು ವೆಸ್ಟ್ ಇಂಡೀಸ್ ನ ದೈತ ಪ್ರತಿಭೆ ಕ್ರಿಸ್ ಗೇಲ್ ನತ್ತ. ಅದೇ ರೀತಿ ಇಂಗ್ಲೆಂಡ್ ನ ಕೆವಿನ್ ಪೀಟರ್ಸ್ನ್ ಸಹ ಕ್ರಿಕೆಟ್ ನ ದೈತ್ಯ ಬ್ಯಾಟ್ಸ್ ಮನ್ ಗಳು. ಈ ಇಬ್ಬರ ನಡುವೆ ಯಾರು ಅತ್ಯಂತ ದೂರದ ಸಿಕ್ಸರ್ ಹೊಡೆಯುತ್ತಾರೆ ಎಂಬುದಕ್ಕೊಸ್ಕರ ಸಿಪಿಎಲ್ ಟಿ20 ಪಂದ್ಯವೊಂದನ್ನು ನಡೆಸಿತು. ಇದರಲ್ಲಿ ಯಾರು ದೂರದ ಸಿಕ್ಸ್ ಬಾರಿಸುತ್ತಾರೆ ಅದನ್ನು ನೀವೆ ನೋಡಿ. ವಿಡಿಯೋ ಕೃಪೆ: ಸಿಪಿಎಲ್ ಟಿ20, Youtube
ಅಕ್ಷಯ್ ಕುಮಾರ್ 'ಬ್ರದರ್ಸ್' ಟ್ರೈಲರ್ ಯೂಟೂಬ್ ನಲ್ಲಿ ಸಂಚಲನಬಾಲಿವುಡ್ ನ ಬಹುನಿರೀಕ್ಷಿತ ಚಿತ್ರಗಳೊಂದಾದ ಅಕ್ಷಯ್ ಕುಮಾರ್ ಅಭಿನಯದ ಬ್ರದರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟೂಬ್ ನಲ್ಲಿ ಸಂಚಲನ ಮೂಡಿಸಿದೆ. ಬಿಡುಗಡೆಯಾದ 16 ಗಂಟೆಯಲ್ಲೇ 10 ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಕ್ರಿಕೆಟ್ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್