ವಿಡಿಯೋ

ಸುದೀಪ್ ಅಭಿನಯದ ರನ್ನ ಚಿತ್ರದ ಟ್ರೈಲರ್

ನಂದಕಿಶೋರ್ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ರನ್ನ ಚಿತ್ರದ ಅಫಿಶಿಯಲ್ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿ ಹರಿಪ್ರಿಯ, ರಚಿತಾರಾಮ್ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಸುದೀಪ್ ಅಭಿನಯದ ರನ್ನ ಚಿತ್ರದ ಟ್ರೈಲರ್
ಸಿಂಹದ ಬಾಯಿಂದಲೇ ಬೇಟೆ ಕದ್ದ ಬೇಟೆಗಾರರು!

ಸಿಂಹದ ಬಾಯಿಂದಲೇ ಬೇಟೆ ಕದ್ದ ಬೇಟೆಗಾರರು!

ನೈಸರ್ಗಿಕ ಮೃಗಾಲಯ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದಲ್ಲಿ ಪ್ರಾಣಿ ಸಂಕುಲ ಹಾಗೂ ಮಾನವರ ನಡುವೆ ಬದುಕಿಗಾಗಿ ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ. ಅದರಂತೆ ಮನುಷ್ಯರ ಕ್ರೌರ್ಯಕ್ಕೆ ಪ್ರಾಣಿಗಳು ಬಲಿಯಾದರೆ, ಕ್ರೂರ ಮೃಗಗಳ ಹಸಿವಿಗೆ ಮನುಷ್ಯರು ಬಲಿಯಾಗುತ್ತಾರೆ. ಈ ನಡುವೆ ಪ್ರಾಣಿಗಳು ಬೇಟೆಯಾಡಿದ ಆಹಾರವನ್ನು ಕೆಲ ಸಮೂದಾಯದ ಜನರು ಕದ್ದು ತರುವುದು ಸಾಮಾನ್ಯ. ಅದರಂತೆ ಇಲ್ಲಿರುವ ಬೊರೊಬೊ ಜನಾಂಗದ ಮೂವರು ಸಾಹಸಿಗರು ಹಸಿದ ಸಿಂಹಗಳು ಬೇಟೆಯಾಡಿದ ಕಾಡು ಎಮ್ಮೆ ಮಾಂಸವನ್ನು ಕದ್ದು ತರುವದು ಬಲು ರೋಚಕವಾಗಿದೆ. ವಿಡಿಯೋ ಕೃಪೆ: ಬಿಬಿಸಿ ಒನ್

ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಿಗೆ ಕನ್ನಡಪ್ರಭ.ಕಾಮ್ ಅಭಿನಂದನೆ

ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಿಗೆ ಕನ್ನಡಪ್ರಭ.ಕಾಮ್ ಅಭಿನಂದನೆ

"ನಾನು ಅವನಲ್ಲ ಅವಳು" ಚಿತ್ರದ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ಅತ್ಯುತ್ತಮ ಪ್ರಸಾದನ ಕಲಾವಿದರಿಗಾಗಿ ಪ್ರಶಸ್ತಿ ಪಡೆದ ರಾಜು ಮತ್ತು ನಾಗರಾಜು ಅವರಿಗೆ ಕನ್ನಡಪ್ರಭ ಡಾಟ್ ಕಾಂ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ನಾನು ಅವನಲ್ಲ ಅವಳು ಚಿತ್ರದ ಪ್ರಧಾನ ಪ್ರಸಾದನ ಕಲಾವಿದ ನಾಗರಾಜು ಮತ್ತು ರಾಜು ಅವರ ಗುರುಗಳಾದ ರಮೇಶ್ ಬಾಬು ಅವರಿಗೂ ಅಭಿನಂದನೆ ಸಲ್ಲಿಸಲಾಯಿತು.

ಆಶೀರ್ವದಿಸಿ ಅಂತ ತಾಳಿ ಕೊಟ್ಟರೆ, ತಾವೇ ತಾಳಿ ಕಟ್ಟಲು ಮುಂದಾದ ಸುಬ್ರಹ್ಮಣ್ಯಂ ಸ್ವಾಮಿ!

ಆಶೀರ್ವದಿಸಿ ಅಂತ ತಾಳಿ ಕೊಟ್ಟರೆ, ತಾವೇ ತಾಳಿ ಕಟ್ಟಲು ಮುಂದಾದ ಸುಬ್ರಹ್ಮಣ್ಯಂ ಸ್ವಾಮಿ!

ಮದುವೆ ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳನ್ನು ಕರೆಸುವುದು ಸಾಮಾನ್ಯ. ಅದರಂತೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಅವರು ಆಶೀರ್ವದಿಸಿ ಅಂತ ತಾಳಿ ಕೊಟ್ಟರೆ, ವಧುವಿಗೆ ತಾವೇ ತಾಳಿ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಮಹಿಳೆ ಅವರನ್ನು ಎಚ್ಚರಿಸದಿದ್ದರೆ ಅವರು ಎರಡನೇ ಮದುವೆಯಂತು ಆಗಿ ಹೋಗುತ್ತಿದ್ದರು.

ಗಂಗಾ ಶುದ್ಧೀಕರಣ ಬಗ್ಗೆ ಅರಿವು ಮೂಡಿಸಲು 'ನಮಾಮಿ ಗಂಗೆ'

ಗಂಗಾ ಶುದ್ಧೀಕರಣ ಬಗ್ಗೆ ಅರಿವು ಮೂಡಿಸಲು 'ನಮಾಮಿ ಗಂಗೆ'

ಗಂಗಾ ಶುದ್ಧೀಕರಣ ಯೋಜನೆಗೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಯೋಜನೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ ‘ನಮಾಮಿ ಗಂಗೆ’ ಎಂಬ ವಿಡಿಯೋವೊಂದನ್ನು ಸಿದ್ಧಪಡಿಸಿದ್ದು, ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ತ್ರಿಚೂರು ಸೋದರರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಶಯ ಗೀತೆಗೆ ಆದಿಶಂಕರಾಚಾರ್ಯರ ಗಂಗಾಷ್ಟಕದ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ನದಿಯ ತಟದ ಚಟುವಟಿಕೆಗಳು, ಭಕ್ತರು, ಗಂಗೆಯ ಮಹತ್ವವನ್ನು ಈ ಟ್ರೈಲರ್ ನಲ್ಲಿವೆ.

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಧಾರವಾಹಿ 'ಕ್ವಾಂಟಿಕೋ' ಟ್ರೇಲರ್

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಧಾರವಾಹಿ 'ಕ್ವಾಂಟಿಕೋ' ಟ್ರೇಲರ್

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಿಂದ ಹಾಲಿವುಡ್ ಗೆ ಜಿಗಿದಿರುವುದನ್ನು ಟ್ವೀಟ್ ಮಾಡಿದ್ದರು. ಹಾಲಿವುಡ್ಡಿನ ಧಾರವಾಹಿ 'ಕ್ವಾಂಟಿಕೋ'ದಲ್ಲಿ ಪ್ರಿಯಾಂಕ ನಟಿಸುತ್ತಿರುವುದಕ್ಕೆ ಬಾಲಿವುಡ್ ಸಂತಸ ವ್ಯಕ್ತಪಡಿಸಿತ್ತು. ಎಫ್ ಬಿ ಐ ಏಜೆಂಟ್ ಆಗಿ ಪಾತ್ರ ನಿರ್ವಹಿಸಿರುವ ಪ್ರಿಯಾಂಕ ೯/೧೧ ನಂತರ ಆರೋಪಿ ಶಂಕೆಗೆ ಗುರಿಯಾಗುವ ಕಥೆ ಇರುವಂತೆ ಕಾಣುವ ಈ ಟ್ರೇಲರ್ ಈಗ ಬಾಲಿವುಡ್ ನಲ್ಲಿ ಅತಿ ಜನಪ್ರಿಯವಾಗಿದೆ.

ಸಿಗರೇಟ್ ಕೊಡದ ಸಿಟ್ಟಿಗೆ ಪೆಟ್ರೋಲ್ ಬಂಕ್ಗೆ ಬೆಂಕಿಯಿಟ್ಟ ಮಹಿಳೆ

ಸಿಗರೇಟ್ ಕೊಡದ ಸಿಟ್ಟಿಗೆ ಪೆಟ್ರೋಲ್ ಬಂಕ್ಗೆ ಬೆಂಕಿಯಿಟ್ಟ ಮಹಿಳೆ

ಇಸ್ರೇಲ್ ನ ಜೆರುಸಲೇಂನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದ ವ್ಯಕ್ತಿ ಹತ್ತಿರ ಬಂದ ಯುವತಿಯೊಬ್ಬಳು ಸಿಗರೇಟ್ ಕೇಳಿದ್ದಾಳೆ. ಈ ವೇಳೆ ವ್ಯಕ್ತಿ ಸಿಗರೇಟ್ ಕೊಡದ ಸಿಟ್ಟಿಗೆ ಆಕೆ ವಾಪಸ್ ಬಂದು, ಪೆಟ್ರೋಲ್ ತುಂಬಿಸುತ್ತಿದ್ದ ಬದಿಗೆ ಸರಿದು, ಸಿಗರೇಟ್ ಲೈಟರ್ ಅನ್ನು ಹೊತ್ತಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.