ಥಿಂಕ್ಎಡು ಕನ್‌ಕ್ಲೇವ್ ಕಾರ್ಯಕ್ರಮದಲ್ಲಿ ಕಲಾಂ ಭಾಷಣ2013ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ನ ಇವೆಂಟ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ 'ಥಿಂಕ್ ಎಡು' ಕನ್‌ಕ್ಲೇವ್ ನಲ್ಲಿ ಪ್ರಬುದ್ಧ ಭಾಷಣ ಮಾಡಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ.
ಯಾರೇ ನೀ ಯಾರೇ ಸಪ್ನೊಂಕಿ ರಾಣಿ ಚಿತ್ರದ ಸಾಂಗ್ಸೃಜನ್ ಲೋಕೆಶ್, ಐಶ್ವರ್ಯಾ ಅಭಿನಯದ ಸಪ್ನೊಂಕಿ ರಾಣಿ ಚಿತ್ರವು ಇದೇ ತಿಂಗಳು 31ರಂದು ತೆರೆಗೆ ಬರಲು ಸಿದ್ದವಾಗಿದೆ. ಸೃಜನ್ ಐಶ್ವರ್ಯಾ ನಡುವಿನ ರೋಮಾಂಟಿಕ್ ಸಾಂಗ್ ಯಾರೇ ನೀ ಯಾರೇ.
ಪ್ರಿಯಕರನಿಗಾಗಿ ನಡು ರಸ್ತೆಯಲ್ಲಿಯೇ ಯುವತಿಯರಿಬ್ಬರ ಮಾರಾಮಾರಿ!ಪ್ರೀತಿಸಿದ ಹುಡುಗಿಗಾಗಿ ಹುಡುಗರು ಕಿತ್ತಾಟ ನಡೆಸಿದ ಎಷ್ಟೋ ಘಟನೆಗಳ ಕುರಿತು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದ ಮೀರತ್‍ನಲ್ಲಿ ಇಬ್ಬರು ಹುಡುಗಿಯರು ಒಬ್ಬ ಹುಡುಗನಿಗಾಗಿ ನಡು ರಸ್ತೆಯಲ್ಲಿಯೇ ಮಾರಾಮಾರಿ ನಡೆಸಿದ ಘಟನೆ ವರದಿಯಾಗಿದೆ.ಅಲ್ಲದೆ ಈ ಇಬ್ಬರು ಯುವತಿಯರು ಮಾರಾಮಾರಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ವಿಡಿಯೋ ಕೃಪೆ: A2ZMovies
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಂಡ ಭೂಮಿ: ನಾಸಾ ವಿಡಿಯೋಅಮೇರಿಕಾ ಬಾಹ್ಯಾಕಾಶ ಸಂಸ್ಥೆ 'ನಾಸಾ' ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಾಣುವ ಭೂಮಿಯ ನೋಟದ ಮನಮೋಹಕ ದೃಶ್ಯಗಳನ್ನು ಸೆರೆಹಿಡಿದಿದೆ.
ಮಜಾ ಸೃಜಾ ಅಭಿನಯದ 'ಸಪ್ನೊಂಕಿ ರಾಣಿ' ಟ್ರೇಲರ್ಸೃಜನ್ ಲೋಕೇಶ್ ಅಭಿನಯದ 'ಸಪ್ನೊಂಕಿ ರಾಣಿ' ಸಿನೆಮಾ ಟ್ರೇಲರ್ ಇಲ್ಲಿದೆ ನೋಡಿ. ಎ ಆರ್ ಬಾಬು ನಿರ್ದೇಶನದ ಈ ಚಲನಚಿತ್ರದಲ್ಲಿ 'ಐಶ್ವರ್ಯ' ನಾಯಕನಟಿ.
ಬಾಜಿರಾವ್ ಮಸ್ತಾನಿ ಚಿತ್ರದ ಟ್ರೈಲರ್ಭಾರತದಲ್ಲಿ ಇದೀಗ ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರಗಳು ತಯಾರಾಗುತ್ತಿವೆ. ಅದರಂತೆ 17ನೇ ಶತಮಾನದ ಮರಾಠಿ ಪೇಶ್ವೆಯ ಕಥಾಹಂದರವನ್ನು ಹೊಂದಿರುವ ಬಾಜಿರಾವ್ ಮಸ್ತಾನಿ ಸಿನಿಮಾವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಅಮೆರಿಕದಲ್ಲಿ ಕಾಡ್ಗಿಚ್ಚಿಗೆ ಸುಟ್ಟು ಕರಕಲಾದ ಕಾರು ಲಾರಿಗಳುಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾ ಬೆಟ್ಟದಲ್ಲಿನ ಕಾಡ್ಗಿಚ್ಚು ಜನ ನಿಭಿಡ ರಸ್ತೆವರೆಗೂ ನುಗ್ಗಿ ಬಂದ ಪರಿಣಾಮ ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿದ್ದ ಚಾಲಕರು ಓಡಿಹೋಗಿದ್ದರು. ಅಷ್ಟೇ ಅಲ್ಲ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸಪಡಬೇಕಾಯಿತು. ಲಾಸ್ ವೇಗಾಸ್ ಮತ್ತು ಕ್ಯಾಲಿಫೋರ್ನಿಯಾದ ರಸ್ತೆಯ ಮೇಲೆ ಕಾಡ್ಗಿಚ್ಚು ಹಬ್ಬಿತ್ತು ಇದರಿಂದ ಭಯಗೊಂಡ ಸುಮಾರು 20 ಜನರು ತಮ್ಮ ವಾಹನಗಳನ್ನು ಬಿಟ್ಟು ಓಡಿಹೋಗಿದ್ದರು. ಕಾಡ್ಗಿಚ್ಚಿಗೆ 20ಕ್ಕೂ ಅಧಿಕ ವಾಹನಗಳು ಭಸ್ಮವಾಗಿ ಹೋಗಿ, ದಟ್ಟವಾದ ಕಪ್ಪು ಹೊಗೆ, ಬೆಂಕಿಯ ತಾಪದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.ವಿಡಿಯೋ ಕೃಪೆ: ಅಸೋಸಿಯೇಟೆಡ್ ಪ್ರೆಸ್
ಹಸಿದ ಮೊಸಳೆಗೆ ಹಂದಿ ಆಹಾರವಾಗುವಂತೆ ಮಾಡಿದ ಪ್ರವಾಸಿಗರುಮನುಷ್ಯ ಸ್ವಭಾವತ ಕ್ರೂರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಲ್ಲ ಎನ್ನುವುದಕ್ಕೆ ಅಮೆರಿಕಾದಲ್ಲಿ ಈ ಪ್ರವಾಸಿಗರು ಕಾಡುಪ್ರಾಣಿಯೊಂದಿಗೆ ನಡೆದುಕೊಂಡ ರೀತಿಯೇ ಉತ್ತಮ ಉದಾಹರಣೆ. ಲೂಸಿಯಾನಾದ ನ್ಯೂ ಆರ್ಲಿಯನ್ಸ್ ನಲ್ಲಿ ಮೊಸಳೆಗಳು ಇರುವ ಹೊಳೆಯಲ್ಲಿ ಬೋಟ್ ಒಂದರಲ್ಲಿ ಸಾಗುತ್ತಿದ್ದ ಪ್ರವಾಸಿಗರು ಹೊಳೆಯ ದಡದಲ್ಲಿ ಗುಂಪಾಗಿ ನಿಂತಿದ್ದ ಕಾಡು ಹಂದಿಗಳಿಗೆ ಬ್ರೆಡ್ಡಿನ ತುಂಡುಗಳನ್ನು ಎಸೆದು ಅವುಗಳಲ್ಲಿನ ಒಂದು ಹಂದಿ ಹಸಿದ ಮೊಸಳೆಗೆ ಆಹಾರವಾಗುವಂತೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.
ಮಾಂಝಿ ದಿ ಮೌಂಟೇನ್ ಮೆನ್ ಚಿತ್ರದ ಟ್ರೈಲರ್ನೈಜ ಘಟನೆಗಳನ್ನಾದರಿಸಿದ ಚಿತ್ರಗಳು ಆಗಾಗ ತೆರೆಗೆ ಅಪ್ಪಳಿಸಿರುತ್ತವೆ. ಪ್ರೀತಿಯಲ್ಲಿ ಬಿದ್ದು ಪ್ರೇಯಸಿಯ ನೆನಪಿಗಾಗಿ ಪ್ರೇಮಿ ಎನ್ನನ್ನ ಬೇಕಾದರು ಮಾಡಲು ಸಿದ್ಧರಾಗುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಪತ್ನಿಯ ಸಾವಿಗೆ ಕಾರಣವಾದ 300 ಅಡಿ ಬೆಟ್ಟವನ್ನೇ ಕಡಿದು ದಾರಿ ಮಾಡಿದ ದಶರಥ ಮಾಂಝಿ ಎಂಬ ಸಾಹಸಿ ಪ್ರೇಮಿ ಕಥೆ ಇದಾಗಿದೆ. ಚಿತ್ರದ ಹೆಸರೇ ಮಾಂಝಿ-ದಿ ಮೌಂಟೇನ್ ಮೆನ್ ಅಂತ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.
ಬೀಚಿಗೆ ಬಂದ ಶಾರ್ಕ್ ಮರಿ; ರಕ್ಷಣೆಇಂಗ್ಲೆಂಡಿನ ಚಾತಮ್ ನಗರದ ಕೇಪ್ ಗಾಡ್ ಬೀಚಿಗೆ ಸೋಮವಾರ ವಿಶೇಶ ಅತಿಥಿ ಭೇಟಿ ನೀಡಿದೆ. ದಿ ಗ್ರೇಟ್ ವೈಟ್ ಶಾರ್ಕ್ ಜಾತಿಯ ಮರಿಯೊಂದು ತೇಲಿ ದಡಕ್ಕೆ ಬಂದಿದೆ. ಈ ಶಾರ್ಕ್ ಮರಿ ಏಳು ಅಡಿ ಉದ್ದವಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಅಂಬೋಣ. ರಕ್ಷಣಾ ಅಧಿಕಾರಿಗಳು ಬರುವವರೆಗೆ ಬೀಚಿನಲ್ಲಿ ನೆರೆದಿದ್ದ ಜನ ಶಾರ್ಕ್ ಮೇಲೆ ನೀರು ಸುರಿದು ಅದು ಜೀವಂತವಾಗಿರುವಂತೆ ನೋಡಿಕೊಂಡು ಪ್ರಾಣಿಸ್ನೇಹ ಮೆರೆದಿದ್ದಾರೆ. ನಂತರ ಅಧಿಕಾರಿಗಳು ಶಾರ್ಕ್ ರಕ್ಷಣೆ ಮಾಡಿ ಸಮುದ್ರಕ್ಕೆ ಕೊಂಡೊಯ್ದು ಬಿಟ್ಟ ವಿಡಿಯೋ ಇದು.
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್