ವಿಷಪೂರಿತ ಪಾದರಸ ಹೊರಹಾಕುವ ಯೂನಿಲಿವರ್ ವಿರುದ್ಧ ರಾಪ್ ಸಾಂಗ್
ತಮಿಳುನಾಡಿನ ಕೊಡೈಕೆನಾಲ್’ನಲ್ಲಿರುವ ಯೂನಿಲಿವರ್ ಕಂಪನಿಯ ಕಾರ್ಖಾನೆಯು ವಿಷಪೂರಿತ ಪಾದರಸವನ್ನು ಹೊರಹಾಕುತ್ತಿದ್ದು, ಇದರಿಂದ ಅಲ್ಲಿನ ಸ್ಥಳೀಯ ಪರಿಸರ ಮತ್ತು ಕೆಲಸಗಾರರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಇದನ್ನು ಮನಗಂಡ ಚೆನೈ ಮೂಲದ ರಾಪರ್ ಸೋಫಿಯಾ ಅಶ್ರಫ್ ಪ್ರತಿಭಟನೆಗೆ ಬೇರೆಯದೆ ದಾರಿ ತುಳಿದಿದ್ದು, ಈಕೆ ಯುನಿಲಿವರ್ ಸಂಸ್ಥೆಯ ವಿರುದ್ಧ ರಾಪ್ ಸಾಂಗ್(Rap song) ಒಂದನ್ನು ತಯಾರು ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.