ಗಣೇಶ ಜನ್ಮ ತಾಳಿದ ಕಥೆಪಾರ್ವತಿ ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿ, ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಬಾಗಿಲು ಕಾಯಲು ನೇಮಿಸುತ್ತಾಳೆ. ಅಲ್ಲಿಗೆ ಬಂದ ಕೈಲಾಸಪತಿ ಶಿವನೊಂದಿಗೆ ಬಾಲಕನ ವಾಗ್ವಾದ ಮತ್ತು ಮುಂದಿನ ಕಥೆ. ವಿಡಿಯೋ ಕೃಪೆ: ಶಿಮಾರೊ
ಗಣಪತಿ ಸ್ತೋತ್ರಗಣೇಶನನ್ನು ಪೂಜಿಸುವ ಸಂದರ್ಭದಲ್ಲಿ ಗಣೇಶನ ಸ್ತೋತ್ರದೊಂದಿಗೆ ನಾವು ಮನಸ್ಫೂರ್ತಿಯಾಗಿ ಧ್ಯಾನಿಸಿ ಗಣೇಶನನ್ನು ಒಲಿಸಿಕೊಳ್ಳಬಹುದು. ಗಣೇಶ್ ಸ್ತೋತ್ರ ವಿಡಿಯೋ. ವಿಡಿಯೋ ಕೃಪೆ: ಸಿದ್ದೇಶ ಬಿರ್ಜೆ
ಶ್ರೀನಿವಾಸ ಕಲ್ಯಾಣ ಅಧಿಕೃತ ಟೀಸರ್ಹೊಸಬರೆ ಸೇರಿ ಮಾಡಿರುವ ಶ್ರೀನಿವಾಸ ಕಲ್ಯಾಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಪ್ರೀತಿ, ಪ್ರೇಮ, ಮದುವೆಗೆ ಹೊಸ ತರದ ವ್ಯಾಖ್ಯಾನ ಕೊಟ್ಟಂತಿದೆ. ಚಿತ್ರದಲ್ಲಿ ನಾಯಕನಾಗಿ ಶ್ರೀನಿವಾಸ, ನಾಯಕಿಯಾಗಿ ಕವಿತ ಅಭಿನಯಿಸಿದ್ದಾರೆ.
ಮೆಕ್ಕಾ ಕ್ರೇನ್ ದುರಂತದ ಭೀಕರ ದೃಶ್ಯವಳಿಯ ವಿಡಿಯೋಸುಮಾರು 107 ಮಂದಿಯ ಧಾರುಣ ಸಾವಿಗೆ ಕಾರಣವಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದ ಕ್ರೇನ್ ದುರಂತದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಕ್ರೇನ್ ಏಕಾಏಕಿ ಬೃಹತ್ ಮಸೀದಿಯ ಮೇಲೆ ಬಿದ್ದ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಹಳ್ಳಿಯ ಅತೀ ದೊಡ್ಡ ಹೆಸರನ್ನು ಚಾಣಾಕ್ಷವಾಗಿ ಉಚ್ಛರಿಸಿದ ನಿರೂಪಕ..!ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್ ಡಟನ್. ಈತ ಆ ಚಾನೆಲ್ಲಿನಲ್ಲಿ ವೆದರ್ ಆ್ಯಂಕರ್. ಮೊನ್ನೆ ಸೆ.9ರಂದು ಈತನ ಹೆಸರು ವಿಶ್ವವ್ಯಾಪಿ ಆಯಿತು. ಈತನ ಸ್ಪಷ್ಟ ಉಚ್ಛಾರಣೆಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿದು ಬಂತು. ಅಂದಹಾಗೆ, ಈತನನ್ನು ಜಗವ್ಯಾಪಿ ಮಾಡಿಸಿದ್ದು ನಾರ್ತ್‍ವೆಸ್ಟ್ ವೇಲ್ಸ್ ನ ಒಂದು ಹಳ್ಳಿ.
ಧ್ರುವ ಸರ್ಜಾ 'ಭರ್ಜರಿ' ಫಸ್ಟ್ ಲುಕ್ಅದ್ಧೂರಿ, ಬಹದ್ದೂರ್ ಚಿತ್ರಗಳ ಭರ್ಜರಿ ಯಶಸ್ಸಿನೊಂದಿಗೆ ಧ್ರುವ ಸರ್ಜಾ ಭರ್ಜರಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಭರ್ಜರಿಯಾಗಿ ಕಾಣಿಸಿದ್ದಾರೆ. ಧ್ರುವಾಗೆ ರಚಿತ ರಾಮ್ ಸಾಥ್ ನೀಡುತ್ತಿದ್ದಾರೆ.
ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಟ್ರೈಲರ್ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ತನ್ನ ಮೇಕಿಂಗ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ. ಚಿತ್ರವನ್ನು ಮಂಜು ಮಿತ್ರಾ ಅವರು ನಿರ್ದೇಶಿಸಿದ್ದು, ಸಿ ಕೆಂಪರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ವಿ ಮನೋಹರ್ ಅವರು ಸಂಗೀತ ನೀಡಿದ್ದಾರೆ.
ವಿಮಾನಕ್ಕೆ ಬೆಂಕಿ: ಕೂದಲೆಳೆ ಅಂತರದಲ್ಲಿ 172 ಮಂದಿ ಪಾರಾದ ವಿಡಿಯೋಅಮೆರಿಕಾದ ಲಾಸ್ ವೇಗಸ್ ನಲ್ಲಿ ಮಂಗಳವಾರ ಟೇಕ್ ಆಫ್ ಆಗಲು ಸಿದ್ಧವಾಗಿ ನಿಂತಿದ್ದ ಬ್ರಿಟಿಷ್ ಏರ್ ವೇಸ್ ನ ವಿಮಾನವೊಂದು ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ. ಬೆಂಕಿ ಅವಗಡದಲ್ಲಿ 16 ಮಂದಿಗೆ ಸುಟ್ಟು ಗಾಯಗಳಾಗಿದ್ದು, ವಿಮಾನದಲ್ಲಿದ್ದ 172 ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ಈ ದೃಶ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕೃಪೆ: ಡೈಲಿ ವಿಡಿಯೋಸ್
ಟೆಸ್ಟ್ ಡ್ರೈವ್ ನೆಪ ಹೇಳಿ ಹಾರ್ಲೆ ಡೇವಿಡ್ಸನ್ ಬೈಕ್‌ನೊಂದಿಗೆ ಕಳ್ಳ ಪರಾರಿ!ಹೈದರಾಬಾದ್ ಬಂಜಾರಾ ಹಿಲ್ಸ್ ನ ಶೋರೂಂವೊಂದರಲ್ಲಿ ಖತರ್ನಾಕ್ ಕಳ್ಳನೊಬ್ಬ ಟೆಸ್ಟ್ ಡ್ರೈವ್ ನೆಪ ಹೇಳಿ 6 ಲಕ್ಷ ರು. ಮೊತ್ತದ ಹಾರ್ಲೆ ಡೇವಿಡ್ಸನ್ ಬೈಕ್ ನೊಂದಿಗೆ ಪರಾರಿಯಾಗಿದ್ದಾನೆ. ಬೈಕ್ ನೊಂದಿಗೆ ಕಳ್ಳ ಪರಾರಿಯಾಗಿದ್ದು, ಶೋರೂಂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಕಳ್ಳ ಕಾಸ್ಟ್ಲಿ ಬೈಕ್ ನೊಂದಿಗೆ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಕೃಪೆ: ಟೆಕ್ ವರ್ಲ್ಡ್
ಗರ್ಲ್ ಫ್ರೆಂಡ್ ಜೊತೆ ಹೆಂಡ್ತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಕೊಂಡ ಗಂಡ..!ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಗೋವಾಗೆ ತೆರಳಿದ್ದ ಪತಿಯೊಬ್ಬ ಪಣಜಿ ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್