ವಿಡಿಯೋ

ವಿಮಾನದ ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಸೂರ್ಯಗ್ರಹಣ

ಬುಧವಾರ ಬೆಳಗ್ಗೆ ಗೋಚರವಾದ ಸೂರ್ಯಗ್ರಹಣದ ಸಂಪೂರ್ಣ ಚಿತ್ರಣವನ್ನು ಅಲಸ್ಕಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಸುಮಾರು 35 ಸಾವಿರ ಅಡಿಗಳ ಎತ್ತರದಿಂದ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ಅಪೂರ್ವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ಸೆರೆ ಹಿಡಿದ ಸೂರ್ಯಗ್ರಹಣದ ವಿಡಿಯೋ ಇಲ್ಲಿದೆ.

ವಿಮಾನದ ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಸೂರ್ಯಗ್ರಹಣ
ನಡುರಸ್ತೆಯಲ್ಲೇ ಅಡ್ಡಾಡಿದ ಹುಲಿರಾಯ

ನಡುರಸ್ತೆಯಲ್ಲೇ ಅಡ್ಡಾಡಿದ ಹುಲಿರಾಯ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಅಧಿಕ ಅಂತಹ ದಟ್ಟನೆಯಲ್ಲಿ ಹುಲಿಯೊಂದು ರಸ್ತೆ ಮಧ್ಯೆ ಅಡ್ಡಾಡಿದರೆ ಜನರ ಪರಿಸ್ಥಿತಿ ಏನಾಗಬಹುದು. ಹೌದು ಇಂಥದ್ದೊಂದು ಘಟನೆ ನಡೆದಿದ್ದು ಖತಾರ್‌ನ ದೋಹಾದಲ್ಲಿ. ಜನ ನೋಡ ನೋಡುತ್ತಿದ್ದಂತೆಯೇ ಒಂದು ಲಾರಿಯಿಂದ ಹುಲಿ ಛಂಗನೇ ನೆಗೆದಿದ್ದಲ್ಲದೇ ಇಡೀ ರಸ್ತೆಯಲ್ಲಿ ಅಡ್ಡಾಡಿದೆ! ಟ್ರಾಫಿಕ್‌ ಇರುವಾಗಲೇ ಹುಲಿ ಅಡ್ಡಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಅಂತರ್ಜಾಲದಲ್ಲಿ ವೈರಲ್‌ ಆಗಿದೆ.