ಮನರಂಜನೆ

ಸಿಂಹ ಹಾಕಿದ ಹೆಜ್ಜೆ ಚಿತ್ರದ ಟೀಸರ್

ವಿಕ್ರಮ್ ನಿರ್ದೇಶಿಸಿರುವ ಸಿಂಹ ಹಾಕಿದ ಹೆಜ್ಜೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರೀತಂ ಮತ್ತು ಅಮೃತ ಅಭಿನಯಿಸಿದ್ದಾರೆ. ಚಿತ್ರವನ್ನು ಪಾರ್ಥಸಾರಥಿ ಎಂಬುವರು ನಿರ್ಮಿಸಿದ್ದಾರೆ.

ಸಿಂಹ ಹಾಕಿದ ಹೆಜ್ಜೆ ಚಿತ್ರದ ಟೀಸರ್
ದಯವಿಟ್ಟು ಗಮನಿಸಿ ಚಿತ್ರದ 'ಸಂಚಾರಿ' ವಿಡಿಯೋ ಸಾಂಗ್ ವೈರಲ್

ದಯವಿಟ್ಟು ಗಮನಿಸಿ ಚಿತ್ರದ 'ಸಂಚಾರಿ' ವಿಡಿಯೋ ಸಾಂಗ್ ವೈರಲ್

ಮಲ್ಟಿಸ್ಟಾರ್ಸ್ ಚಿತ್ರವಾಗಿರುವ ದಯವಿಟ್ಟು ಗಮನಿಸಿ ಚಿತ್ರದ ಸಂಚಾರಿ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಹಾಡಿನಲ್ಲಿ ಅವಿನಾಶ್ ಶಟಮರ್ಶನ ಕಾಣಿಸಿಕೊಂಡಿದ್ದಾರೆ. ಅಲೆಮಾರಿಯೊಬ್ಬ ಗೊತ್ತು ಗುರಿ ಇಲ್ಲದ ಸಂಚಾರ ಕೈಗೊಳ್ಳುವ ಬಗ್ಗೆ ಕುತೂಹಲಕಾರಿಯಾಗಿ ವಿಡಿಯೋ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ರೋಹಿತ್ ಪದಕಿ ಎಂಬುವರು ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ್ ಸಂಯೋಜಿಸಿದ್ದು ಸಂಚಾರಿ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ.

ಗಮನ ಸೆಳೆದ 'ಮೇಕಿಂಗ್ ಆಫ್ ಟಗರು' ವಿಡಿಯೋ

ಗಮನ ಸೆಳೆದ 'ಮೇಕಿಂಗ್ ಆಫ್ ಟಗರು' ವಿಡಿಯೋ

ನಿರ್ದೇಶಕ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಟಗರು' ಸಿನೆಮಾದ ಚಿತೀಕರಣದ ಮೇಕಿಂಗ್ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಸಿನೆಮಾದಲ್ಲಿ ಧನಂಜಯ್, ಮಾನ್ವಿತಾ, ಭಾವನಾ ಕೂಡ ನಟಿಸಿದ್ದಾರೆ. ನೈಜ ತಾಣಗಳಲ್ಲಿ ಚಿತ್ರೀಕರಿಸುವ ಸೂರಿ ಅವರ ಪ್ರತಿಭೆಯನ್ನು ಈ ವಿಡಿಯೋದಲ್ಲಿ ಕಾಣಬವುದಾಗಿದೆ.