ಬಾಲಿವುಡ್

'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!

ನಾನಾ ಪಾಟೇಕರ್ ಅವರು ಅಕ್ಟೋಬರ್ 8 ರಂದು 75 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಪುಣೆ ಸಮೀಪದ ಡಾಂಜೆ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ನಾನಾ ಪಾಟೇಕರ್ ಮತ್ತು ತನುಶ್ರೀ ದತ್ತಾ
Published On :

ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಗೆ ಮುನ್ನ ಬಾಲಿವುಡ್ ಅಥವಾ ಮಾಧ್ಯಮದ ಯಾರೊಬ್ಬರೂ ಅವರ ಮೃತದೇಹವನ್ನು ನೋಡಿಲ್ಲ ಎಂದು ಹೇಳುವ ಮೂಲಕ ತನುಶ್ರೀ ದತ್ತಾ ಅವರ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸೋಮವಾರ ರಾತ್ರಿ ನಡೆದ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ, ನಾನಾ ಪಾಟೇಕರ್ ಅವರ ಕುಟುಂಬದವರು ಅವರ ಮೃತದೇಹವನ್ನು ಸರಿಯಾಗಿ ನೋಡಿದ್ದಾರೆಯೇ ಮತ್ತು ಮಧ್ಯರಾತ್ರಿಯಲ್ಲಿಯೇ ಅಂತ್ಯಕ್ರಿಯೆಯನ್ನು ಏಕೆ ನಡೆಸಲಾಯಿತು ಎಂಬುದರ ಕುರಿತು ನಟಿ ಪ್ರಶ್ನಿಸಿದ್ದಾರೆ.

ನಾನಾ ಪಾಟೇಕರ್ ಅವರು ಅಕ್ಟೋಬರ್ 8 ರಂದು 75 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಪುಣೆ ಸಮೀಪದ ಡಾಂಜೆ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ ತನುಶ್ರೀ, "ಬಾಲಿವುಡ್ ಮತ್ತು ಮಾಧ್ಯಮದಲ್ಲಿ ಯಾರೊಬ್ಬರೂ ನಾನಾ ಪಾಟೇಕರ್ ಅವರ ಮೃತದೇಹವನ್ನು ನೋಡಿಲ್ಲ. ಮಧ್ಯರಾತ್ರಿಯಲ್ಲಿಯೇ ಅಂತ್ಯಕ್ರಿಯೆ ನಡೆಸುವ ಅವಸರವೇನಿತ್ತು?" ಎಂದು ಪ್ರಶ್ನಿಸಿದರು. ಹಿರಿಯ ನಟನಿಗೆ ಯಾವುದೇ ಶ್ರದ್ಧಾಂಜಲಿ ಸಭೆಯನ್ನು ಏಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದ ಅವರು, ಚಲನಚಿತ್ರೋದ್ಯಮ ಮತ್ತು ಮಾಧ್ಯಮದ ಜನರು ಗೌರವ ಸಲ್ಲಿಸಲು ಅವಕಾಶವಿರಬೇಕಿತ್ತು ಎಂದು ಹೇಳಿದರು.

"ಅಂತಹ ದೊಡ್ಡ ದಿಗ್ಗಜ, ಅಂತಹ ಮಹಾನ್ ವ್ಯಕ್ತಿ. ಬಾಲಿವುಡ್‌ನವರು ಮತ್ತು ಮಾಧ್ಯಮದವರು ಬಂದು, ಮೃತದೇಹವನ್ನು ನೋಡಿ, ಗೌರವ ಸಲ್ಲಿಸಲು ಅನುಕೂಲವಾಗುವಂತೆ ಒಂದು ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಬೇಕಿತ್ತು. ಹಿಂದೂ ಸಂಪ್ರದಾಯದಂತೆ, ಜನರು ಸಭೆಗೆ ಹಾಜರಾಗಿ, ಮೃತದೇಹವನ್ನು ಸ್ಪರ್ಶಿಸಿ, ನಮಸ್ಕರಿಸಿ, ಮೃತರನ್ನು ತಮ್ಮ ಕಣ್ಣಾರೆ ನೋಡುತ್ತಾರೆ," ಎಂದು ತನುಶ್ರೀ ತಿಳಿಸಿದ್ದಾರೆ.

ದಹನಕ್ರಿಯೆಗೆ ಮುನ್ನ ನಾನಾ ಅವರ ಕುಟುಂಬದವರು ಅವರ ಮುಖವನ್ನು ನೋಡಿದ್ದಾರೆಯೇ ಎಂದೂ ತನುಶ್ರೀ ಪ್ರಶ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸೆಲೆಬ್ರಿಟಿಗಳು ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

"ಬಾಲಿವುಡ್‌ನಲ್ಲಿ ಯಾರೂ ಮೃತದೇಹವನ್ನು ನೋಡಿಲ್ಲ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು, ಆದರೆ ಅವರು ನಿಜವಾಗಿಯೂ ಮೃತದೇಹವನ್ನು ನೋಡಿದ್ದಾರೆಯೇ? ಕುಟುಂಬದವರು ಅದನ್ನು ಸರಿಯಾಗಿ ನೋಡಿದ್ದಾರೆಯೇ? ಯಾರ ಅಂತ್ಯಕ್ರಿಯೆಯನ್ನು ನಡೆಸಲಾಯಿತು? ಅವರ ಮುಖವನ್ನು ಮುಚ್ಚಲಾಗಿತ್ತು. ಗ್ರಾಮಸ್ಥರು ಇಂತಹ ಪ್ರಶ್ನೆಗಳನ್ನು ಕೇಳದಿರಬಹುದು, ಆದರೆ ಇತರರು ಕೇಳುತ್ತಾರೆ ಎಂದಿದ್ದಾರೆ. ನಾನಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಯಾವುದೇ ಫೋಟೋಗಳು ಅಥವಾ ವೀಡಿಯೊಗಳು ಏಕೆ ಹೊರಬಂದಿಲ್ಲ ಎಂಬುದರ ಕುರಿತೂ ನಟಿ ಪ್ರಶ್ನಿಸಿದರು.

"ನನಗೆ ಅಪಘಾತವಾದಾಗಲೂ ಫೋಟೋಗಳು ಮತ್ತು ವೀಡಿಯೊಗಳು ಹೊರಬಂದಿದ್ದವು. ಆದರೆ ಇಲ್ಲಿ, ನಾನಾ ಪಾಟೇಕರ್ ಅವರ ಒಂದೇ ಒಂದು ವೀಡಿಯೊ ಕೂಡ ಹೊರಬರಲಿಲ್ಲ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಹಿಂದೂ ಸಂಪ್ರದಾಯಗಳನ್ನು ಉಲ್ಲೇಖಿಸಿದ ತನುಶ್ರೀ, ಅಂತ್ಯಕ್ರಿಯೆ ನಡೆದ ಸಮಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ನಮ್ಮ ಧರ್ಮದಲ್ಲಿ, ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆಯನ್ನು ನೆರವೇರಿಸುವುದಿಲ್ಲ. ಹಾಗಿದ್ದಲ್ಲಿ, ಮಧ್ಯರಾತ್ರಿಯಲ್ಲಿಅಂತ್ಯ ಸಂಸ್ಕಾರವನ್ನು ಏಕೆ ನಡೆಸಲಾಯಿತು? ಅಂತಹ ಅವಸರವೇನಿತ್ತು? ಕತ್ತಲೆಯಲ್ಲಿ ಅಂತ್ಯಕ್ರಿಯೆಯನ್ನು ಏಕೆ ಮಾಡಲಾಯಿತು? ಎಂದು ಪ್ರಶ್ನಿಸಿದ್ದಾರೆ.

ದಹನ ಮಾಡಲಾದ ಮೃತದೇಹ ನಾನಾ ಅವರದ್ದಲ್ಲ ಎಂದು ಪ್ರತಿಪಾದಿಸಿದ ತನುಶ್ರೀ, ಆ ನಟ ಸಿಂಗಾಪುರ ಅಥವಾ ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು ಎಂದು ಊಹಿಸಿದ್ದಾರೆ. ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ಸಾವಿನ ನಾಟಕವಾಡಿ, ನಕಲಿ ಮರಣ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಒಂದು ವೇಳೆ ಅವರು ತಮ್ಮ ರೂಪವನ್ನು ಬದಲಾಯಿಸಿಕೊಂಡಿದ್ದರೆ, ಡಿಎನ್‌ಎ (DNA) ಪರೀಕ್ಷೆಯನ್ನು ನಡೆಸಬೇಕು ಎಂದೂ ಅವರು ಸಲಹೆ ನೀಡಿದರು. ಅಕ್ಟೋಬರ್ 8 ರಂದು, ನಾನಾ ಪಾಟೇಕರ್ ಅವರಿಗೆ ಅಂತಿಮ ಗೌರವ ಸಲ್ಲಿಸಲು ಬಾಂಬೋಲಿಮ್‌ನ ಜಿಎಂಸಿ (GMC) ಶವಾಗಾರದ ಬಳಿ ಅಪಾರ ಜನಸಾಗರವೇ ಸೇರಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.