ಮನರಂಜನೆ

ಜಯ ಜಯ ಸಾಂಬ ಸದಾಶಿವ ಶಂಕರ

ಗುರು ಶಿಷ್ಯರು ಚಿತ್ರದಲ್ಲಿ ಮಂಜುಳ ಶಿವನನ್ನು ಹೊಗಳಿ ಹಾಡುವ ಹಾಡು.

ಜಯ ಜಯ ಸಾಂಬ ಸದಾಶಿವ ಶಂಕರ
'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಟ್ರೇಲರ್

'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಟ್ರೇಲರ್

ತಮಿಳುನಾಡು ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನಾಧಾರಿತ ಸಿನೆಮಾ 'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಚಿತ್ರದಲ್ಲಿ 'ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ದೇವ್ ಪಟೇಲ್ ರಾಮಾನುಜನ್ ಪಾತ್ರದಲ್ಲಿ ನಟಿಸಿದ್ದಾರೆ. ರಾಬರ್ಟ್ ಕ್ಯಾನಿಗಲ್ ಬರೆದಿರುವ ಇದೇ ಹೆಸರಿನ ಪುಸ್ತಕ ಈ ಸಿನೆಮಾಗೆ ಆಧಾರವಾಗಿದ್ದು, ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

'ಪೊರ್ಕಿ ಹುಚ್ಚ ವೆಂಕಟ್' ಗೆ 'ಕೋಪ ಬಂದ್ರೆ'? ವಿಡಿಯೋ ಹಾಡು

'ಪೊರ್ಕಿ ಹುಚ್ಚ ವೆಂಕಟ್' ಗೆ 'ಕೋಪ ಬಂದ್ರೆ'? ವಿಡಿಯೋ ಹಾಡು

ಸದಾ ವಿವಾದದ ಕೇಂದ್ರವಾಗಿರುವ 'ಹುಚ್ಚ ವೆಂಕಟ್' ತಮ್ಮ ನೂತದ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಕೋಪ ಬಂದ್ರೆ ಹಾಡು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಸತೀಶ್ ಬಾಬು ಸಂಗೀತ ನಿರ್ದೇಶನದ ಈ ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಹುಚ್ಚ ವೆಂಕಟೇಶ್ ಸ್ವತಃ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್

ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಮೋಟರ್ ರೇಸಿಂಗ್ ಕಥಾವಸ್ತು ಹೊಂದಿರುವ ನಾನು ಮತ್ತು ವರಲಕ್ಷ್ಮೀ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದು, ಮಲೆಯಾಳಂ ಬೆಡಗಿ ಮಾಳವಿಕಾ ಮೋಹನನ್ ನಾಯಕಿಯಾಗಿದ್ದಾರೆ.

ಕಿ & ಕ ಟ್ರೇಲರ್

ಕಿ & ಕ ಟ್ರೇಲರ್

ಆರ್ ಭಾಲ್ಕಿ ನಿರ್ದೇಶನದ 'ಕಿ & ಕ' ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಜನಪ್ರಿಯವಾಗಿದ್ದು, ೨ ದಿನಗಳಲ್ಲಿ ೧೬ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನೆಮಾಗೆ ಇಳಯರಾಜ ಮತ್ತು ಅಂಕಿತ್ ತಿವಾರಿ ಸಂಗೀತ ನೀಡಿದ್ದು ಮೂರ್ಖರ ದಿನವಾದ ಏಪ್ರಿಲ್ ೧ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ.

ಜೆಸ್ಸಿ ಚಿತ್ರದ ಪ್ರೋಮೋ ಹೆಲ್ಮೆಟ್ ಸಾಂಗ್

ಜೆಸ್ಸಿ ಚಿತ್ರದ ಪ್ರೋಮೋ ಹೆಲ್ಮೆಟ್ ಸಾಂಗ್

ರಾಜ್ಯದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರುವ ಕುರಿತು ಪರ ವಿರೋಧ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಈ ಮಧ್ಯೆ ನಿರ್ದೇಶಕ ಪವನ್ ಒಡೆಯರ್ ಮತ್ತು ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಹೆಲ್ಮೆಟ್ ಸಾಂಗ್ ಒಂದನ್ನು ರೆಡಿ ಮಾಡಿದ್ದಾರೆ. ಹೆಲ್ಮೆಟ್ ಬೇಕೋ ಬೇಡ್ವೋ ಎಂದು ಎರಡನ್ನು ಹೇಳುವ ಸಾಂಗ್ ಚೆನ್ನಾಗಿ ಮೂಡಿಬಂದಿದೆ.