ಲಕ್ಷ್ಮಣ ಚಿತ್ರದ ಮೋಷನ್ ಪೋಸ್ಟರ್ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಆರ್. ಚಂದ್ರು ನಿರ್ದೇಶನದ ಸಾಹಸ ಪ್ರಧಾನ ಚಿತ್ರ ಲಕ್ಷ್ಮಣ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನೂಪ್, ಮೇಘನಾ ರಾಜ್ ಹಾಗೂ ರವಿಚಂದ್ರನ್ ಅಭಿನಯಿಸಿದ್ದಾರೆ.
ಸೋಜಿಗ ಕನ್ನಡ ಸಿನೆಮಾ ಟ್ರೇಲರ್ದಿನೇಶ್ ಕಂಪ್ಲಿ ನಿರ್ದೇಶನದ, ವಿಕ್ರಂ ಹೆಗಡೆ ಮತ್ತು ಅಖಿಲಾ ಪ್ರಕಾಶ್ ನಟಿಸಿರುವ 'ಸೋಜಿಗ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮರ್ಡರ್ ನಿಗೂಢ ಕಥೆ ಎಂದು ಹೇಳಿಕೊಂಡಿರುವ ಈ ಸಿನೆಮಾ ತಂಡದಲ್ಲಿ ಬಹುತೇಕ ಎಲ್ಲರೂ ಹೊಸಬರೇ ಇದ್ದು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.
ಹೃತಿಕ್ ಅಭಿನಯದ ಮೆಹೆಂಜೋದಾರೊ ಚಿತ್ರದ ಟ್ರೈಲರ್ಬಾಲಿವುಡ್ ಬಹುನಿರೀಕ್ಷಿತ ನಟ ಹೃತಿಕ್ ರೋಷನ್ ಅಭಿನಯದ ಐತಿಹಾಸಿಕ ನಾಟಕ ಮೆಹೆಂಜೋ ದಾರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲಗಾನ್, ಜೋಧಾ ಅಕ್ಬರ್ ನಂತ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ಅಶುತೋಷ್ ಗೌರೀಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ.
'ಬದ್ಮಾಶ್' ಸಿನೆಮಾದ 'ಹರೇ ರಾಮ' ಹಾಡುಆಕಾಶ್ ಶ್ರೀವತ್ಸ ನಿರ್ದೇಶನದ, ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ 'ಬದ್ಮಾಶ್' ಸಿನೆಮಾದ 'ಹರೇ ರಾಮ' ಹಾಡು ಜನಪ್ರಿಯವಾಗಿದೆ. ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ.
ವಿನಯ್ ರಾಜಕುಮಾರ್ 'ರನ್ ಆಂಟನಿ' ಸಿನೆಮಾ ಟ್ರೇಲರ್'ಸಿದ್ಧಾರ್ಥ' ನಂತರ ವಿನಯ್ ರಾಜಕುಮಾರ್ ಅವರ ಚಿತ್ರ 'ರನ್ ಆಂಟನಿ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಅಂತರ್ಜಾಲದಲ್ಲಿ ಟ್ರೇಲರ್ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ರಘು ಶಾಸ್ತ್ರಿ ನಿರ್ದೇಶನದ ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದೆ.
ಮೀರ್ಜ್ಯಾ ಹಿಂದಿ ಸಿನೆಮಾ ಟ್ರೇಲರ್ಜನಪದ ಕಥೆಯೊಂದರಿಂದ ಸ್ಫೂರ್ತಿ ಪಡೆದು ಹಿಂದಿಯ ಖ್ಯಾತ ಲೇಖಕ ಗುಲ್ಜಾರ್ ಚಿತ್ರ ಕಥೆ ರಚಿಸಿ, ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿರುವ 'ಮೀರ್ಜ್ಯಾ' ಚಿತ್ರದ ಟ್ರೇಲರ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಹರ್ಷವರ್ಧನ್ ಕಪೂರ್, ಸಯಾಮಿ ಖೇರ್ ಮತ್ತು ಅನುಜ್ ಚೌಧರಿ ನಟಿಸಿರುವ ಈ ಚಿತ್ರ ಅಕ್ಟೋಬರ್ ೭ಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.
'ನಿರುತ್ತರ' ಪ್ರಮೋ ವಿಡಿಯೋಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರ ಅಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ರೊಮ್ಯಾಂಟಿಕ್ ಚಿತ್ರದಲ್ಲಿ ರಾಹುಲ್ ಬೋಸ್, ಭಾವನಾ, ಐಂದ್ರಿತಾ ರೇ ಮತ್ತು ಕಿರಣ್ ಶ್ರೀನಿವಾಸ್ ನಟಿಸಿದ್ದು, ನೀಲಾದ್ರಿ ಕುಮಾರ್ ಸಂಗೀತ ನೀಡಿದ್ದಾರೆ.
'ರಾಮನ್ ರಾಘವ್ 2.೦' ಬೇಹುದಾ ವಿಡಿಯೋ ಹಾಡುಮುಂಬೈ ನ ಸರಣಿ ಕೊಲೆಗಾರ ರಾಮನ್ ರಾಘವ್ ಕುರಿತಾದ ಅನುರಾಗ್ ಕಶ್ಯಪ್ ನಿರ್ದೇಶನದ 'ರಾಮನ್ ರಾಘವ್ ೨.೦' ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನವಾಜುದ್ದೀನ್ ಸಿದ್ದಿಕಿ ಅವರ ನಟನೆಗೆ ಕರತಾಡನವಾಗಿತ್ತು. ರಾಮ್ ಸಂಪತ್ ಸಂಗೀತ ನಿರ್ದೇಶನದಲ್ಲಿ, ನಯನತಾರ ಭಟ್ಕಳ್ ಹಾಡಿರುವ ಈ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.
ಗಣೇಶ್ 'ಜೂಮ್' ಸಿನೆಮಾದ ಟ್ರೇಲರ್ನಟ ಗಣೇಶ್ ಮತ್ತು ನಟಿ ರಾಧಿಕಾ ಪಂಡಿತ್ ಒಟ್ಟಿಗೆ ಅಭಿನಯಿಸಿರುವ 'ಜೂಮ್' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಎಸ್ ಎಸ್ ತಮನ್ ಸಂಗೀತ ನೀಡಿದ್ದು, ಕಾಶಿನಾಥ್ ಕೂಡ ಸಿನೆಮಾದಲ್ಲಿ ನಟಿಸಿರುವುದು ವಿಶೇಷ.
ಪಲ್ಲಟ ಸಿನೆಮಾದ ಟ್ರೇಲರ್ಎಸ್.ಪಿ.ರಘು ನಿರ್ದೇಶನದ, ಆಲೂರು ದೊಡ್ಡನಿಂಗಪ್ಪ ಸಂಭಾಷಣೆ ಬರೆದಿರುವ ಪಲ್ಲಟ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಮಾನಾಂತರ ಸಿನೆಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ರಾಜ್ಯಫ್ರೀಡಂ ಪಾರ್ಕ್ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ- ಪ್ರಕಾಶ್ ರಾಜ್; Video