ಮನರಂಜನೆ

ಮೈನವಿರೇಳಿಸುವಂತಿದೆ ಶಿವಾಯ್ ಚಿತ್ರ ಟ್ರೈಲರ್

ಅಜಯ್ ದೇವಗನ್ ನಟಿಸಿ ನಿರ್ದೇಶಿಸುತ್ತಿರುವ ಶಿವಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಜಯ್ ದೇವಗನ್ ಪರ್ವತಾರೋಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್ ನಲ್ಲ ಸಾಕಷ್ಟು ಮೈನವಿರೇಳಿಸುವ ದೃಶ್ಯಗಳಿವೆ. ಚಿತ್ರ ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ.

ಮೈನವಿರೇಳಿಸುವಂತಿದೆ ಶಿವಾಯ್ ಚಿತ್ರ ಟ್ರೈಲರ್
ಸಖತ್ ಹಾಟ್ ಆಗಿದೆ ಪೂನಂ ಪಾಂಡೆಯ ಡರ್ಟಿ ಗೇಮ್ ವಿಡಿಯೋ

ಸಖತ್ ಹಾಟ್ ಆಗಿದೆ ಪೂನಂ ಪಾಂಡೆಯ ಡರ್ಟಿ ಗೇಮ್ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಹಸಿ ಬಿಸಿ ವಿಡಿಯೋಗಳನ್ನು ಅಪಲೋಡ್ ಮಾಡುವ ಮೂಲಕ ಆನ್ ಲೈನ್ ಸೆನ್ಸೇಷನ್ ಪೂನಂ ಪಾಂಡೆ ಇದೀಗ ಮತ್ತೊಂದು ಅಂತಹದ್ದೇ ವಿಡಿಯೋ ಮೂಲಕ ಸುದ್ದಿಯಾಗಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಬಿಕಿನಿ ಧರಿಸಿ ಕೊಳವೊಂದರ ಸಮೀಪ ವಿದೇಶಿ ಹುಡುಗಿಯೊಂದಿಗೆ ಆಟವಾಡುತ್ತಿದ್ದಾಳೆ. ಬಾಲ್ಯದಲ್ಲಿ ಆಡಲಾಗುವ ರಾಕ್, ಪೇಪರ್, ಸೀಸರ್ ಆಟವನ್ನು ಇಬ್ಬರೂ ಅಶ್ಲೀಲ ರೀತಿಯಲ್ಲಿ ಆಡಿದ್ದಾರೆ. ಪೂನಂ ಪಾಂಡೆಯ ಕಟ್ಟಾ ಅಭಿಮಾನಿಗಳಿಗೆ ಈ ವಿಡಿಯೋ ಒಳ್ಳೆ ರಸದೌತಣ.

ವಿಕ್ರಮ್, ನಯನತಾರ ಅಭಿನಯದ 'ಇರು ಮುಗನ್' ಟ್ರೇಲರ್

ವಿಕ್ರಮ್, ನಯನತಾರ ಅಭಿನಯದ 'ಇರು ಮುಗನ್' ಟ್ರೇಲರ್

ಹ್ಯಾರಿಸ್ ಜಯರಾಜ್ ನಿರ್ದೇಶನದ, ವಿಕ್ರಮ್, ನಯನತಾರಾ ಮತ್ತು ನಿತ್ಯಾ ಮೆನನ್ ನಟಿಸಿರುವ ಆಕ್ಷನ್-ರೊಮ್ಯಾಂಟಿಕ್-ಥ್ರಿಲ್ಲರ್ ತಮಿಳು ಮ್ಯೂಸಿಕಲ್ ಚಲನಚಿತ್ರ 'ಇರು ಮುಗನ್' ಟ್ರೇಲರ್ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆಯಾದ ಮೂರು ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಯೂಟ್ಯೂಬ್ ನಲ್ಲಿ ಇದನ್ನು ವೀಕ್ಷಿಸಿದ್ದಾರೆ.

ಎಚ್ಡಿಕೆ ಪುತ್ರನ ಜಾಗ್ವರ್ ಚಿತ್ರದ ತೆಲುಗು ಟೀಸರ್

ಎಚ್ಡಿಕೆ ಪುತ್ರನ ಜಾಗ್ವರ್ ಚಿತ್ರದ ತೆಲುಗು ಟೀಸರ್

ತಮ್ಮ ಪುತ್ರ ನಿಖಿಲ್ ಗೌಡನಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಿಸುತ್ತಿರುವ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಜಾಗ್ವರ್ ಚಿತ್ರದ ತೆಲುಗು ಟೀಸರ್ ಬಿಡುಗಡೆಯಾಗಿದೆ. ಬಾಹುಬಲಿ ನಿರ್ದೇಶಕ ಎಸ್ಎಸ್ ರಾಜಮೌಳಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಎ ಮಹದೇವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಅಧಿಕೃತ ಟ್ರೇಲರ್

ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಅಧಿಕೃತ ಟ್ರೇಲರ್

ಕಿಚ್ಚ ಸುದೀಪ್ ಹಾಗೂ ನಿತ್ಯಾಮೆನನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-2 ಚಿತ್ರದ 2ನೇ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎಂಬಿ ಬಾಬು ಅವರು ನಿರ್ಮಾಣ ಮಾಡಿದ್ದು, ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

'ಡಯಾನಾ ಹೌಸ್' ಹಾರರ್ ಚಿತ್ರದ ಟ್ರೈಲರ್

'ಡಯಾನಾ ಹೌಸ್' ಹಾರರ್ ಚಿತ್ರದ ಟ್ರೈಲರ್

ಕನ್ನಡದಲ್ಲಿ ಸಾಲು ಸಾಲು ಹಾರರ್ ಚಿತ್ರಗಳು ಸೆಟ್ಟೇರಿದ್ದು, ಇದೀಗ ಡೈಯಾನಾ ಹೌಸ್ ಚಿತ್ರ ಬಿಡುಗಡೆಯ ಹಾದಿಯಲ್ಲಿದ್ದು, ಬಿಡುಗಡೆಗೂ ಮುನ್ನ ಚಿತ್ರದ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಈ ಚಿತ್ರ ಕಾಮನ್ ಆಗಿ ಭೂತ ಪಿಶಾಚಿಗಳ ಕಥೆ ಅಲ್ಲವಂತೆ, ಬದಲಾಗಿ ಹಾರರ್ ಚಿತ್ರದ ಮೂಲಕ ಒಂದು ವಿಶೇಷ ಕಥೆ ಒಂದನ್ನು ಹೇಳಲು ಹೊರಟಿದ್ದಾರೆ ಚಿತ್ರತಂಡ. ಚಿತ್ರಕ್ಕೆ ಭರತ್ ನಂದ ಆಕ್ಷನ್ ಕಟ್ ಹೇಳಿದ್ದು, ರಾಘವ ನಾಗ್ ಎಂಬ ಹೊಸ ಪ್ರತಿಭೆ ನಟಿ ತೇಜಸ್ವಿನಿ ಜತೆ ಡ್ಯುಯೆಟ್ ಹಾಡಲಿದ್ದಾರೆ.