Defence

ನೌಕಾಪಡೆಗೆ ಮತ್ತಷ್ಟು ಬಲ: 'ಐಎನ್ ಎಸ್ ಕಲ್ವಾರಿ' ಸೇನೆ ಸೇರ್ಪಡೆ
ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆ ಐಎನ್ ಎಸ್ ಕಲ್ವಾರಿ ನೌಕಾಪಡೆಗೆ ನಿಯೋಜನೆಗೊಂಡಿದ್ದು, ಶೀಘ್ರದಲ್ಲೇ ಕರ್ತವ್ಯಕ್ಕೆ ನಿಯೋಜನೆಯಾಗಲಿದೆ.

ಬಡ್ತಿಯಲ್ಲಿ ತಾರತಮ್ಯ ಆರೋಪ: ಸುಪ್ರೀಂ ಕೋರ್ಟ್ ಮೊರೆ ಹೋದ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು!
ಬಡ್ತಿ ವಿಚಾರದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಭಾರತೀಯ ಸೇನೆಯ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಶಂಕಾಸ್ಪದ ಡ್ರೋಣ್ ಗಳ ಹೊಡೆದುರುಳಿಸಲು ಎನ್ಎಸ್ ಜಿ, ಸಿಐಎಸ್ ಎಫ್ ಗೆ ಅಧಿಕಾರ!
ಆಗಸದಲ್ಲಿ ಶಂಕಾಸ್ಪದವಾಗಿ ಹಾರಾಡುವ ಡ್ರೋಣ್ ಗಳನ್ನು ಯಾವುದೇ ಮುಲಾಜಿಲ್ಲದೇ ಹೊಡೆದುರುಳಿಸಲು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪಡೆಗಳಿಗೆ ವಿಶೇಷ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸೆ.29ಕ್ಕೂ ಮೊದಲು ಸರ್ಜಿಕಲ್ ಸ್ಟ್ರೈಕ್ ಆದ ಕುರಿತು ಯಾವುದೇ ದಾಖಲೆಗಳಿಲ್ಲ: ಭಾರತೀಯ ಸೇನೆ
ಸೆಪ್ಟೆಂಬರ್ 29ಕ್ಕೂ ಮೊದಲು ಭಾರತದ ಗಡಿಗಳಲ್ಲಿ ಸರ್ಜಿಕಲ್ ಸ್ಚ್ರೈಕ್ ನಡೆಸಿದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟ ಪಡಿಸಿದೆ.

ಟಿ-90 ಭೀಷ್ಮನಿಗೆ ಮತ್ತಷ್ಟು ಬಲ: ಯುದ್ಧ ಟ್ಯಾಂಕರ್ ಗೆ 3ನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ!
ಭಾರತೀಯ ಭೂಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ಟಿ-90 ಯುದ್ಧ ಟ್ಯಾಂಕರ್ ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಭೀಷ್ಮ ಟ್ಯಾಂಕರ್ ಗೆ 3ನೇ ತಲೆ ಮಾರಿನ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ ಅಮೆರಿಕದ ವಿಧ್ವಂಸಕ 6 ಆಪಾಚೆ ಹೆಲಿಕಾಪ್ಟರ್!
ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಗುರುವಾರ ನೀಡಿದೆ.

ಭಾರತ ಖರೀದಿಸಲು ಮುಂದಾಗಿರುವ ಅಪಾಚೆ ಹೆಲಿಕಾಪ್ಟರ್ ಎಷ್ಟು ವಿಧ್ವಂಸಕ ಗೊತ್ತೇ?
ವಿಶ್ವದಲ್ಲೇ ಅತ್ಯಂತ ಸುಧಾರಿತ ಯುದ್ಧ ಹೆಲಿಕಾಪ್ಟರ್ ಗಳಲ್ಲಿ ಅಮೆರಿಕದ ಬೋಯಿಂಗ್ ಸಂಸ್ಥೆ ತಯಾರು ಮಾಡುತ್ತಿರುವ ಅಪಾಚೆ ಹೆಲಿಕಾಪ್ಟರ್ ಕೂಡ ಒಂದಾಗಿದ್ದು, ಇಂತಹ ಆರು ಹೆಲಿಕಾಪ್ಟರ್ ಗಳನ್ನು ಭಾರತ ಖರೀದಿಸಲು ಮುಂದಾಗಿದೆ.

ಬಲೂಚಿಸ್ತಾನದಲ್ಲಿ ಪಾಕ್ ನಿಂದ ರಹಸ್ಯ ಅಣ್ವಸ್ತ್ರ ಗೋದಾಮು ಬಂಕರ್ ನಿರ್ಮಾಣ!
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ರಹಸ್ಯವಾಗಿ ಅಣ್ವಸ್ತ್ರ ಗೋದಾಮು ಬೃಹತ್ ಬಂಕರ್ ನಿರ್ಮಾಣ ಮಾಡಿದೆ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.

ದೆಹಲಿಯಲ್ಲಿ ಅಲ್ ಖೈದ ಸಂಘಟನೆಗೆ ಸೇರಿದ ಶಂಕಿತ ಉಗ್ರನ ಬಂಧನ!
ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಓರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

