ದೇಶ

ಟಿ-90 ಭೀಷ್ಮನಿಗೆ ಮತ್ತಷ್ಟು ಬಲ: ಯುದ್ಧ ಟ್ಯಾಂಕರ್ ಗೆ 3ನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ!

ಭಾರತೀಯ ಭೂಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ಟಿ-90 ಯುದ್ಧ ಟ್ಯಾಂಕರ್ ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಭೀಷ್ಮ ಟ್ಯಾಂಕರ್ ಗೆ 3ನೇ ತಲೆ ಮಾರಿನ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಟಿ-90 ಭೀಷ್ಮನಿಗೆ ಮತ್ತಷ್ಟು ಬಲ: ಯುದ್ಧ ಟ್ಯಾಂಕರ್ ಗೆ 3ನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಭಾರತೀಯ ಭೂಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ಟಿ-90 ಯುದ್ಧ ಟ್ಯಾಂಕರ್ ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಭೀಷ್ಮ ಟ್ಯಾಂಕರ್ ಗೆ 3ನೇ ತಲೆ ಮಾರಿನ ಕ್ಷಿಪಣಿ  ವ್ಯವಸ್ಥೆಯನ್ನು ಅಳವಡಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಪಾಕಿಸ್ತಾನ-ಚೀನಾ ದೇಶಗಳ ನಡುವಿನ ಗಡಿಯಲ್ಲಿ ಶೀಥಲ ಸಮರ ಮುಂದುವರೆದಿರುವಂತೆಯೇ ಭಾರತ ತನ್ನ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದ್ದು, ಇತ್ತೀಚೆಗಷ್ಟೇ ಅಮೆರಿಕದಿಂದ 6 ಅಪಾಚೆ ಹೆಲಿಕಾಪ್ಟರ್ ಗಳನ್ನು ಖರೀದಿ  ಮಾಡಿತ್ತು. ಇದೀಗ ಅದರ ಮುಂದುವರೆದ ಭಾಗ ಎಂಬಂತೆ ಭೂಸೇನೆಯ ಪ್ರಮುಖ ಅಸ್ತ್ರವಾಗಿರುವ ಟಿ-90 ಟ್ಯಾಂಕರ್ ಗಳಿಗೆ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಲು ಮುಂದಾಗಿದೆ. ಟಿ90 ಟ್ಯಾಂಕ್‌ ಗಳಲ್ಲಿ ಗನ್‌ನಿಂದ ಸಿಡಿಸಲಾಗುವ  ಮೂರನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಸದ್ಯ ರಷ್ಯಾ ನಿರ್ಮಿತ ಭೀಷ್ಮ ಟ್ಯಾಂಕರ್ ಗಳಲ್ಲಿ ಇನ್ವಾರ್‌ ಹೆಸರಿನ ಲೇಸರ್‌ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆ ಇದ್ದು, ಇನ್ವಾರ್‌ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಳದೊಂದಿಗೆ ಮೂರನೇ ತಲೆಮಾರಿನ ಅತ್ಯಾಧುನಿಕ ಕ್ಷಿಪಣಿ  ವ್ಯವಸ್ಥೆಯನ್ನೂ ಸೇರ್ಪಡೆಗೊಳಿಸುವುದು ಗುರಿಯಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಹೊಸ ಕ್ಷಿಪಣಿ ವ್ಯವಸ್ಥೆ ರಾತ್ರಿ, ಅತಿ ಎತ್ತರದ ಪ್ರದೇಶದಲ್ಲೂ ಕೂಡ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 8 ಕಿ.ಮೀ. ದೂರದ  ಗುರಿಯನ್ನು ಕರಾರುವಕ್ಕಾಗಿ ಛೇದಿಸಬಲ್ಲದು. ಭೀಷ್ಮ ಟ್ಯಾಂಕರ್ ನ 125 ಎಂ.ಎಂ.ನ ಗನ್‌ ಬ್ಯಾರೆಲ್‌ ಮೂಲಕ ಇದನ್ನು ಉಡಾಯಿಸಲಾಗುತ್ತದೆ. ಚಲಿಸುತ್ತಿರುವ ಗುರಿಯನ್ನೂ ಛೇದಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು,  ಇದರೊಂದಿಗೆ ಟ್ಯಾಂಕರ್ ಗಳ ಎಂಜಿನ್‌ ಸಾಮರ್ಥ್ಯವನ್ನೂ 1200ರಿಂದ 1500 ಅಶ್ವಶಕ್ತಿಯಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಟ್ಯಾಂಕರ್ ಗಳ ವೇಗ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶ ತೀವ್ರ ಭದ್ರತಾ ಸವಾಲುಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೇನೆಯ ದಾಳಿ ಸಾಮರ್ಥ್ಯ ವೃದ್ಧಿಗೆ ರಕ್ಷಣಾ ಇಲಾಖೆ ಈ ಹಿಂದೆ ತೀರ್ಮಾನಿಸಿತ್ತು. ಈಗಾಗಲೇ ಕೇಂದ್ರ ಸರ್ಕಾರ ಸುಮಾರು 10  ವಿಧದ ಅಗತ್ಯ ರಕ್ಷಣಾ ಸಲಕರಣೆ ಖರೀದಿಗೆ ಸೇನಾ ಉಪಮುಖ್ಯ ಸ್ಥರಿಗೆ ಸಂಪೂರ್ಣ ಹಣಕಾಸು ಅಧಿಕಾರವನ್ನು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.