Defence

ನೌಕಾಪಡೆಗೆ ಆನೆ ಬಲ: ಐಎನ್ ಎಸ್ ವಿಕ್ರಮಾದಿತ್ಯ ನೌಕೆಗಾಗಿ 57 ಹೊಸ ಯುದ್ಧ ವಿಮಾನಗಳ ಖರೀದಿ!
ಅತ್ತ ಚೆನ್ನೆನಲ್ಲಿ ಮಾನವ ರಹಿತ ಯುದ್ಧ ಟ್ಯಾಂಕರ್ ಮಂತ್ರ ಅನಾವರಣವಾಗುತ್ತಿದ್ದಂತೆಯೇ ಇತ್ತ ಭಾರತದ ಸಮುದ್ರ ಗಡಿ ಬಲ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭಾರತದ ಪ್ರಮುಖ ಯುದ್ಧ ವಿಮಾನ ವಾಹಕ ಐಎನ್ ಎಸ್ ವಿಕ್ರಮಾಧ್ಯಿತ್ಯ ನೌಕೆಗಾಗಿ ಬರೊಬ್ಬರಿ 57 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ.

ಭಾರತೀಯ ಸೇನೆಗೆ ಮತ್ತಷ್ಟು ಬಲ ತಂದ "ಮಂತ್ರ" ಮಾನವರಹಿತ ಯುದ್ಧ ಟ್ಯಾಂಕರ್!
ಭಾರತೀಯ ಸೇನೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೆ ಸಿದ್ಧವಾಗಿದ್ದು, ಭಾರತದ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮೊದಲ ಬಾರಿಗೆ ಮಾನವರಹಿತ ಯುದ್ಧ ಟ್ಯಾಂಕ್ ಅಭಿವೃದ್ಧಿಪಡಿಸಿದ್ದು, ಇನ್ನು ಕೆಲ ತಿಂಗಳಲ್ಲೇ ಇದು ಸೇನೆಗೆ ಸೇರ್ಪಡೆಯಾಗಲಿದೆ.

ಭಾರತೀಯ ಸೇನೆಯಲ್ಲಿ 52 ಸಾವಿರ ಸಿಬ್ಬಂದಿಗಳ ಕೊರತೆ!
ಭಾರತೀಯ ಸೇನೆಯಲ್ಲಿ ಪ್ರಸ್ತುತ 52 ಸಾವಿರ ಸೈನಿಕರ ಕೊರತೆ ಇದೆ ಎಂದು ಸ್ವತಃ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಕೊಂಡಿದೆ.

ಶೀಘ್ರ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳ ಪೂರೈಕೆ: ಭಾರತೀಯ ಸೇನೆ!
ಭಾರತೀಯ ಸೇನೆಯಲ್ಲಿನ ಶಸ್ತ್ರಾಸ್ತ್ರಗಳ ಕೊರತೆ ಕುರಿತು ಮಹಾಲೇಖಪಾಲರು ನೀಡಿದ್ದ ವರದಿ ಬಹಿರಂಗವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಕೆಲವೇ ವಾರಗಳಲ್ಲಿ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದೆ.

ಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು: ದೆಹಲಿ ಮೂಲದ ಸಂಸ್ಥೆಯಿಂದ ಸ್ಪಷ್ಟನೆ
ಭಾರಿ ವಿವಾದಕ್ಕೆ ಗ್ರಾಸವಾಗಿರುವ ಬೋಫೋರ್ಸ್ ಆರ್ಟಿಲರಿ ಗನ್ ಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು ಎಂದು ಹೇಳಿದೆ.

ಭಾರಿ ಹಗರಣ: ಬೋಫೋರ್ಸ್ ಅರ್ಟಿಲರಿ ಗನ್ ಗೆ ಚೀನಾದ ಕಳಪೆ ಬಿಡಿಭಾಗ; ಸಿಬಿಐ ತನಿಖೆ
ವಿವಿಐಪಿ ಚಾಪರ್ ಹಗರಣದ ಬಳಿಕ ಭಾರತೀಯ ರಕ್ಷಣಾ ವಿಭಾಗದಲ್ಲಿ ಮತ್ತೊಂದು ಭಾರಿ ಹಗರಣವೊಂದರ ಸುಳಿವು ದೊರೆತಿದ್ದು, ಭಾರತೀಯ ಭೂಸೇನೆ ಬಳಕೆ ಮಾಡುತ್ತಿರುವ ಬೋಫೋರ್ಸ್ ಆರ್ಟಿಲರಿ ಗನ್ ಗಳಿಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಜೋಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಯುದ್ಧ ಆರಂಭವಾದರೆ ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿ: ಸಿಎಜಿ ವರದಿ
ಅತ್ತ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡಿರುವಂತೆಯೇ ಇತ್ತ ಭಾರತೀಯ ಸೇನೆಯ ಪರಿಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.

ಎರಡು ದಶಕ ಬಳಿಕ ಸೇನೆಯಿಂದ ಸೈನಿಕರಿಗೆ ಬುಲೆಟ್ ಪ್ರೂಫ್ ಹೆಲ್ಮೆಟ್ ಖರೀದಿ!
ಮಹತ್ವದ ಬೆಳವಣಿಗೆಯಲ್ಲಿ ಗಡಿ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

"ದಿ ಗೇಮ್ ಚೇಂಜರ್": ಶೀಘ್ರ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ 22 ಗಾರ್ಡಿಯನ್ ಡ್ರೋನ್ ಗಳು!
ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕ ದೇಶ ಭಾರತಕ್ಕೆ 22 ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.

