ಭಾರಿ ಹಗರಣ: ಬೋಫೋರ್ಸ್ ಅರ್ಟಿಲರಿ ಗನ್ ಗೆ ಚೀನಾದ ಕಳಪೆ ಬಿಡಿಭಾಗ; ಸಿಬಿಐ ತನಿಖೆ
ವಿವಿಐಪಿ ಚಾಪರ್ ಹಗರಣದ ಬಳಿಕ ಭಾರತೀಯ ರಕ್ಷಣಾ ವಿಭಾಗದಲ್ಲಿ ಮತ್ತೊಂದು ಭಾರಿ ಹಗರಣವೊಂದರ ಸುಳಿವು ದೊರೆತಿದ್ದು, ಭಾರತೀಯ ಭೂಸೇನೆ ಬಳಕೆ ಮಾಡುತ್ತಿರುವ ಬೋಫೋರ್ಸ್ ಆರ್ಟಿಲರಿ ಗನ್ ಗಳಿಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಜೋಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನವದೆಹಲಿ: ವಿವಿಐಪಿ ಚಾಪರ್ ಹಗರಣದ ಬಳಿಕ ಭಾರತೀಯ ರಕ್ಷಣಾ ವಿಭಾಗದಲ್ಲಿ ಮತ್ತೊಂದು ಭಾರಿ ಹಗರಣವೊಂದರ ಸುಳಿವು ದೊರೆತಿದ್ದು, ಭಾರತೀಯ ಭೂಸೇನೆ ಬಳಕೆ ಮಾಡುತ್ತಿರುವ ಬೋಫೋರ್ಸ್ ಆರ್ಟಿಲರಿ ಗನ್ ಗಳಿಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಜೋಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೂಲಗಳ ಪ್ರಕಾರ ಈಗಾಗಲೇ ಈ ಬಗ್ಗೆ ಕೇಂದ್ರೀಯ ತನಿಖೆ ಸಂಸ್ಥೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಅಧಿಕಾರಿಗಳು ದೆಹಲಿ ಮೂಲದ ಆರ್ಟಿಲರಿ ಗನ್ ತಯಾರಿಕಾ ಸಂಸ್ಥೆ ವಿರುದ್ಧ ದೂರು ದಾಖಲಿಸಿ ಕೊಂಡಿದ್ದಾರೆ. ಸೇನಾ ಮೂಲಗಳ ಪ್ರಕಾರ ಮೂಲ ಬೋಫೋರ್ಸ್ ಆರ್ಟಿಲರಿ ಗನ್ ಗಳ ಸಾಮರ್ಥ್ಯ 27 ಕಿಮೀ ವ್ಯಾಪ್ತಿಯಾಗಿದ್ದು, ಆದರೆ ಇದೇ ಸ್ವದೇಶಿ ನಿರ್ಮಾಣದ ಬೋಪೋರ್ಸ್ ಆರ್ಟಿಲರಿ ಗನ್ ನ ಸಾಮರ್ಥ್ಯ 38 ಕಿ.ಮೀ ವ್ಯಾಪ್ತಿಯಾಗಿತ್ತು. ಇದೇ ಕಾರಣಕ್ಕೆ ಭಾರತೀಯ ಭೂಸೇನೆ ಹೆಟ್ಟುವರಿಯಾಗಿ 414 ಧನುಷ್ ಭೋಪೋರ್ಸ್ ಆರ್ಟಿಲರಿ ಗನ್ ಗಳನ್ನು ಹೊಂದಲು ಮುಂದಾಗಿತ್ತು.
ಚೀನಾ ನಿರ್ಮಿತ ಕಳಪೆ ಬಿಡಿಭಾಗಗಳಿಗೆ "ಮೇಡ್ ಇನ್ ಜರ್ಮನಿ" ಮುಖವಾಡ
ಇನ್ನು ಪ್ರಸ್ತುತ ಮಧ್ಯ ಪ್ರದೇಶದ ಜಬಲ್ ಪುರದಲ್ಲಿರುವ ಗನ್ ತಯಾರಿಕಾ ಘಟಕದಲ್ಲಿನ ಕೆಲ ಬೋಫೋರ್ಸ್ ಆರ್ಟಿಲರಿ ಗನ್ ಗಳಲ್ಲಿ ಚೀನಾ ನಿರ್ಮಿತ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಗನ್ ಗೆ ಅಳವಡಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾಗ ಇದು ಸ್ಪಷ್ಟವಾಗಿತ್ತು. ಬೋಫೋರ್ಸ್ ಗನ್ ಗಳಲ್ಲಿ ಬಳಕೆ ಮಾಡಿರುವ ವೈರ್ ರೇಸ್ ರೋಲರ್ ಬೇರಿಂಗ್ಸ್ (Wire Race Roller Bearings) ಎಂಬ ಬಿಡಿಭಾಗ ಚೀನಾದಲ್ಲಿ ತಯಾರಿಗಿದ್ದು, ಇದಕ್ಕೆ ಮೇಡ್ ಇನ್ ಜರ್ಮನಿ ಎಂಬ ಮುಖವಾಡ ಹಾಕಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. 2013 ರಲ್ಲಿ ಆರಂಭಿಕ ಹಂತವಾಗಿ ಸೇನೆ ನಾಲ್ಕು ಬೇರಿಂಗ್ಸ್ ಗಳನ್ನು ಆರ್ಡರ್ ಮಾಡಿತ್ತು. ಬಳಿಕ 2014ರ ಆಗಸ್ಟ್ ನಲ್ಲಿ ಮತ್ತೆ 6 ಬೇರಿಂಗ್ಸ್ ಗಳಿಗೆ ಸೇನೆ ಮನವಿ ಮಾಡಿತ್ತು. ಅದರನ್ವಯ 2014ರ ಏಪ್ರಿಲ್ 7 ಮತ್ತು 2014ರ ಆಗಸ್ಚ್ 12ರಂದು ಕ್ರಮವಾಗಿ ಒಂದೊಂದು ಬೇರಿಂಗ್ಸ್ ಗಳನ್ನು ಪೂರೈಕೆ ಮಾಡಲಾಗಿತ್ತು.
ತಜ್ಞರ ಪ್ರಕಾರ ಬೋಫೋರ್ಸ್ ಗನ್ ನಲ್ಲಿ ವೈರ್ ರೇಸ್ ರೋಲರ್ ಬೇರಿಂಗ್ಸ್ ಪ್ರಮುಖ ಬಿಡಿಭಾಗವಾಗಿದ್ದು, ಇದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


