ದೇಶಭಾರಿ ಹಗರಣ: ಬೋಫೋರ್ಸ್ ಅರ್ಟಿಲರಿ ಗನ್ ಗೆ ಚೀನಾದ ಕಳಪೆ ಬಿಡಿಭಾಗ; ಸಿಬಿಐ ತನಿಖೆ
ವಿವಿಐಪಿ ಚಾಪರ್ ಹಗರಣದ ಬಳಿಕ ಭಾರತೀಯ ರಕ್ಷಣಾ ವಿಭಾಗದಲ್ಲಿ ಮತ್ತೊಂದು ಭಾರಿ ಹಗರಣವೊಂದರ ಸುಳಿವು ದೊರೆತಿದ್ದು, ಭಾರತೀಯ ಭೂಸೇನೆ ಬಳಕೆ ಮಾಡುತ್ತಿರುವ ಬೋಫೋರ್ಸ್ ಆರ್ಟಿಲರಿ ಗನ್ ಗಳಿಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಜೋಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.