Defence

ಫೆ.3ಕ್ಕೆ ಆಗಲಿದೆ ಏರೋ ಇಂಡಿಯಾ 2021 ಟೇಕ್ ಆಫ್!
2021ನೇ ಸಾಲಿನ ಫೆ.3 ರಿಂದ ಫೆ.7ರ ನಡುವೆ ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ.

ಚೀನಾ ಬೆದರಿಕೆಗೆ ಭಾರತ-ಅಮೆರಿಕ ಸಡ್ಡು, ಬಿಇಸಿಎ ಒಪ್ಪಂದಕ್ಕೆ ಸಹಿ: ಉಭಯ ದೇಶಗಳ ನಾಯಕರ ಜಂಟಿ ಸುದ್ದಿಗೋಷ್ಠಿ
ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೆರಿಕ 2+2 ಮಾತುಕತೆ ನಂತರ ಮಾಡಿಕೊಂಡ ರಕ್ಷಣಾ ಒಪ್ಪಂದಗಳಾಗಿವೆ.

ಕೊರೋನಾ ವಿರುದ್ಧ ಹೋರಾಟ: ವೈದ್ಯಕೀಯ ಸಿಬ್ಬಂದಿಗಳಿಗೆ ಸೇನೆಯಿಂದ ಫ್ಲೈ ಪಾಸ್ಟ್ ಗೌರವ, ಆಸ್ಪತ್ರೆಗಳ ಮೇಲೆ ಹೂ ಮಳೆ
ದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆಸಿದ್ದು, ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಕೇಂದ್ರಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸು ಗೌರವ ಸಲ್ಲಿಸಲಿದೆ.

ಪುಲ್ವಾಮ ಉಗ್ರ ದಾಳಿಯಿಂದ ರಾಫೆಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ವರೆಗೆ, 2019ರ ಡಿಫೆನ್ಸ್ ಮಾಹಿತಿ
2019 ಭಾರತದ ರಕ್ಷಣೆ ಮತ್ತು ಸೇನಾ ವಲಯಕ್ಕೆ ಮಹತ್ವದ ವರ್ಷವಾಗಿದ್ದು, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಮಾಡಿದ್ದ ಭಾರತ ಮತ್ತದೇ ಪಾಕಿಸ್ತಾನದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿ ತನ್ನ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸಿತ್ತು.

2019ರಲ್ಲಿ ಕದನ ವಿರಾಮ ಉಲ್ಲಂಘನೆ ದುಪ್ಪಟ್ಟು, 147 ಉಗ್ರರ ಹತ್ಯೆ!
2018ನೇ ಸಾಲಿಗೆ ಹೋಲಿಕೆ ಮಾಡಿದರೆ 2019ರಲ್ಲಿ ಇಂಡೋ-ಪಾಕ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಅಕ್ಟೋಬರ್ 10ರವರೆಗೆ 147 ಉಗ್ರರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಡಿಆರ್ ಡಿಒ ದಿಂದ ಭೂದಾಳಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ
ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.

ಐಎನ್ಎಸ್ ಖಂಡೇರಿ ಬೆನ್ನಲ್ಲೇ ಐಎನ್ಎಸ್ ನೀಲಗಿರಿ ನೌಕಾಪಡೆಗೆ ಸೇರ್ಪಡೆ!
ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಐಎಎನ್ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಮತ್ತೊಂದು ಯುದ್ಧ ನೌಕೆ ಐಎನ್ಎಸ್ ನೀಲಗಿರಿಯನ್ನು ಕೂಡ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ, ನಮ್ಮ ನೌಕಾಪಡೆಯ ಸಾಮರ್ಥ್ಯ ವೃದ್ಧಿಸುತ್ತಿದೆ: ರಾಜನಾಥ್ ಸಿಂಗ್
ಐಎನ್ಎಸ್ ಖಂಡೇರಿ ಸೇರ್ಪಡೆ ಮೂಲಕ ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತೀಯ ನೌಕಾ ಪಡೆಗೆ ಆನೆ ಬಲ: ಐಎನ್‌ಎಸ್ ಖಂಡೇರಿ ಜಲಾಂತರ್ಗಾಮಿ ಅಧಿಕೃತ ಸೇರ್ಪಡೆ
ಭಾರತೀಯ ನೌಕಾ ಪಡೆಗೆ ಮತ್ತೊಂದು ಆನೆ ಬಲ ಬಂದಾಂತಾಗಿದ್ದು, ಬಹು ನಿರೀಕ್ಷಿತ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

