ದೇಶ

ಬಡ್ತಿಯಲ್ಲಿ ತಾರತಮ್ಯ ಆರೋಪ: ಸುಪ್ರೀಂ ಕೋರ್ಟ್ ಮೊರೆ ಹೋದ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು!

ಬಡ್ತಿ ವಿಚಾರದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಭಾರತೀಯ ಸೇನೆಯ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಬಡ್ತಿಯಲ್ಲಿ ತಾರತಮ್ಯ ಆರೋಪ: ಸುಪ್ರೀಂ ಕೋರ್ಟ್ ಮೊರೆ ಹೋದ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು!
ಸಂಗ್ರಹ ಚಿತ್ರ
Published On :
ನವದೆಹಲಿ: ಬಡ್ತಿ ವಿಚಾರದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಭಾರತೀಯ ಸೇನೆಯ 100ಕ್ಕೂ ಅಧಿಕ ಸೈನ್ಯಾಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಹೇಳಲಾಗುತ್ತಿದೆ.
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಸೇನೆಯಲ್ಲಿ ತಾರತಮ್ಯ ನಡೆಯುತ್ತಿದ್ದು, ಉತ್ತಮ ಕರ್ತವ್ಯ ನಿರ್ವಹಣೆ, ಹಾಗೂ ಹಿರಿತನದ ಹೊರತಾಗಿಯೂ ತಮನ್ನು ಬಡ್ತಿಗೆ ಪರಿಗಣಿಸುತ್ತಿಲ್ಲ. ಇದು ಸೈನಿಕರ ನೈತಿಕತೆಯೇ  ಕುಸಿಯುವಂತೆ ಮಾಡಿದೆ ಎಂದು ಸೈನಿಕರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲೆಫ್ಟಿನೆಂಟ್ ಕರ್ನಲ್ ಪಿಕೆ ಚೌದರಿ ನೇತೃತ್ವದಲ್ಲಿ ಸೈನ್ಯಾಧಿಕಾರಿಗಳು ಈ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದು, ಅರ್ಜಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸುವ ಯೋಧರೂ ಕೂಡ ಯುದ್ಧದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಂತೆಯೇ  ಕಾರ್ಯ ನಿರ್ವಹಿಸುತ್ತಾರೆ. ಹೀಗಿರುವಾಗ ಯುದ್ಧ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವ ಯೋಧರ ಬಡ್ತಿಗೂ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಯೋಧರ ಬಡ್ತಿಗಳಿಗೂ ಸಾಕಷ್ಟು ವ್ಯತ್ಯಾಸ ಮಾಡಲಾಗುತ್ತಿದೆ. ತಮಗೂ ಕೂಡ ಯುದ್ಧದಲ್ಲಿ  ಪಾಲ್ಗೊಳ್ಳುವ ಯೋಧರಂತೆಯೇ ಬಡ್ತಿ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಗೆ ಇಳಿಯುವ ಯೋಧರನ್ನು ಕಾರ್ಯಾಚರಣೆಗೆ ಇಳಿಯದ ಯೋಧರಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಯೋಧರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಪತ್ರಿಕೆಯ ಈ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಂತೆಯೇ ಭಾರತೀಯ ಸೇನೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಕೇಂದ್ರ ಸರ್ಕಾರ ಸೇನೆಯಲ್ಲಿ ನೂತನ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಅಜಯ್ ವಿಕ್ರಮ್ ಸಿಂಗ್ ಸಮಿತಿ ನೀಡಿದ್ದ ಎರಡನೇ ಹಂತದ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ವರದಿಯ  ಅನ್ವಯ ಸೇನಾ ಜನರಲ್‌ಗಳ 2ಮತ್ತು 3ನೇ ಸ್ಟಾರ್‌ಗಳ 140ಹೊಸ ಹುದ್ದೆ ಮತ್ತು ಸೇನೆಯ ಮೂರು ವಿಭಾಗಗಳ ಬ್ರಿಗೇಡಿಯರ್, ಕರ್ನಲ್ ರಾಂಕಿನ ಸುಮಾರು 1,756ಹುದ್ದೆಗಳಿಗಾಗಿ 2008ರ ಅಕ್ಟೋಬರ್ ನಲ್ಲಿ ಕ್ಯಾಬಿನೆಟ್  ಅನುಮೋದನೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.