ದೇಶ

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್: ತಿಂಗಳಿಗೆ 10 ಲಕ್ಷ ಪಾಕೆಟ್ ಮನಿ!

ಬ್ಯಾಂಕ್‌ ನೌಕರನೊಬ್ಬ ತಾನು ಪ್ರೀತಿಸುತಿದ್ದ ಬಾರ್ ಡಾನ್ಸರ್‌ಗಾಗಿ ಹರಿಯಾಣ ಸರ್ಕಾರ ಮತ್ತು ಚಂಡೀಗಢ ಆಡಳಿತದ ಇಲಾಖೆಗಳ ಬೊಕ್ಕಸದ 657 ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. ಈ ಮೂಲಕ ಆಕೆಗೆ ಡಾನ್ಸ್ ಬಿಡುವಂತೆ ಹೇಳಿ, ಪ್ರತಿ ತಿಂಗಳು 10 ಲಕ್ಷ ಪಾಕೆಟ್ ಮನಿ ನೀಡುತ್ತಿದ್ದನು ಎನ್ನುವ ಮಾಹಿತಿ ಹೊರಬಿದಿದ್ದೆ.

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್: ತಿಂಗಳಿಗೆ 10 ಲಕ್ಷ ಪಾಕೆಟ್ ಮನಿ!
ಬಾರ್ ಡಾನ್ಸರ್ ಮೇಲಿನ ಪ್ರೀತಿಗೆ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್ — Online Desk
Published On :

ಚಂಡೀಗಢ: ಒಳ್ಳೆಯದೇ ಆಗಲಿ, ಕೆಟ್ಟದೆ ಆಗಲಿ, ಪ್ರೀತಿಗಾಗಿ ನಮ್ ಗಂಡುಮಕ್ಕಳು ಏನ್ ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ! ಹೌದು, ಚಂಡೀಗಢದಲ್ಲಿ ಬ್ಯಾಂಕ್‌ ನೌಕರನೊಬ್ಬ ತಾನು ಪ್ರೀತಿಸುತಿದ್ದ ಬಾರ್ ಡಾನ್ಸರ್ ಗೆಳತಿಗಾಗಿ ಹರಿಯಾಣ ಸರ್ಕಾರ ಮತ್ತು ಚಂಡೀಗಢ ಆಡಳಿತದ ಇಲಾಖೆಗಳ 657 ಕೋಟಿ ರೂ. ಸರ್ಕಾರಿ ಬೊಕ್ಕಸದ ಹಣವನ್ನು ಲೂಟಿ ಮಾಡಿದ್ದಾನೆ. ಈ ಮೂಲಕ ಆಕೆಗೆ ಡಾನ್ಸ್ ಬಿಡುವಂತೆ ಹೇಳಿ, ಪ್ರತಿ ತಿಂಗಳು 10 ಲಕ್ಷ ರೂ. ಪಾಕೆಟ್ ಮನಿ ನೀಡುತ್ತಿದ್ದನು ಎನ್ನುವ ಅಘತಾಕಾರಿ ಮಾಹಿತಿ ಹೊರಬಿದಿದ್ದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಇತ್ತೀಚೆಗೆ ಸಿಬಿಐ ತನಿಖೆಯಿಂದ ಆಘಾತಕಾರಿ ಹಗರಣ ಬೆಳಕಿಗೆ ಬಂದಿದ್ದು, ಹರಿಯಾಣ ಮತ್ತು ಚಂಡೀಗಢದ ಸರ್ಕಾರಿ ಇಲಾಖೆಗಳ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 657 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಿಭವ್ ರಿಷಿ ಎಂಬಾತನ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಈತ ತಾನು ಪ್ರೀತಿಸುತ್ತಿದ್ದ ಬಾರ್ ಡಾನ್ಸರ್‌ಗಾಗಿ ಈ ಹಣವನ್ನು ನೀರಿನಂತೆ ಖರ್ಚು ಮಾಡಿರುವುದು ಬಹಿರಂಗಗೊಂಡಿದೆ.

IDFC ಫಸ್ಟ್ ಬ್ಯಾಂಕ್‌ನ ಮಾಜಿ ಶಾಖಾ ವ್ಯವಸ್ಥಾಪಕನಾಗಿರುವ ರಿಭವ್ ರಿಷಿಗೆ 2025ರ ಮಾರ್ಚ್-ಏಪ್ರಿಲ್‌ನಲ್ಲಿ  ಬಿಹಾರದ ಸಿವಾನ್ ಮೂಲದ ಈ ಬಾರ್ ಡಾನ್ಸರ್‌ ಪರಿಚಯವಾಗಿತ್ತು. ಈತ ಈಗಾಗಲೇ ವಿವಾಹಿತನಾಗಿದ್ದರೂ, ಚಂಡೀಗಢದ ಕಾರ್ಯಕ್ರಮವೊಂದರಲ್ಲಿ ಬಾರ್ ಡಾನ್ಸರ್‌ನನ್ನು ಭೇಟಿಯಾದಗ, ಆಕೆಯ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದನು.  ಜೊತೆಗೆ, ಆಕೆಗೆ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿ, ಅದಕ್ಕೆ ಪ್ರತಿಯಾಗಿ ತಿಂಗಳಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ಅದರಂತೆ ಸುಮಾರು 56 ಲಕ್ಷ ರೂಪಾಯಿಗಳನ್ನು ಆಕೆಗೆ ವರ್ಗಾಯಿಸಿದ್ದ. ಇದರೊಂದಿಗೆ, ದೆಹಲಿಯ ದ್ವಾರಕಾದಲ್ಲಿ ಆಕೆಗೆ 4 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿಕೊಟ್ಟಿದ್ದನು. ಅಲ್ಲದೆ ದುಬೈ, ಮಕಾವು ಮತ್ತು ಥಾಯ್ಲೆಂಡ್‌ಗೆ ಆಕೆಯೊಂದಿಗೆ ಐಷಾರಾಮಿ ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದನು. ಜೊತೆಗೆ, ದುಬೈನಲ್ಲಿ ಬುರ್ಜ್ ಅಲ್ ಅರಬ್ ಎದುರಿನ ಡ್ಯೂಪ್ಲೆಕ್ಸ್ ವಿಲ್ಲಾದಲ್ಲಿ ತಂಗಿದ್ದರು. ಅಲ್ಲದೆ ದುಬೈನಲ್ಲಿ ನೆಲೆಸುವ ಪ್ಲಾನ್ ಮಾಡಿ ಅಲ್ಲಿ 4-BHK ಮನೆ ಹಾಗೂ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನು ಬುಕ್ ಮಾಡಿದ್ದ ಎನ್ನಲಾಗಿದೆ.

ಏತನ್ಮಧ್ಯೆ, ಚಂಡೀಗಢದ ಹೋಟೆಲ್‌ಗಳು ಮತ್ತು ಝಡ್ ಮ್ಯಾನರ್ ಎಂಬಲ್ಲಿ ಐಷಾರಾಮಿ ಮುಜ್ರಾ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಒಂದೊಂದು ಪಾರ್ಟಿಗೆ 15 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಈ ಪಾರ್ಟಿಗಳಲ್ಲಿ ಹರಿಯಾಣದ ಐಎಎಸ್ ಅಧಿಕಾರಿ ಪಂಕಜ್ ಅಗರ್ವಾಲ್ ಸೇರಿದಂತೆ ಹಲವು ಉನ್ನತ ಸರ್ಕಾರಿ ಅಧಿಕಾರಿಗಳು ಭಾಗವಹಿಸುತ್ತಿದ್ದರು ಮತ್ತು ಬಾರ್ ಡಾನ್ಸರ್‌ಗಳ ಮೇಲೆ ಹಣದ ನೋಟುಗಳನ್ನು ಎಸೆಯುತ್ತಿದ್ದರು ಎಂದು ಮಹಿಳೆ ಸಿಬಿಐಗೆ ಹೇಳಿಕೆ ನೀಡಿದ್ದಾಳೆ.

ಹಾಗಾದ್ರೆ, ಹಣ ಲೂಟಿ ಮಾಡಿದ್ದು ಹೇಗೆ?

ಸರ್ಕಾರಿ ಇಲಾಖೆಗಳಾದ ಹರಿಯಾಣ ಸ್ಕೂಲ್ ಶಿಕ್ಷಣ ಪರಿಯೋಜನಾ ಪರಿಷತ್ ಮತ್ತು ಹರಿಯಾಣ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಹಣವನ್ನು ನಕಲಿ ದಾಖಲೆಗಳು ಮತ್ತು ಶೆಲ್ ಕಂಪನಿಗಳ ಮೂಲಕ ರಿಷಿ ಬೇರೆಡೆಗೆ ವರ್ಗಾಯಿಸಿದ್ದ. ತನಿಖೆಯ ವೇಳೆ ರಿಷಿ ಖಾತೆಗೆ ಕೋಟ್ಯಂತರ ರೂಪಾಯಿ ಬಂದಿರುವುದು ಹಾಗೂ ಆತನ ಪತ್ನಿ ದಿವ್ಯಾ ಅರೋರಾ ಖಾತೆಗೆ 18.32 ಕೋಟಿ ರೂ. ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.