ರಾಜ್ಯ

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ! Video

ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ಬೆಂಗಳೂರು ದಕ್ಷಿಣ ಜಿಲ್ಲೆ, ಮಂಡ್ಯ, ಕೊಡಗು, ಧಾರವಾಡ ಮತ್ತು ಬೀದರ್‌ನಲ್ಲಿ ಏಕಕಾಲಕ್ಕೆ ಈ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ! Video
ಲೋಕಾಯುಕ್ತ
Published On :

ಬೆಂಗಳೂರು: ರಾಜ್ಯಾದ್ಯಂತ ಅಕ್ರಮ ಆಸ್ತಿ ಗಳಿಕೆ (DA) ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆಸಿದ ದಿಢೀರ್ ದಾಳಿಯಲ್ಲಿ ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ಬೆಂಗಳೂರು ದಕ್ಷಿಣ ಜಿಲ್ಲೆ, ಮಂಡ್ಯ, ಕೊಡಗು, ಧಾರವಾಡ ಮತ್ತು ಬೀದರ್‌ನಲ್ಲಿ ಏಕಕಾಲಕ್ಕೆ ಈ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆರೋಪಿತ ಸರ್ಕಾರಿ ಅಧಿಕಾರಿಗಳು, ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ 33ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸವನಗುಡಿಯ ಜಿಲ್ಲಾ ನೋಂದಣಾಧಿಕಾರಿ (District Registrar) ಶ್ರೀದೇವಿ ಅವರ ಬಳಿ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರ ಮೌಲ್ಯ 6.80 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀ ದೇವಿ ಅವರ ಬಳಿ 5.86 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು (ಎರಡು ನಿವೇಶನಗಳು, ಎರಡು ಮನೆಗಳು, ಕೃಷಿ ಭೂಮಿ ಮತ್ತು ಗಾರ್ಮೆಂಟ್ ಫ್ಯಾಕ್ಟರಿ) ಪತ್ತೆಹಚ್ಚಿದ್ದಾರೆ. ಅಲ್ಲದೆ, ಅವರ ಬಳಿ 30.87 ಲಕ್ಷ ರೂ. ನಗದು, 35.58 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, 23.15 ಲಕ್ಷ ರೂ. ಮೌಲ್ಯದ ವಾಹನಗಳು ಹಾಗೂ 5 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿವೆ.

ದಾಳಿಗೆ ಒಳಗಾದ ಇತರ ಅಧಿಕಾರಿಗಳೆಂದರೆ: ಮಂಡ್ಯ ಜಿಲ್ಲೆ ಮದ್ದೂರಿನ ಬಿಸಿಎಂ ಇಲಾಖೆ ಹಾಸ್ಟೆಲ್ ಸೂಪರಿಟೆಂಡೆಂಟ್ ಎಂ ಶಿವರಾಜು (2.71 ಕೋಟಿ ರೂ. ಅಕ್ರಮ ಆಸ್ತಿ) ಬೆಂಗಳೂರಿನ ಶಿವಾಜಿನಗರದ ನಿವೃತ್ತ ಜಿಬಿಎ (GBA) ಸಹಾಯಕ ಎಂಜಿನಿಯರ್ ಎಚ್.ಎಂ. ರಂಗನಾಥ್ (3.84 ಕೋಟಿ ರೂ) ಕಲಬುರಗಿಯ ಜೆಸ್ಕಾಂ (Gescom) ಎ.ಇ.ಇ. (AEE) ರಾಜೇಶ್ವರಿ (1.91 ಕೋಟಿ ರೂ) ಕೊಡಗಿನ ಪುರಸಭೆ ಆಯುಕ್ತ ಎಚ್.ಆರ್. ರಮೇಶ್ (1.78 ಕೋಟಿ ರೂ) ಧಾರವಾಡದ ಹೆಸ್ಕಾಂ (Hescom) ಎ.ಇ.ಇ. ಕಿರಣ್ ಬೈಂದೂರ್ (1.79 ಕೋಟಿ ರೂ) ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿಯ ಎಫ್.ಡಿ.ಎ. (FDA) ದರ್ಶನ್ ಗೌಡ ಜಿ. (1.86 ಕೋಟಿ ರೂ.) ಮತ್ತು ಬೀದರ್‌ನ ನಿವೃತ್ತ ಕೃಷಿ ಅಧಿಕಾರಿ ಮಾಣಿಕ್ ರಾವ್ ಬಳಿ 2.51 ಕೋಟಿ ರೂ ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.