ಮಲ್ಲಮ್ಮನನ್ನು Bigg Boss ಮನೆಗೆ ಕಳುಹಿಸಲು ನೆರವಾಗಿದ್ದ ಡಿಸೈನರ್ ಪಲ್ಲವಿ ಇನ್ನಿಲ್ಲ..!
ಮಲ್ಲಮ್ಮ ಅವರಿಗೆ ರಿಷಿ ಬೊಟಿಕ್‌ನಲ್ಲಿ ಕೆಲಸ ಹಾಗೂ ಆಶ್ರಯ ನೀಡುವ ಮೂಲಕ ಪಲ್ಲವಿ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸಂದರ್ಭದಲ್ಲೂ ಪಲ್ಲವಿ ವೇದಿಕೆಗೆ ತೆರಳಿ ಅವರನ್ನು ಸ್ವಾಗತಿಸಿದ್ದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ತಮ್ಮ ಮುಗ್ಧತೆ, ಲೆಮನ್ ಟೀ ಮೇಲಿನ ಪ್ರೀತಿ ಹಾಗೂ ವಯಸ್ಸನ್ನೂ ಮೀರಿದ ಆತ್ಮವಿಶ್ವಾಸದಿಂದ ಜನರ ಗಮನ ಸೆಳೆದಿದ್ದ ಮಲ್ಲಮ್ಮ ಅವರ ಬಿಗ್ ಬಾಸ್ ಪಯಣಕ್ಕೆ ಬೆನ್ನೆಲುಬಾಗಿ ನಿಂತಿದ್ದ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ನಿಧನರಾಗಿದ್ದಾರೆ.
ರಿಷಿ ಬೊಟಿಕ್ ಉದ್ಯಮಿಯಾಗಿ, ಹಲವು ನಟ-ನಟಿಯರ ಉಡುಪು ವಿನ್ಯಾಸಕರಾಗಿ ಗುರುತಿಸಿಕೊಂಡಿದ್ದ ಪಲ್ಲವಿ ಸೆಪ್ಟೆಂಬರ್ 20ರಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ನಟಿ ಕೃಷಿ ತಾಪಂಡ ಸೇರಿದಂತೆ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಉತ್ತರ ಕರ್ನಾಟಕದ ಮಲ್ಲಮ್ಮ ಅವರು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಗಮನ ಸೆಳೆದು ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದರು.
ಮಲ್ಲಮ್ಮ ಅವರಿಗೆ ರಿಷಿ ಬೊಟಿಕ್‌ನಲ್ಲಿ ಕೆಲಸ ಹಾಗೂ ಆಶ್ರಯ ನೀಡುವ ಮೂಲಕ ಪಲ್ಲವಿ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸಂದರ್ಭದಲ್ಲೂ ಪಲ್ಲವಿ ವೇದಿಕೆಗೆ ತೆರಳಿ ಅವರನ್ನು ಸ್ವಾಗತಿಸಿದ್ದರು. ಬಳಿಕ ಮಲ್ಲಮ್ಮ ಅವರ ಮನೆಗೆ ದಿಢೀರ್ ಭೇಟಿ ನೀಡಿ, ಪಾರ್ಟಿಯನ್ನೂ ಆಯೋಜಿಸಿದ್ದರು.
ಮಲ್ಲಮ್ಮ ಮತ್ತು ಪಲ್ಲವಿ ಒಟ್ಟಿಗೆ ಮಾಡುತ್ತಿದ್ದ ರೀಲ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದವು.
ಬಿಗ್ ಬಾಸ್ ಬಳಿಕವೂ ಮಲ್ಲಮ್ಮ ಹಲವು ಉತ್ಪನ್ನಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳಲು ಪಲ್ಲವಿ ಬೆಂಬಲ ನೀಡಿದ್ದರು. ಹೀಗಾಗಿ ಮಲ್ಲಮ್ಮ ಅವರ ಬಿಗ್ ಬಾಸ್ ಪಯಣದಿಂದ ಹಿಡಿದು ನಂತರದ ದಿನಗಳವರೆಗೂ ಪಲ್ಲವಿ ಪ್ರಮುಖ ಬೆಂಬಲವಾಗಿ ನಿಂತಿದ್ದರು.
ಪಲ್ಲವಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಆಸಿಯಾ ಸೇರಿದಂತೆ ಹಲವು ಕಲಾವಿದರಿಗೆ ಉಡುಪು ವಿನ್ಯಾಸ ಮಾಡಿಕೊಟ್ಟಿದ್ದರು.
ಕೃಷಿ ತಾಪಂಡ, ‘ಅಣ್ಣಯ್ಯ’ ಸಿನಿಮಾ ಖ್ಯಾತಿಯ ಮಧು, ಪ್ರೇಮಾ, ಸಂಗೀತಾ ಭಟ್, ಅನುಪಮಾ ಹಾಗೂ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯ ನಟ ಮನೋಜ್ ಸೇರಿದಂತೆ ಹಲವರಿಗೆ ಅವರು ಬಟ್ಟೆ ವಿನ್ಯಾಸ ಮಾಡಿದ್ದರು.
‘ಗೌರಿ ಕಲ್ಯಾಣ’ ಧಾರಾವಾಹಿ ನಟಿ ಶಿಲ್ಪಾ ಕಾಮತ್ ಹಾಗೂ ನೀತಾ ಅಶೋಕ್ ಸೇರಿದಂತೆ ಕಿರುತೆರೆಯ ಹಲವು ಕಲಾವಿದರಿಗೂ ಪಲ್ಲವಿ ಆತ್ಮೀಯರಾಗಿದ್ದರು.
ಪಲ್ಲವಿ ನಿಧನದ ಸುದ್ದಿ ಕಿರುತೆರೆ ಹಾಗೂ ಚಿತ್ರರಂಗದ ಹಲವು ಮಂದಿಗೆ ಆಘಾತ ಉಂಟುಮಾಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ಪಲ್ಲವಿ ಅವರ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತವಾಗಿ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



