ಗಾಢ ನಿದ್ದೆಯಲ್ಲಿದ್ದ Bigg Boss ಸ್ಪರ್ಧಿಗಳಿಗೆ ಸೈರನ್ ಶಾಕ್; ದೊಡ್ಮನೆಗೆ ಕಿಚ್ಚ ಸುದೀಪ್ ಸಡನ್ ಎಂಟ್ರಿ, ಕಾರಣವೇನು..?
ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ನಿದ್ದೆಯಿಂದ ಎದ್ದು ಲಿವಿಂಗ್ ಏರಿಯಾಗೆ ಓಡಿಬಂದಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಮಾತುಗಳು ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಎರಡನೇ ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಇದೀಗ ದಿಢೀರ್ ಶಾಕ್ ಎದುರಾಗಿದೆ.
ಎಲ್ಲರೂ ಗಾಢ ನಿದ್ದೆಯಲ್ಲಿದ್ದ ವೇಳೆ ಏಕಾಏಕಿ ಅಪಾಯದ ಸೈರನ್ ಮೊಳಗಿದ್ದು, ಮನೆಯೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದ್ದು, ಪ್ರೋಮೋದಲ್ಲಿ ಮನೆಯಲ್ಲೆಲ್ಲಾ ಏಕಾಏಕಿ ಕೆಂಪು ಬೆಳಕು ಆವರಿಸಿ ಸೈರನ್ ಮೊಳಗುತ್ತಿರುವುದು ಕಂಡು ಬಂದಿದೆ.
ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ನಿದ್ದೆಯಿಂದ ಎದ್ದು ಲಿವಿಂಗ್ ಏರಿಯಾಗೆ ಓಡಿಬಂದಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಮಾತುಗಳು ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.
ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್, ಖಡಕ್ ಎಚ್ಚರಿಕೆ ನೀಡುವ ಮೂಲಕ ಹೊಸ ಟ್ವಿಸ್ಟ್‌ವೊಂದನ್ನು ಬಿಚ್ಚಿಟ್ಟಿದ್ದಾರೆ. ‘ಈ ಜರ್ನಿಯಲ್ಲಿ ಈಗೊಂದು ಎಮರ್ಜೆನ್ಸಿ ಬಂದಿದೆ. ಈ ವಾರ ಈ ಮನೆಯಲ್ಲಿ ಯಾರೂ ಉಳಿಯುತ್ತಾರೆ ಎಂಬ ಗ್ಯಾರಂಟಿ ಇಲ್ಲ’ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೇ ಪರಸ್ಪರ ನಾಮಿನೇಟ್ ಮಾಡುತ್ತಾರೆ. ಆದರೆ, ಈ ಬಾರಿ ಬೇರೆಯದ್ದೇ ಆಟ ಶುರುವಾಗಿದೆ. ಪ್ರತಿಯೊಬ್ಬ ಸ್ಪರ್ಧಿಯನ್ನೂ ಬಿಗ್ ಬಾಸ್ ತಂಡವೇ ನೇರವಾಗಿ ನಾಮಿನೇಟ್ ಮಾಡುತ್ತಿದೆ ಎಂದು ಸುದೀಪ್ ತಿಳಿಸಿದ್ದಾರೆ.
‘ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಯಾರು ಬೇಕಾದರೂ ಮನೆಯಿಂದ ಹೊರಬೀಳಬಹುದು’ ಎಂಬ ಎಚ್ಚರಿಕೆಯ ಮೂಲಕ ಸುದೀಪ್ ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಹೊಸ ಟ್ವಿಸ್ಟ್ ನೀಡಿದ್ದಾರೆ. ಈ ಘೋಷಣೆ ಕೇಳುತ್ತಿದ್ದಂತೆ ಸ್ಪರ್ಧಿಗಳ ಮುಖದಲ್ಲಿದ್ದ ನಗು ಮಾಯವಾಗಿ ಆತಂಕ ಮನೆಮಾಡಿದೆ.
ಸೈಲೆಂಟ್ ಆಗಿ ಆರಂಭವಾಗಿದ್ದ ಬಿಗ್ ಬಾಸ್ ಮನೆಯ ಆಟ ಇದೀಗ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದ್ದು, ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ‘ಎಮರ್ಜೆನ್ಸಿ ಎಕ್ಸಿಟ್’ ಮೂಲಕ ಬಿಗ್ ಬಾಸ್ ಯಾವ ಹೊಸ ಆಟ ಆಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



