ಸಿನಿಮಾ ಸುದ್ದಿ

Bigg Boss: ಕೌಂಟ್‌ಡೌನ್ ಶುರು! ಈ ಬಾರಿ ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದ್ದು, ದಕ್ಷಿಣ ಭಾರತದ ನಾಲ್ವರು ಸ್ಟಾರ್ ಗಳಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಆಯಾ ಭಾಷೆಗಳಲ್ಲಿ ಶೋ ನಡೆಸಿಕೊಡಲಿದ್ದಾರೆ.

Bigg Boss: ಕೌಂಟ್‌ಡೌನ್ ಶುರು! ಈ ಬಾರಿ ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ
ಬಿಗ್ ಬಾಸ್ ಪ್ರೋಮೋ
Published On :

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿಯ ವಿಶೇಷವೇನೆಂದರೆ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಶೋ ಆರಂಭಗೊಳ್ಳಲಿದೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದ್ದು, ದಕ್ಷಿಣ ಭಾರತದ ನಾಲ್ವರು ಸ್ಟಾರ್ ಗಳಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಆಯಾ ಭಾಷೆಗಳಲ್ಲಿ ಶೋ ನಡೆಸಿಕೊಡಲಿದ್ದಾರೆ.

ಈ ಕುರಿತ ವಿಶೇಷ ಪ್ರೋಮೊ ರಿಲೀಸ್ ಆಗಿದ್ದು, ಅದರಲ್ಲಿ ನಾಲ್ವರು ಸೂಪರ್ ಸ್ಟಾರ್ ಗಳು ಒಟ್ಟಾಗಿ ಕಾಣಿಸಿಕೊಂಡಿದ್ದು, ವೀಕ್ಷಕರ ಗಮನ ಸೆಳೆದಿದೆ. ನಾಲ್ಕು ರಾಜ್ಯಗಳ ಶ್ರೀಮಂತ ಸಂಸ್ಕೃತಿ, ವೈವಿಧ್ಯಮಯ ಆಹಾರ ಶೈಲಿ ಮತ್ತು ಹಾಸ್ಯವನ್ನು ಸಮ್ಮಿಳಗೊಳಿಸಿ ಈ ವಿಶೇಷ ಪ್ರೋಮೋ ಚಿತ್ರೀಕರಿಸಲಾಗಿದೆ.

ಎಲ್ಲಾ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮ ಸೆ. 6 ರಂದು ಪ್ರಾರಂಭವಾಗುತ್ತಿವೆ. ಬಿಗ್‌ಬಾಸ್ ಇತಿಹಾಸದಲ್ಲೇ ನಾಲ್ಕೂ ಆವೃತ್ತಿಯ ಆಯಾ ಸರಣಿ ಒಂದೇ ದಿನ ಪ್ರೀಮಿಯರ್ ಆಗ್ತಿರೋದು ಇದೇ ಮೊದಲು.

ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ್ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ. ಈ ನಾಲ್ಕು ಭಾಷೆಗಳ ಹೊಸ ಸೀಸನ್ ಗಳು ಒಂದೇ ದಿನ ಪ್ರಸಾರ ಆರಂಭಿಸಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.