ಸಿನಿಮಾ ಸುದ್ದಿ

Bigg Boss Kannada: 'ನಿಮಗಿಂತಲೂ ದೊಡ್ಡ ಆರ್ಟಿಸ್ಟ್ ಇದ್ದಾರೆ'; ಕಿಚ್ಚ ಸುದೀಪ್'ಗೆ ಓಂ ಪ್ರಕಾಶ್ ರಾವ್ ಹೀಗೆ ಹೇಳಿದ್ಯಾಕೆ?

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಹಲವು ಸ್ಪರ್ಧಿಗಳಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದೆ.

Bigg Boss Kannada: 'ನಿಮಗಿಂತಲೂ ದೊಡ್ಡ ಆರ್ಟಿಸ್ಟ್ ಇದ್ದಾರೆ'; ಕಿಚ್ಚ ಸುದೀಪ್'ಗೆ ಓಂ ಪ್ರಕಾಶ್ ರಾವ್ ಹೀಗೆ ಹೇಳಿದ್ಯಾಕೆ?
ಓಂ ಪ್ರಕಾಶ್ ರಾವ್ - ಸುದೀಪ್
Published On :

ಬಿಗ್ ಬಾಸ್ ಕನ್ನಡ ಸೀಸನ್-13ರ ಮೊದಲʻವಾರದ ಕತೆ ಕಿಚ್ಚನ ಜೊತೆʼ ಪ್ರಸಾರವಾಗಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಹಲವು ಸ್ಪರ್ಧಿಗಳಿಗೆ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ನಡುವೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದು, ಆಗಲೇ ಅವರು ಕಿಚ್ಚ ಸುದೀಪ್ ಅವರಿಗೆ ಒಂದು ಮಾತು ಹೇಳುತ್ತಾರೆ. ಆ ಮಾತು ಸಹ ವೈರಲ್ ಆಗಿದೆ. ಅದಕ್ಕೆ ಸುದೀಪ್ ಕೊಟ್ಟ ರಿಯಾಕ್ಷನ್ನು ಕೂಡ ಅಷ್ಟೆ ಮಜವಾಗಿದೆ.

ಮನೆಯಲ್ಲಿ ನಿಮಗಿಂತಲೂ ದೊಡ್ಡ ಆರ್ಟಿಸ್ಟ್ ಇದ್ದಾರೆ. ನಾನು ಸುದೀಪ್ ಅವರೇ ದೊಡ್ಡ ಕಲಾವಿದರು ಅಂದುಕೊಂಡಿದ್ದೆ. ಆದರೆ, ನಿಮಗಿಂತಲೂ ದೊಡ್ಡ ಕಲಾವಿದರು ಮನೆಯಲ್ಲಿ ಇದ್ದಾರೆ ಎಂದು ಓಂ ಪ್ರಕಾಶ್ ರಾವ್ ಅವರು ಹೇಳುತ್ತಾರೆ. ಇದನ್ನು ಕಿಚ್ಚ ಸುದೀಪ್ ಅವರ ಮುಂದೇನೆ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

ಓಂ ಪ್ರಕಾಶ್ ರಾವ್ ಅವರ ಮಾತು ಕೇಳಿದ ಸುದೀಪ್ ಕೋಪ ಮಾಡಿಕೊಳ್ಳಲಿಲ್ಲ. ಬದಲಾಗಿ, "ನನ್ನ ಅದೃಷ್ಟ ಚೆನ್ನಾಗಿತ್ತು. ನೀವು ಹುಚ್ಚ ಚಿತ್ರ ಮಾಡುವಾಗ ಆ ದೊಡ್ಡ ಆರ್ಟಿಸ್ಟ್ ನಿಮಗೆ ಸಿಗಲಿಲ್ಲ" ಅಂತಲೇ ಕಿಚ್ಚ ಸುದೀಪ್ ಹೇಳಿದ್ದಾರೆ.

ಈ ಮಾತಿನಿಂದ ಓಂ ಪ್ರಕಾಶ್ ರಾವ್ ಸಿಕ್ಕಾಪಟ್ಟೆ ನಕ್ಕು ಬಿಡ್ತಾರೆ. ಸುದೀಪ್ ಕೂಡ ಇದನ್ನ ಎಂಜಾಯ್ ಮಾಡ್ತಾರೆ. ಈ ಒಂದು ಕ್ಷಣದ ವಿಡಿಯೋ ತುಣುಕು ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.