'ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರವಿದು': ಬಿಗ್ ಬಾಸ್ ಕನ್ನಡ ಖ್ಯಾತಿಯ ಅಶ್ವಿನಿ ಗೌಡ ಪೋಸ್ಟ್!
ನಾನೊಬ್ಬ ಕಲಾವಿದೆ, ಮಗನ ತಾಯಿ, ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಬಿನಯಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ ಎಂದಿದ್ದಾರೆ.

ಬೆಂಗಳೂರು: ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ, ಖ್ಯಾತ ನಟಿ ಅಶ್ವಿನಿ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, 'ನನ್ನ ಮೌನ ದೌರ್ಬಲ್ಯವಲ್ಲ… ನನ್ನ ಕುಟುಂಬದ ನೆಮ್ಮದಿಗಾಗಿ ತೆಗೆದುಕೊಂಡ ನಿರ್ಧಾರ' ಎಂದು ಬರೆದಿದ್ದಾರೆ.
'ನನ್ನ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಪ್ರಸಾರವಾದ ವಿಡಿಯೋಗಳು, ಸಂದರ್ಶನಗಳು, ಟ್ರೋಲ್‌ಗಳು, ಫೋಟೊಗಳು ಹಾಗೂ ವೈಯಕ್ತಿಕ ವಿಚಾರಗಳು ನನ್ನನ್ನು ಮಾತ್ರವಲ್ಲ, ನನ್ನ ತಾಯಿ ಮತ್ತು ಮಗನನ್ನೂ ನೋಯಿಸಿವೆ' ಎಂದಿದ್ದಾರೆ.
'ನನ್ನ ಹೆಸರು, ನನ್ನ ಕುಟುಂಬದ ಹೆಸರು, ಫೋಟೊ–ವಿಡಿಯೋಗಳನ್ನು ಬಳಸುವುದರ ವಿರುದ್ಧ ನಾನು ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ನನ್ನ ಬಗ್ಗೆ ಈಗಾಗಲೇ ಪ್ರಕಟಿಸಿರುವ ವಿಷಯಗಳನ್ನೂ ತೆಗೆದುಹಾಕಬೇಕು, ಮುಂದೆಯೂ ಯಾವುದೇ ರೀತಿಯಲ್ಲಿ ಬಳಸಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದ್ದರಿಂದ ನ್ಯಾಯಾಲಯದ ಆದೇಶವನ್ನು ಗೌರವಿಸಿ ಎಲ್ಲ ಸಂಬಂಧಿತ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನಾನು ಒಬ್ಬ ತಾಯಿ… ನನ್ನ ಮಗನ ಭವಿಷ್ಯ ನನ್ನ ಮೊದಲ ಆದ್ಯತೆ. ನಾನು ಒಬ್ಬ ಮಗಳು… ನನ್ನ ತಾಯಿಯ ಮನಸ್ಸಿಗೆ ನೋವಾಗುವುದು ನನಗೆ ದೊಡ್ಡ ನೋವು. ನನ್ನ ತಂದೆ ಕಲಿಸಿಕೊಟ್ಟ ದಾರಿಯಲ್ಲಿ, ಅವರ ಆಶೀರ್ವಾದದೊಂದಿಗೆ ನಾನು ನಡೆಯುತ್ತಿದ್ದೇನೆ. ಭಯದಿಂದ ನಾನು ಮೌನವಾಗಿಲ್ಲ… ಕುಟುಂಬಕ್ಕಾಗಿ ಮೌನವಾಗಿದ್ದೇನೆ. ಇದುವೇ ನನ್ನ ಉತ್ತರ ಎಂದು ಅವರು ತಿಳಿಸಿದ್ದಾರೆ.
ಪೋಸ್ಟರ್ ಹಂಚಿಕೊಂಡಿರುವ ಅವರು, ನಾನೊಬ್ಬ ಕಲಾವಿದೆ, ಮಗನ ತಾಯಿ, ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಬಿನಯಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ. ಇದು ನನ್ನನ್ನು ಬಿಗ್ ಬಾಸ್ ಮನೆವರೆಗೂ ಕರೆದುಕೊಂಡು ಹೋಯಿತು. ಬಿಗ್ ಬಾಸ್ ಮನೆ ನನಗೆ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ. ಅದೊಂದು ಅನುಭವ, ಪರೀಕ್ಷೆ ಮತ್ತು ಜೀವನದ ಪಾಠವಾಗಿತ್ತು ಎಂದು ಹೇಳಿದ್ದಾರೆ.
ಮುಂದುವರಿದು, ಆ ಮನೆಯೊಳಗಿನ ನಡೆ-ನುಡಿಗಳನ್ನು ಕೆಲವರು ವಿಮರ್ಷಿಸಿದರು. ಕೆಲವರು ಪ್ರೋತ್ಸಾಹಿಸಿದರು, ಕೆಲವರು ಕಾಲೆಳೆದರು, ಕೆಲವರು ಒಪ್ಪಿಕೊಂಡರು, ಮತ್ತೆ ಕೆಲವರ ಮಾತುಗಳು ನನ್ನ ಮನಸ್ಸಿಗೆ ನೋವುಂಟು ಮಾಡಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತುಕತೆ ಆರಂಭವಾಯಿತು. ಸತ್ಯಾಸತ್ಯತೆ ಪರಿಶೀಲಿಸದೆ ಹಳೆಯ ವಿಡಿಯೋಗಳನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ತೇಜೋವಧೆ ಮಾಡಿರುವುಜು ನನಗೆ ಮತ್ತು ನನ್ನ ಕುಟುಂಬಕ್ಕೆ ಮಾನಸಿಕವಾಗಿ ನೋವುಂಟು ಮಾಡಿದೆ ಎಂದು ಅಶ್ವಿನಿ ಗೌಡ ತಿಳಿಸಿದ್ದಾರೆ.
ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಮತ್ತು ತಡೆಯಾಜ್ಞೆ ಸಹ ತಂದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಆಧಾರರಹಿತ ಆರೋಪಗಳು, ಮಾನಹಾನಿ ವಿಷಯಗಳು, ಹಳೆಯ ವಿಡಿಯೋಗಳನ್ನು ತಿರುಚಿ ಪ್ರಸಾರ ಮಾಡಿದರೆ ಕಾನೂನು ಪ್ರಕಾರ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



