ಸಲ್ಮಾನ್ ಖಾನ್ ದ್ವಂದ ನಿಲುವುಳ್ಳ ಮೂರ್ಖ: 'ಬಿಗ್ ಬಾಸ್ ಮಾಜಿ ಸ್ಪರ್ಧಿ' ಸೋಫಿಯಾ ಹಯಾತ್ ಕಿಡಿ!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಲ್ಮಾನ್ ಖಾನ್ ಶರ್ಟ್ ಇಲ್ಲದೆ ಇರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ಸೋಫಿಯಾ, ಸಲ್ಮಾನ್ ಖಾನ್ ಅವರನ್ನು 'ದ್ವಂದ್ವ ನಿಲುವುಳ್ಳವರು' ಎಂದು ಕರೆದಿದ್ದಾರೆ.

ಬಿಗ್ ಬಾಸ್ ಸೀಸನ್ 20ರ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಶರ್ಟ್ ಇಲ್ಲದೆ ಕಾಣಿಸಿಕೊಂಡ ಸಲ್ಮಾನ್ ಖಾನ್ ವಿರುದ್ಧ ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಫಿಯಾ ಹಯಾತ್ ಕಿಡಿಕಾರಿದ್ದಾರೆ.
ತಮ್ಮ ವಯಸ್ಸು, ಕೇಶವಿನ್ಯಾಸ ಮತ್ತು ತೂಕದ ಕುರಿತಾದ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಲು ಸಲ್ಮಾನ್ ಆ ಸಂದರ್ಭವನ್ನು ಬಳಸಿಕೊಂಡರೆ, ಸೋಫಿಯಾ ತಾವು ಆ ರಿಯಾಲಿಟಿ ಶೋನಲ್ಲಿದ್ದಾಗ ಅನುಭವಿಸಿದ ವಿಷಯಗಳನ್ನು ಪ್ರಸ್ತಾಪಿಸಿ, ದೇಹದ ಆಕಾರವನ್ನು ಟೀಕಿಸುವ (body-shaming) ವಿಷಯದಲ್ಲಿ ಅವರ ನಿಲುವನ್ನು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಲ್ಮಾನ್ ಖಾನ್ ಶರ್ಟ್ ಇಲ್ಲದೆ ಇರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ಸೋಫಿಯಾ, ಸಲ್ಮಾನ್ ಖಾನ್ ಅವರನ್ನು 'ದ್ವಂದ್ವ ನಿಲುವುಳ್ಳವರು' ಎಂದು ಕರೆದಿದ್ದಾರೆ. ಶೋನಲ್ಲಿದ್ದಾಗ ತಮ್ಮ ನೋಟದ ಬಗ್ಗೆ ನಟ ಆಡಿದ್ದ ಮಾತುಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಅವರ ವರ್ತನೆಯಲ್ಲಿ ಸ್ಥಿರತೆಯಿಲ್ಲ ಎಂದು ಆರೋಪಿಸಿದ್ದಾರೆ.
"ಸಲ್ಮಾನ್ ಒಬ್ಬ ದ್ವಂದ್ವ ನಿಲುವುಳ್ಳ ಮೂರ್ಖ. ನಾನು ಬಿಗ್ ಬಾಸ್‌ನಲ್ಲಿದ್ದಾಗ ಅವರು ನನ್ನ ದೇಹ ಮತ್ತು ಮುಖದ ಬಗ್ಗೆ ಟೀಕೆ ಮಾಡಿದ್ದರು. ಆದರೆ ಗೌಹರ್ ಅವರ ದೇಹ ಚೆನ್ನಾಗಿದೆ ಎಂದು ಹೇಳಿದ್ದರು. ಛೇ ಎಂದು ಬರೆದುಕೊಂಡಿದ್ದಾರೆ.
'ವೀಕೆಂಡ್ ಕಾ ವಾರ್' ಸಂಚಿಕೆಯಲ್ಲಿ ಸಾಮಾಜಿಕ ಜಾಲತಾಣದ ಟ್ರೋಲರ್ ಗಳಿಗೆ ಸಲ್ಮಾನ್ ನೀಡಿದ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಸೋಫಿಯಾ ಈ ಹೇಳಿಕೆ ನೀಡಿದ್ದಾರೆ. ಸೆಲೆಬ್ರಿಟಿಗಳ ಲುಕ್ ಬಗ್ಗೆ ಆಗಾಗ್ಗೆ ನಡೆಯುವ ಟೀಕೆಗಳ ಕುರಿತು ಸಲ್ಮಾನ್ ಖಾನ್ ಮಾತನಾಡಿದ್ದರು.
ಸ್ವತಃ ತಮ್ಮ ವಯಸ್ಸು, ಕೂದಲು ಮತ್ತು ತೂಕದ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ಆ ಸಂಚಿಕೆಯಲ್ಲಿ, ಟೀಕೆಗಳಿಗೆ ಪ್ರತಿಕ್ರಿಯಿಸುವಾಗ ಅವರು ತಮ್ಮ ಟೋಪಿ ಮತ್ತು ಶರ್ಟ್ ಅನ್ನು ತೆಗೆದಿದ್ದು, ತಮ್ಮ ಲುಕ್ ಬಗ್ಗೆ ಟೀಕಿಸುವ ಪಾಪರಾಜಿಗಳಿಗೆ ಸವಾಲು ಹಾಕಿದ್ದಾರೆ.
ಟ್ರೋಲರ್‌ಗಳು ಸೆಲೆಬ್ರಿಟಿಗಳನ್ನು ಅವರ ದೇಹರಚನೆ, ತೂಕ, ನೋಟ, ಕುಟುಂಬ, ವೃತ್ತಿಜೀವನದ ವೈಫಲ್ಯ ಮತ್ತು ತಾಯ್ತನದಂತಹ ಅನೇಕ ವೈಯಕ್ತಿಕ ಜೀವನದ ಪ್ರಮುಖ ಘಟನೆಗಳನ್ನು ಗುರಿಯಾಗಿಸುತ್ತಾರೆ. ನಟಿಯರು ಕಾರಿನಿಂದ ಇಳಿಯುವಾಗ ಅಥವಾ ಕಾರು ಹತ್ತುವಾಗ ಅಸಹ್ಯಕರ ಕೋನದಲ್ಲಿ, ಹಿಂಭಾಗದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಇದನ್ನು ಯಾವ ನಟಿಯರೂ ಇಷ್ಟಪಡುವುದಿಲ್ಲ. ಕೆಲವರು ಸಮ್ಮತಿಸಬಹುದು, ಆದರೆ ಇಷ್ಟವಿಲ್ಲದವರ ಪರಿಸ್ಥಿತಿ ಏನು?’ ಎಂದು ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



