ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಎರಡನೇ ಬಾರಿಯೂ ಅರ್ಧಕ್ಕೇ ಆಟ ಮುಗಿಸಿದ ಸ್ಟಾರ್ ನಿರ್ದೇಶಕ!
Bigg Boss Kannada 13: ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಎರಡನೇ ಬಾರಿಗೆ ಬಿಗ್‌ಬಾಸ್‌ಗೆ ಪ್ರವೇಶ ಪಡೆದಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ರಿಯಾಲಿಟಿ ಶೋನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಮನೆಯಲ್ಲಿ ನಿರಂತರವಾಗಿ ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದರಿಂದ ತೀವ್ರ ದೈಹಿಕ ಆಯಾಸ ಹಾಗೂ ಕಾಲಿನ ನೋವು ಕಾಣಿಸಿಕೊಂಡಿತ್ತು. ಇದರ ಪರಿಣಾಮ ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದ ದೃಷ್ಟಿಯಿಂದ ಶೋನಲ್ಲಿ ಮುಂದುವರಿಯದಿರಲು ನಿರ್ಧರಿಸಿದ ಓಂ ಪ್ರಕಾಶ್ ರಾವ್ ಅವರು ಸೀದಾ ತಮ್ಮ ಮನೆಗೆ ಮರಳಿದ್ದಾರೆ. ಹಾಗಾಗಿ, ಅವರು ಮತ್ತೆ ಬಿಗ್ ಬಾಸ್ ಮನೆಗೆ ಮರಳುತ್ತಿಲ್ಲ ಎಂದು ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ವರದಿಗಳ ಪ್ರಕಾರ, ಈ ಹಿಂದೆ ಓಂ ಪ್ರಕಾಶ್ ರಾವ್ ಅವರಿಗೆ ಈ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತವೊಂದರಲ್ಲಿ ಕಾಲಿಗೆ ಬಲವಾದ ಪೆಟ್ಟಾಗಿತ್ತು. ಅದರಂತೆ, ಬಿಗ್ ಬಾಸ್ ಮನೆಯ ಒತ್ತಡ ಹಾಗೂ ವಿಶ್ರಮ ರಹಿತ ಆಟದಿಂದಾಗಿ ಅದೇ ಕಾಲಿನಲ್ಲಿ ಮತ್ತೆ ಊತ ಮತ್ತು ಅಸಹನೀಯ ನೋವು ಹೆಚ್ಚಾಗಿತ್ತು. ಇದರ ಪರಿಣಾಮ ಅವರನ್ನು ನಿನ್ನೆ ಬಿಗ್ ಬಾಸ್ ತಂಡವು ಅವರನ್ನು ತಕ್ಷಣವೇ ಬಿಡದಿಯ ಆರಾಧ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ, ಆರೋಗ್ಯದ ದೃಷ್ಟಿಯಿಂದ ಶೋನಲ್ಲಿ ಮುಂದುವರಿಯದಿರಲು ನಿರ್ಧರಿಸಿದ ಓಂ ಪ್ರಕಾಶ್ ರಾವ್ ಅವರು ಸೀದಾ ತಮ್ಮ ಮನೆಗೆ ಮರಳಿದ್ದಾರೆ. ಅದರಂತೆ, ಓಂ ಪ್ರಕಾಶ್ ರಾವ್ ಮನೆಯಿಂದ ಹೊರ ನಡೆದ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ಅನಾರೋಗ್ಯ ಕಾರಣದಿಂದ ಬಿಗ್ ಬಾಸ್ ಪಯಣ ನಿಲ್ಲಿಸಿದ ಓಂ ಪ್ರಕಾಶ್ ರಾವ್" ಎಂದು ತಿಳಿಸಿದ್ದಾರೆ.
ಎರಡನೇ ಬಾರಿಯೂ ಅರ್ಧಕ್ಕೆ ಔಟ್!
ವಿಶೇಷವೆಂದರೆ, ಓಂ ಪ್ರಕಾಶ್ ರಾವ್ ಅವರಿಗೆ ಇದು ಬಿಗ್ ಬಾಸ್‌ನಲ್ಲಿ ಸಿಕ್ಕ ಎರಡನೇ ಅವಕಾಶವಾಗಿತ್ತು. ಈ ಹಿಂದೆ 2016 ರಲ್ಲಿ ನಡೆದ ಬಿಗ್ ಬಾಸ್ ಕನ್ನಡ ಸೀಸನ್ 4'ರಲ್ಲೂ ಓಂ ಪ್ರಕಾಶ್ ರಾವ್ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ವಳೆ ಸ್ಪರ್ಧಿಯಾಗಿ ಅಬ್ಬರಿಸಿದ್ದ ಅವರು, ಆ ಸೀಸನ್‌ನಲ್ಲೂ ಸಹ ಇದೇ ರೀತಿ ಅನಾರೋಗ್ಯದ ಕಾರಣದಿಂದಾಗಿ ತಮ್ಮ ಆಟವನ್ನು ಅರ್ಧಕ್ಕೇ ನಿಲ್ಲಿಸಿ ಶೋನಿಂದ ಹೊರಬರಬೇಕಾಗಿ ಬಂದಿತ್ತು.
ಹೀಗಾಗಿ, ಈ ಬಾರಿ ಕಲರ್ಸ್ ಕನ್ನಡ ವಾಹಿನಿಯು ಸೀಸನ್ 13 ರಲ್ಲಿ ಅವರಿಗೆ ತಮ್ಮ ಆಟವನ್ನು ಪೂರ್ಣಗೊಳಿಸಲು ಎರಡನೇ ಚಾನ್ಸ್ ನೀಡಿತ್ತು. ಆದರೆ ದುರದೃಷ್ಟವಶಾತ್, ಹಳೆಯ ಕಾಲಿನ ಗಾಯದ ಸಮಸ್ಯೆ ಹಾಗೂ ದೈಹಿಕ ಆಯಾಸ ಮರುಕಳಿಸಿದ್ದರಿಂದ, ಈ ಬಾರಿಯೂ ಕೇವಲ ಒಂದೇ ವಾರಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಹೊರನಡೆಯುವಂತಾಯಿತು. ಒಟ್ಟಾರೆಯಾಗಿ, ಈ ಬಾರಿಯೂ ಕೇವಲ ಒಂದೇ ವಾರಕ್ಕೆ ಅವರ ಬಿಗ್ ಬಾಸ್ ಜರ್ನಿ ಮುಕ್ತಾಯಗೊಂಡಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




