ಬಾಲಿವುಡ್

Bigg Boss 20: 'ನಾನು ಸುಮ್ಮನಿದ್ದೇನೆ ಎಂದರೆ ನನ್ನ ಪ್ರಯಾಣದ ಕ್ರೆಡಿಟ್ ನೀವು ತೆಗೆದುಕೊಳ್ಳಬಹುದು ಎಂದು ಅರ್ಥವಲ್ಲ'- ಮೇರಿ ಕೋಮ್

'ನಾನು ಏನನ್ನು ಸಾಧಿಸಿದ್ದೇನೋ ಅದು ನನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ದಾರಿಯುದ್ದಕ್ಕೂ ನಾನು ಮಾಡಿದ ತ್ಯಾಗಗಳಿಂದ ಬಂದಿದೆ' ಎಂದು ಅವರು ಹೇಳಿದರು.

Bigg Boss 20: 'ನಾನು ಸುಮ್ಮನಿದ್ದೇನೆ ಎಂದರೆ ನನ್ನ ಪ್ರಯಾಣದ ಕ್ರೆಡಿಟ್ ನೀವು ತೆಗೆದುಕೊಳ್ಳಬಹುದು ಎಂದು ಅರ್ಥವಲ್ಲ'- ಮೇರಿ ಕೋಮ್
ಮೇರಿ ಕೋಮ್
Published On :

ಮುಂಬೈ: ಇತ್ತೀಚಿನ 'ಬಿಗ್ ಬಾಸ್ 20' ಫೀಡ್‌ನಲ್ಲಿ ಆರು ಬಾರಿ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೋಮ್ ತಮ್ಮ ಯಶಸ್ಸಿಗೆ ಕಾರಣರಾದ ಜನರ ಬಗ್ಗೆ ಮಾತನಾಡುತ್ತಾ, 'ಅನೇಕರು ತಾವು ರಿಂಗ್‌ಗೆ ಕಾಲಿಟ್ಟವರಲ್ಲ, ಗಾಯಗಳನ್ನು ಸಹಿಸಿಕೊಂಡವರಲ್ಲ ಅಥವಾ ತರಬೇತಿ ಮೂಲಕ ಹೋಗದಿದ್ದರೂ ಸಹ, ಅವರು 'ಮೇರಿ ಕೋಮ್ ಅನ್ನು ತಾವೇ ಸೃಷ್ಟಿಸಿದರು' ಎಂದು ಹೇಳುತ್ತಾರೆ ಎಂದರು.

'ಆ ರೀತಿ ಹಕ್ಕು ಚಲಾಯಿಸುವುದು ನಾಚಿಕೆಯಿಲ್ಲದ ಕೆಲಸ ಎಂದು ಕರೆದ ಮೇರಿ, ತನ್ನ ಸಾಧನೆಗಳು ತನ್ನದೇ ಆದ ಕಠಿಣ ಪರಿಶ್ರಮ, ಶಿಸ್ತು ಮತ್ತು ತ್ಯಾಗಗಳ ಮೂಲಕ ಬಂದಿವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

'ಮ್ಯಾಗ್ನಿಫಿಸೆಂಟ್ ಮೇರಿ' ಎಂಬ ಅಡ್ಡ ಹೆಸರಿನ ಮೇರಿ, 'ಬಹಳಷ್ಟು ಜನರು ತಾವು ಮೇರಿಯನ್ನು ಸೃಷ್ಟಿಸಿದ್ದೇವೆಂದು ಭಾವಿಸುತ್ತಾರೆ. ಆದರೆ, ಅವರು ಎಂದಿಗೂ ರಿಂಗ್‌ಗೆ ಪ್ರವೇಶಿಸಿದವರಲ್ಲ, ಗಾಯಗಳನ್ನು ಸಹಿಸಿಕೊಂಡವರಲ್ಲ ಅಥವಾ ತರಬೇತಿಯಲ್ಲಿ ಭಾಗವಹಿಸಿದವರಲ್ಲ. ಬೇರೆಯವರ ಹೋರಾಟಕ್ಕೆ ಕ್ರೆಡಿಟ್ ಪಡೆಯುವುದು ನಾಚಿಕೆಯಿಲ್ಲದ ಕೆಲಸ' ಎಂದರು.

'ನಾನು ಏನನ್ನು ಸಾಧಿಸಿದ್ದೇನೋ ಅದು ನನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ದಾರಿಯುದ್ದಕ್ಕೂ ನಾನು ಮಾಡಿದ ತ್ಯಾಗಗಳಿಂದ ಬಂದಿದೆ' ಎಂದು ಅವರು ಹೇಳಿದರು.

ಈಮಧ್ಯೆ, ಇಂದಿನ ಜಗತ್ತಿನಲ್ಲಿ ಮೌನವನ್ನು ದೌರ್ಬಲ್ಯವೆಂದು ತಪ್ಪಾಗಿ ಗ್ರಹಿಸಲಾಗುತ್ತದೆ ಎಂದು ರೋಹೆದ್ ಹೇಳಿದರು. ಜನರು ಯಾರೊಬ್ಬರ ಮೇಲೆ ನಿಯಂತ್ರಣ ಹೊಂದಿದ್ದಾರೆಂದು ಭಾವಿಸುತ್ತಾರೆ. ಏಕೆಂದರೆ, ಆ ವ್ಯಕ್ತಿಯು ಮೌನವಾಗಿರಲು ಆಯ್ಕೆ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಮೌನವು ತಾಳ್ಮೆ ಮತ್ತು ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ ಎಂದರು.

ಬಿಗ್ ಬಾಸ್ ಹಿಂದಿ ರಿಯಾಲಿಟಿ ಟೆಲಿವಿಷನ್ ಕಾರ್ಯಕ್ರಮವಾಗಿದ್ದು, ಅದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದು ಬಿಗ್ ಬ್ರದರ್‌ನ ಡಚ್ ಸ್ವರೂಪವನ್ನು ಆಧರಿಸಿದೆ. 20ನೇ ಆವೃತ್ತಿ ಸೆಪ್ಟೆಂಬರ್ 6 ರಂದು ಪ್ರಾರಂಭವಾಯಿತು.

ಬಿಗ್ ಬಾಸ್ ಹಿಂದಿ 20ರಲ್ಲಿ ಎಂಸಿ ಮೇರಿ ಕೋಮ್, ಕನಿಕಾ ಮಾನ್, ಮಹಿ ವಿಜ್, ಕುಶಾಲ್ ತನ್ವರ್, ಅಮನ್ ಗಾಂಧಿ, ಇಶಾ ರಿಖಿ, ಆರಿಶ್ಫಾ ಖಾನ್, ಖಾಜಿ ತೌಕೀರ್, ಆಸಿಫ್ ಖಾನ್, ಆಮ್ರಪಾಲಿ ದುಬೆ, ರಿತಿ ತಿವಾರಿ, ಉದಿತಿ ಸಿಂಗ್, ತನ್ಮಯ್ ಸಿಂಗ್ ಅಲಿಯಾಸ್ ScoutOP, ರೋಹದ್ ಖಾನ್, ಯಂಗ್ ಡಿಎಸ್‌ಎ ಮತ್ತು ಲವ್ ಗಿಲ್ ಅಭ್ಯರ್ಥಿಗಳಾಗಿ ಪಾಲ್ಗೊಂಡಿದ್ದಾರೆ.

ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ಆರು ಬಾರಿ ಗೆದ್ದ ಏಕೈಕ ಮಹಿಳೆ ಮೇರಿ ಕೋಮ್ ಆಗಿದ್ದು, ಮೊದಲ ಏಳು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿಯೊಂದರಲ್ಲೂ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಆಗಿದ್ದಾರೆ ಮತ್ತು ಎಂಟು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದ ಏಕೈಕ ಬಾಕ್ಸರ್ ಕೂಡ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.