ಸಿನಿಮಾ ಸುದ್ದಿ

Bigg Boss Kannada 13: ವೈಲ್ಡ್ ಕಾರ್ಡ್‌ ಮೂಲಕ ಮೂವರ ಎಂಟ್ರಿ; ಬದಲಾಗುತ್ತಾ ಆಟದ ಲೆಕ್ಕಾಚಾರ..?

ಈ ಶೋನಲ್ಲಿ ಅವರು ಮೊದಲ ರನ್ನರ್‌ಅಪ್ ಆಗಿದ್ದರು. ಇದೀಗ ಬಿಗ್‌ಬಾಸ್ ಮನೆಯ ಆಟಕ್ಕೆ ಗಾನವಿ ಪ್ರವೇಶಿಸುತ್ತಿದ್ದು, ಅವರ ಆಟದ ಶೈಲಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

Bigg Boss Kannada 13: ವೈಲ್ಡ್ ಕಾರ್ಡ್‌ ಮೂಲಕ ಮೂವರ ಎಂಟ್ರಿ; ಬದಲಾಗುತ್ತಾ ಆಟದ ಲೆಕ್ಕಾಚಾರ..?
ಬಿಗ್ ಬಾಸ್
Published On :

ಬೆಂಗಳೂರು: ‘ಬಿಗ್‌ಬಾಸ್ ಕನ್ನಡ 13’ರ ಆಟ ದಿನದಿಂದ ದಿನಕ್ಕೆ ರೋಚಕವಾಗುತ್ತಿದ್ದು, ಇದೀಗ ‘ದೊಡ್ಮನೆ’ಗೆ ಮೂವರು ಹೊಸ ಸ್ಪರ್ಧಿಗಳ ಪ್ರವೇಶವಾಗಿದೆ.

ಶೋ ಆರಂಭವಾಗಿ ನಾಲ್ಕು ವಾರಗಳು ಕಳೆದಿರುವ ಬೆನ್ನಲ್ಲೇ ವೈಲ್ಡ್ ಕಾರ್ಡ್ ಮೂಲಕ ಹೊಸ ಮುಖಗಳು ಮನೆಯೊಳಗೆ ಕಾಲಿಡುತ್ತಿದ್ದು, ಇದರಿಂದ ಸ್ಪರ್ಧಿಗಳ ನಡುವಿನ ಆಟ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ.

‘ದೊಡ್ಮನೆ’ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿರುವ ಮೂವರ ಪೈಕಿ ಘಾಟಿ ಗಾನವಿ ಕೂಡ ಒಬ್ಬರಾಗಿದ್ದಾರೆ. ‘ಹಳ್ಳಿ ಪವರ್’ ರಿಯಾಲಿಟಿ ಶೋ ಮೂಲಕ ಕರುನಾಡಿನ ಮನೆ-ಮನ ಗೆದ್ದಿರುವ ಗಾನವಿ, ತಮ್ಮ ನೇರ ಮಾತು, ವಾಗ್ವಾದ ಹಾಗೂ ಟಾಸ್ಕ್‌ಗಳಲ್ಲಿ ತೋರಿದ ಸಾಮರ್ಥ್ಯದಿಂದ ಗಮನ ಸೆಳೆದಿದ್ದರು.

ಈ ಶೋನಲ್ಲಿ ಅವರು ಮೊದಲ ರನ್ನರ್‌ಅಪ್ ಆಗಿದ್ದರು. ಇದೀಗ ಬಿಗ್‌ಬಾಸ್ ಮನೆಯ ಆಟಕ್ಕೆ ಗಾನವಿ ಪ್ರವೇಶಿಸುತ್ತಿದ್ದು, ಅವರ ಆಟದ ಶೈಲಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ನಟಿ, ಮಾಡೆಲ್ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಸೋನಿಕಾ ಗೌಡ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ‘ದೊಡ್ಮನೆ’ ಪ್ರವೇಶಿಸಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸೋನಿಕಾ, ‘ಶತಾಯ ಗತಾಯ’, ‘ನಾನೇ ರಾಜ’ ಹಾಗೂ ‘ಅಂದಾಜ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್‌ಬಾಸ್ ಮನೆಯಲ್ಲಿನ ವಿಭಿನ್ನ ವ್ಯಕ್ತಿತ್ವಗಳ ನಡುವೆ ಸೋನಿಕಾ ಹೇಗೆ ಹೊಂದಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹಾಸ್ಯ ನಟ ಹಾಗೂ ಯೂಟ್ಯೂಬರ್ ಪ್ರಶಾಂತ್ ಗೌಡ ಎಂಟ್ರಿ ಕೊಡಲಿದ್ದಾರೆ.

ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಸೀಸನ್ 1, 2 ಹಾಗೂ 3ರಲ್ಲಿ ಕಾಣಿಸಿಕೊಂಡಿದ್ದ ಪ್ರಶಾಂತ್, ‘ಕ್ವಾಟ್ಲೆ ಕಿಚನ್’ ಮೂಲಕವೂ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳ ಅನುಭವ ಹೊಂದಿರುವ ಪ್ರಶಾಂತ್ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಇದೀಗ ‘ಬಿಗ್‌ಬಾಸ್’ ಮನೆಯ ವ್ಯಕ್ತಿತ್ವಗಳ ಆಟದಲ್ಲಿ ಯಾವ ರೀತಿಯ ತಂತ್ರ ಅನುಸರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ, ನಾಲ್ಕು ವಾರಗಳ ಆಟದ ಬಳಿಕ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ‘ದೊಡ್ಮನೆ’ಯ ಆಟಕ್ಕೆ ಹೊಸ ತಿರುವು ಸಿಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.