ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಲ್ಲೂ ಇರಬಹುದು ನಕಲಿ ಆ್ಯಪ್: ಬ್ಯಾಂಕ್ ಖಾತೆ ಖಾಲಿಯಾಗುವ ಮುನ್ನ ತಕ್ಷಣ ಹೀಗೆ ಡಿಲೀಟ್ ಮಾಡಿ!
ಫೋನ್‌ನಲ್ಲಿ ಒಂದು ಸಣ್ಣ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಕಾಲವಿದು. ಅಸಲಿ ಆ್ಯಪ್‌ಗಳಂತೆಯೇ ಕಾಣುವ ನಕಲಿ ಲೋನ್, ಗೇಮಿಂಗ್ ಹೆಸರಿನ ಆ್ಯಪ್‌ಗಳು ಬಳಕೆದಾರರ ಕಣ್ತಪ್ಪಿಸಿ ಫೋನ್ ಪ್ರವೇಶಿಸುತ್ತಿವೆ. ಹಾಗಾಗಿ, ಈ ಆ್ಯಪ್‌ಗಳನ್ನು ಗುರುತಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Beware Android Users: ಇತ್ತೀಚೆಗೆ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ನಕಲಿ ಆ್ಯಪ್ ಗಳೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ಲೇ ಸ್ಟೋರ್ ನಲ್ಲಿರುವಂತೆಯೇ ಕಾಣುವ ನಕಲಿ ಲೋನ್ ಆ್ಯಪ್, ಗೇಮ್ ಆ್ಯಪ್ ಅಥವಾ ಸರ್ಕಾರಿ ಯೋಜನೆಯ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು. ಈ ವಂಚನೆ ಹೇಗೆ ನಡೆಯುತ್ತದೆ ಮತ್ತು ನಿಮ್ಮ ಮೊಬೈಲ್ ನಿಂದ ಅದನ್ನು ಹೊರತೆಗೆಯುವುದು ಹೇಗೆ ಎಂದು ತಿಳಿಯೋಣ.
ನಕಲಿ ಆ್ಯಪ್ ಗಳಿಂದ ವಂಚನೆ ಹೇಗೆ ನಡೆಯುತ್ತದೆ?
ಹ್ಯಾಕರ್ ಗಳು ಮೊದಲು ಅಸಲಿ ಆ್ಯಪ್ ನಂತೆಯೇ ಹೆಸರು, ಲೋಗೋ ಇರುವ ನಕಲಿ ಆ್ಯಪ್ ತಯಾರಿಸುತ್ತಾರೆ. ಇದನ್ನು ವಾಟ್ಸಾಪ್, ಟೆಲಿಗ್ರಾಮ್ ಲಿಂಕ್ ಮೂಲಕ ಅಥವಾ ಪ್ಲೇ ಸ್ಟೋರ್ ನಲ್ಲೇ ಅಪ್ ಲೋಡ್ ಮಾಡುತ್ತಾರೆ. ನೀವು ಆ ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಇನ್ ಸ್ಟಾಲ್ ಮಾಡಿದ ತಕ್ಷಣ ಅದು ನಿಮ್ಮ ಫೋನ್ ನಲ್ಲಿ ಹಲವು ಪರ್ಮಿಷನ್ ಕೇಳುತ್ತದೆ. SMS, ಕಾಂಟ್ಯಾಕ್ಟ್, ಕ್ಯಾಮೆರಾ, ಫೈಲ್ ಗಳಿಗೆ ಅನುಮತಿ ಕೊಟ್ಟ ತಕ್ಷಣ ನಿಮ್ಮ ಫೋನ್ ನ ಸಂಪೂರ್ಣ ನಿಯಂತ್ರಣ ಹ್ಯಾಕರ್ ಕೈಗೆ ಹೋಗುತ್ತದೆ.
ಈ ಆ್ಯಪ್ ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ. ನಿಮ್ಮ ಬಂದ OTP ಗಳನ್ನು ಹ್ಯಾಕರ್ ಗೆ ಕಳುಹಿಸುತ್ತವೆ, ಬ್ಯಾಂಕಿಂಗ್ ಪಾಸ್ ವರ್ಡ್ ಕದಿಯುತ್ತವೆ ಮತ್ತು ನಿಮ್ಮ ಫೋಟೋ, ವಿಡಿಯೋಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಕೂಡ ಮಾಡುತ್ತವೆ. ಕೆಲವು ಆ್ಯಪ್ ಗಳು ಫೋನ್ ನಲ್ಲಿ ಕಾಣಿಸದಂತೆ ಅಡಗಿಕೊಳ್ಳುತ್ತವೆ.
ಹಾಗಾದ್ರೆ, ಈ ನಕಲಿ ಆ್ಯಪ್ ಅನ್ನು ಗುರುತಿಸುವುದು ಹೇಗೆ?
ಆ್ಯಪ್ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರುತ್ತದೆ. ಉದಾಹರಣೆಗೆ WhatsApp ಬದಲು WatsApp.
ಡೌನ್ ಲೋಡ್ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ ಮತ್ತು ರಿವ್ಯೂಗಳಲ್ಲಿ ಹೆಚ್ಚಾಗಿ ದೂರುಗಳಿರುತ್ತವೆ.
ಆ್ಯಪ್ ಓಪನ್ ಮಾಡಿದ ತಕ್ಷಣ ಅನಗತ್ಯವಾಗಿ ಎಲ್ಲಾ ಪರ್ಮಿಷನ್ ಕೇಳುತ್ತದೆ.
ಡೆವಲಪರ್ ಹೆಸರು ಅಪರಿಚಿತವಾಗಿರುತ್ತದೆ.
ಮೊಬೈಲ್ ನಿಂದ ಡಿಲೀಟ್ ಮಾಡೋದು ಹೇಗೆ?
ಹಂತ 1: ತಕ್ಷಣವೇ ನಿಮ್ಮ ಫೋನ್ ಅನ್ನು ಫ್ಲೈಟ್ ಮೋಡ್ ಗೆ ಹಾಕಿ, ಇಂಟರ್ನೆಟ್ ಆಫ್ ಮಾಡಿ.
ಹಂತ 2: ಸೆಟ್ಟಿಂಗ್ಸ್ ಗೆ ಹೋಗಿ Apps ಅಥವಾ Application Manager ಓಪನ್ ಮಾಡಿ. ನಿಮಗೆ ಅನುಮಾನ ಬಂದ ಆ್ಯಪ್ ಅನ್ನು ಹುಡುಕಿ. ಅಲ್ಲಿ Uninstall ಬಟನ್ ಡಿಸೇಬಲ್ ಆಗಿದ್ದರೆ ಅದು Device Admin permission ತೆಗೆದುಕೊಂಡಿದೆ ಎಂದರ್ಥ.
ಹಂತ 3: Settings > Security > Device Admin Apps ಗೆ ಹೋಗಿ ಆ ನಕಲಿ ಆ್ಯಪ್ ನ ಟಿಕ್ ತೆಗೆದು Deactivate ಮಾಡಿ. ನಂತರ ಮತ್ತೆ ಹೋಗಿ Uninstall ಮಾಡಿ.
ಹಂತ 4: ಎಲ್ಲಾ ಆ್ಯಪ್ ಗಳನ್ನು ತೆಗೆದ ನಂತರ ನಿಮ್ಮ ಫೋನ್ ನಲ್ಲಿ Google Play Protect ನಿಂದ ಸ್ಕ್ಯಾನ್ ಮಾಡಿ.
ಹಂತ 5: ನಿಮ್ಮ ಎಲ್ಲಾ ಬ್ಯಾಂಕಿಂಗ್ ಪಾಸ್ ವರ್ಡ್, UPI ಪಿನ್ ಅನ್ನು ತಕ್ಷಣ ಬದಲಾಯಿಸಿ.
ಒಟ್ಟಾರೆಯಾಗಿ, ಯಾವುದೇ ಆ್ಯಪ್ ಅನ್ನು ವಾಟ್ಸಾಪ್ ಲಿಂಕ್ ಮೂಲಕ ಡೌನ್ ಲೋಡ್ ಮಾಡಬೇಡಿ. ಕೇವಲ ಅಧಿಕೃತ Google Play Store ನಿಂದ ಮಾತ್ರ ಡೌನ್ ಲೋಡ್ ಮಾಡಿ. ಆ್ಯಪ್ ಇನ್ ಸ್ಟಾಲ್ ಮಾಡುವಾಗ ಅದು ಕೇಳುವ ಪರ್ಮಿಷನ್ ಗಳನ್ನು ಗಮನಿಸಿ. ಒಂದು ಟಾರ್ಚ್ ಆ್ಯಪ್ ಕಾಂಟ್ಯಾಕ್ಟ್ ಪರ್ಮಿಷನ್ ಕೇಳಿದರೆ ಅದು ನಕಲಿ ಎಂದು ಅರ್ಥ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




