Phone Storage ಫುಲ್ ಆಗಿದ್ಯಾ? ಯಾವುದೇ ಆ್ಯಪ್ ಡಿಲೀಟ್ ಮಾಡದೆ ಸ್ಟೋರೇಜ್ ಖಾಲಿ ಮಾಡುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ
ಫೋನ್ ನಲ್ಲಿ ಒಂದು ಫೋಟೋ ತೆಗೆಯಲು ಹೋದರೂ ಸ್ಟೋರೇಜ್ ಫುಲ್ ಎಂದು ಮೆಸೇಜ್ ಬರುತ್ತಿದೆಯಾ. ಹೊಸ ಆ್ಯಪ್ ಡೌನ್ ಲೋಡ್ ಮಾಡಲು ಆಗುತ್ತಿಲ್ಲವೇ. ಆ್ಯಪ್ ಗಳನ್ನು ಡಿಲೀಟ್ ಮಾಡಲು ಮನಸ್ಸು ಬರುತ್ತಿಲ್ಲ ಎಂದರೆ ಚಿಂತೆ ಬೇಡ. ಯಾವುದೇ ಆ್ಯಪ್ ಅನ್ ಇನ್ ಸ್ಟಾಲ್ ಮಾಡದೆ ಸ್ಟೋರೇಜ್ ಖಾಲಿ ಮಾಡಲು ಸುಲಭ ಮಾರ್ಗ ಇಲ್ಲಿದೆ...

Phone Storage Problem: ಫೋಟೋ ತೆಗೆಯುವಾಗಲೋ ಅಥವಾ ಹೊಸ ಆ್ಯಪ್ ಡೌನ್‌ಲೋಡ್ ಮಾಡುವಾಗಲೋ ಇದ್ದಕ್ಕಿದ್ದಂತೆ ಸ್ಟೋರೇಜ್ ಫುಲ್ ಎಂಬ ಸಂದೇಶ ಬಂದು ಕಿರಿಕಿರಿ ಉಂಟುಮಾಡಿದೆಯಾ? ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರನಿಗೂ ಈ ಸಮಸ್ಯೆ ಹೊಸದೇನಲ್ಲ. ಆದರೆ, ಜಾಗ ಸಾಲುತ್ತಿಲ್ಲ ಎಂದು ನಿಮ್ಮಿಷ್ಟದ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಅಥವಾ ಸುಂದರ ಫೋಟೋಗಳನ್ನು ಡಿಲೀಟ್ ಮಾಡುವ ನಿರ್ಧಾರಕ್ಕೆ ಬರುವ ಮುನ್ನ ಸ್ವಲ್ಪ ಯೋಚಿಸಿ. ನಿಮ್ಮ ಮೊಬೈಲ್‌ನಲ್ಲಿರುವ ಪ್ರಮುಖ ಡೇಟಾಗೆ ಕಿಂಚಿತ್ತೂ ಧಕ್ಕೆಯಾಗದಂತೆ, ಕೇವಲ ಕೆಲವೇ ಕೆಲವು ಸಿಂಪಲ್ ಸೆಟ್ಟಿಂಗ್ಸ್ ಬದಲಾಯಿಸುವ ಮೂಲಕ ಜಾಗವನ್ನು ಮುಕ್ತಗೊಳಿಸಲು ಸಾಧ್ಯವಿದೆ. ಅದು ಹೇಗೆ ಮತ್ತು ಅದಕ್ಕಾಗಿ ನೀವು ಮಾಡಬೇಕಾದ ಸರಳ ಕೆಲಸಗಳೇನು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಕ್ಯಾಶ್ ಡೇಟಾ ಕ್ಲಿಯರ್ ಮಾಡಿ ಇದು ಮೊದಲ ಕೆಲಸ
ಪ್ರತಿ ಆ್ಯಪ್ ಬಳಸಿದಾಗ ಅದರ ಕ್ಯಾಶ್ ಡೇಟಾ ಫೋನ್ ನಲ್ಲಿ ಸಂಗ್ರಹವಾಗುತ್ತದೆ. ಇದು ಕೆಲವೊಮ್ಮೆ 2 ರಿಂದ 3 GB ವರೆಗೆ ಆಗುತ್ತದೆ. ಇದನ್ನು ಡಿಲೀಟ್ ಮಾಡಿದರೆ ನಿಮ್ಮ ವೈಯಕ್ತಿಕ ಡೇಟಾ ಡಿಲೀಟ್ ಆಗುವುದಿಲ್ಲ. ಇದಕ್ಕಾಗಿ ಸೆಟ್ಟಿಂಗ್ಸ್ ಗೆ ಹೋಗಿ ಸ್ಟೋರೇಜ್ ಮೇಲೆ ಕ್ಲಿಕ್ ಮಾಡಿ, ನಂತರ ಆ್ಯಪ್ಸ್ ಆಯ್ಕೆ ಮಾಡಿ, ಹೆಚ್ಚು ಸ್ಟೋರೇಜ್ ತೆಗೆದುಕೊಂಡಿರುವ ಆ್ಯಪ್ ಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಮ್, ಕ್ರೋಮ್ ನ ಕ್ಯಾಶ್ ಕ್ಲಿಯರ್ ಮಾಡಿ.
ವಿಧಾನ: ನಿಮ್ಮ ಫೋನಿನ Settings -> Apps -> Manage Apps ಗೆ ಹೋಗಿ. ಹೆಚ್ಚು ಬಳಸುವ ಆ್ಯಪ್ ಆಯ್ದುಕೊಂಡು, Storage ಕ್ಲಿಕ್ ಮಾಡಿ 'Clear Cache' ನೀಡಿ.
ವಾಟ್ಸಾಪ್ ಗುಪ್ತ ಸ್ಟೋರೇಜ್ ಖಾಲಿ ಮಾಡಿ
ಫೋನ್ ಸ್ಟೋರೇಜ್ ಫುಲ್ ಆಗಲು ಪ್ರಮುಖ ಕಾರಣ ವಾಟ್ಸಾಪ್. ವಾಟ್ಸಾಪ್ ನಲ್ಲಿ ಬಂದ ಅನಗತ್ಯ ವಿಡಿಯೋ, ಫೋಟೋಗಳು ಸ್ಟೋರೇಜ್ ತುಂಬಿಸುತ್ತವೆ. ವಾಟ್ಸಾಪ್ ಓಪನ್ ಮಾಡಿ ಸೆಟ್ಟಿಂಗ್ಸ್, ನಂತರ ಸ್ಟೋರೇಜ್ ಅಂಡ್ ಡೇಟಾ, ನಂತರ ಮ್ಯಾನೇಜ್ ಸ್ಟೋರೇಜ್ ಗೆ ಹೋಗಿ. ಅಲ್ಲಿ 5 MB ಗಿಂತ ದೊಡ್ಡ ಫೈಲ್ ಗಳು ಮತ್ತು ಪದೇ ಪದೇ ಫಾರ್ವರ್ಡ್ ಆದ ಫೈಲ್ ಗಳನ್ನು ಒಂದೇ ಕ್ಲಿಕ್ ನಲ್ಲಿ ಡಿಲೀಟ್ ಮಾಡಬಹುದು.
ಗೂಗಲ್ ಫೋಟೋಸ್ ನಲ್ಲಿ ಬ್ಯಾಕಪ್ ಮಾಡಿ
ಗ್ಯಾಲರಿಯಲ್ಲಿರುವ ಫೋಟೋ, ವಿಡಿಯೋಗಳೇ ಹೆಚ್ಚು ಜಾಗ ತೆಗೆದುಕೊಳ್ಳುತ್ತವೆ. ಗೂಗಲ್ ಫೋಟೋಸ್ ಆ್ಯಪ್ ನಲ್ಲಿ ಎಲ್ಲಾ ಫೋಟೋಗಳನ್ನು ಬ್ಯಾಕಪ್ ಮಾಡಿ. ಬ್ಯಾಕಪ್ ಆದ ನಂತರ ಗೂಗಲ್ ಫೋಟೋಸ್ ನಲ್ಲಿರುವ ಫ್ರೀ ಅಪ್ ಸ್ಪೇಸ್ ಆಯ್ಕೆಯನ್ನು ಒತ್ತಿದರೆ ಫೋನ್ ನಲ್ಲಿರುವ ಎಲ್ಲಾ ಫೋಟೋಗಳು ಡಿಲೀಟ್ ಆಗಿ ಕ್ಲೌಡ್ ನಲ್ಲಿ ಸುರಕ್ಷಿತವಾಗಿರುತ್ತವೆ. ಇದರಿಂದ ಒಂದೇ ಬಾರಿಗೆ 10 ರಿಂದ 15 GB ಜಾಗ ಖಾಲಿ ಆಗುತ್ತದೆ.
ಡೌನ್ ಲೋಡ್ಸ್ ಮತ್ತು ಟೆಲಿಗ್ರಾಮ್ ಫೋಲ್ಡರ್ ಚೆಕ್ ಮಾಡಿ
ನಾವು ಡೌನ್ ಲೋಡ್ ಮಾಡಿದ ಫೈಲ್ ಗಳು ಡೌನ್ ಲೋಡ್ಸ್ ಫೋಲ್ಡರ್ ನಲ್ಲಿ ಹಾಗೆ ಉಳಿದಿರುತ್ತವೆ. ಫೈಲ್ ಮ್ಯಾನೇಜರ್ ಗೆ ಹೋಗಿ ಡೌನ್ ಲೋಡ್ಸ್ ಫೋಲ್ಡರ್ ಕ್ಲಿಯರ್ ಮಾಡಿ. ಅದೇ ರೀತಿ ಟೆಲಿಗ್ರಾಮ್ ಬಳಸುವವರ ಫೋನ್ ನಲ್ಲಿ ಟೆಲಿಗ್ರಾಮ್ ಸಿನಿಮಾಗಳು GB ಗಟ್ಟಲೆ ಜಾಗ ತೆಗೆದುಕೊಂಡಿರುತ್ತದೆ. ಅದನ್ನೂ ಕ್ಲಿಯರ್ ಮಾಡಿ.
ಲೈಟ್ ವರ್ಷನ್ ಆ್ಯಪ್ ಬಳಸಿ
ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಂತಹ ಆ್ಯಪ್ ಗಳು 500 MB ಗಿಂತ ಹೆಚ್ಚು ಜಾಗ ತೆಗೆದುಕೊಳ್ಳುತ್ತವೆ. ಅವುಗಳ ಬದಲು ಫೇಸ್ ಬುಕ್ ಲೈಟ್, ಇನ್ ಸ್ಟಾಗ್ರಾಮ್ ಲೈಟ್ ಬಳಸಿದರೆ ಅರ್ಧಕ್ಕಿಂತ ಹೆಚ್ಚು ಸ್ಟೋರೇಜ್ ಉಳಿತಾಯವಾಗುತ್ತದೆ.
ಈ ಎಲ್ಲಾ ಟ್ರಿಕ್ಸ್ ಮಾಡಿದರೂ ಸ್ಟೋರೇಜ್ ಫುಲ್ ಎಂದರೆ ಗೂಗಲ್ ಫೈಲ್ಸ್ ಆ್ಯಪ್ ಡೌನ್ ಲೋಡ್ ಮಾಡಿ. ಅದು ತಾನಾಗಿಯೇ ಅನಗತ್ಯ ಫೈಲ್ ಗಳನ್ನು ಗುರುತಿಸಿ ಡಿಲೀಟ್ ಮಾಡಲು ಸಹಾಯ ಮಾಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




